HOME » NEWS » Coronavirus-latest-news » AMITABH BACHCHAN CONTRIBUTED RS 2 CRORE TO A COVID 19 CARE FACILITY IN DELHI SESR

ಕೋವಿಡ್​ ಸಂಕಷ್ಟ: ಎರಡು ಕೋಟಿ ರೂ ನೆರವು ನೀಡಿದ ಅಮಿತಾಬ್​ ಬಚ್ಚನ್

ನಾವು ಮಾಡಿರುವ ಸಹಾಯವನ್ನು ಪ್ರಚಾರ ಪಡೆಯುವುದು, ಸಾರ್ವಜನಿಕವಾಗಿ ಮಾತನಾಡುವುದು ಮುಜುಗರ ನೀಡುತ್ತದೆ. ಇದೇ ಹಿನ್ನಲೆಯಲ್ಲಿ ತಮ್ಮ ಚಾರಿಟಬಲ್​​ ಸೇವೆಯನ್ನು ಈವರೆಗೂ ಬಹಿರಂಗ ಪಡಿಸಿಲ್ಲ

news18-kannada
Updated:May 10, 2021, 4:27 PM IST
ಕೋವಿಡ್​ ಸಂಕಷ್ಟ: ಎರಡು ಕೋಟಿ ರೂ ನೆರವು ನೀಡಿದ ಅಮಿತಾಬ್​ ಬಚ್ಚನ್
ABHISHEK BACCHAN- AMITABH BACCHAN
  • Share this:
ಸೋಂಕಿನಿಂದ ಸರಿಯಾದ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಸಿಗದೇ ಜನರು ತತ್ತರಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಬಹಳ ಮುಖ್ಯ. ಹೀಗಾಗಿ ಅನೇಕ ಉದ್ಯಮಿಗಳು ಕೇಂದ್ರ ಸರ್ಕಾರಕ್ಕೆ ಪಿಎಂ ಕೇರ್​ ನಿಧಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ. ಇನ್ಪೋಸಿಸ್​ ಫೌಂಡೇಶನ್​ ಮುಖ್ಯಸ್ಥೆ 100 ಕೋಟಿ ದೇಣಿಗೆ ನೀಡಿದ್ದಾರೆ. ಇನ್ನು ವಿರುಷ್ಕಾ ದಂಪತಿಗಳು ಎರಡು ಕೋಟಿ ನೆರವು ನೀಡಿದ್ದಾರೆ, ರಿಲಯನ್ಸ್​, ಟಾಟಾ ಸಂಸ್ಥೆಗಳಿಂದ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್​ ಉತ್ಪಾದನೆ ಮಾಡುವ ಮೂಲಕ ನೆರವು ನೀಡಲಾಗುತ್ತಿದೆ. ಈ ನಡುವೆ ಬಾಲಿವುಡ್​ ದೊಡ್ಡ ಮಂದಿಗಳು ಮಾತ್ರ ಯಾವುದೇ ಸಹಾಯಕ್ಕೆ ಮುಂದಾಗುವುದಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಸೋನ್​ ಸೂದ್​ ಕೆಲವರನ್ನು ಹೊರತು ಪಡಿಸಿದರೆ, ಅನೇಕ ದೊಡ್ಡ ದೊಡ್ಡ ನಟರು ಜನರ ಸಹಾಯಕ್ಕೆ ಸ್ಪಂದಿಸುವುದಿಲ್ಲ ಎಂಬ ಕೂಗು ಕೇಳಿಬಂದಿತು.

ಈ ಎಲ್ಲಾ ಟೀಕೆಗಳ ಕುರಿತು ತಮ್ಮ ಬ್ಲಾಗ್​ನಲ್ಲಿ ಬಿಗ್​ ಬಿ ಅಮಿತಾಬ್​ ಬಚ್ಚನ್​ ಟೀಕಾಗಾರರಿಗೆ  ಉತ್ತರಿಸಿದ್ದಾರೆ. ಈ ವೇಳೆ ಅವರು ದೆಹಲಿಯ ಕೋವಿಡ್​ 19 ವಿರುದ್ಧದ ಹೋರಾಟಕ್ಕೆ 2 ಕೋಟಿ ನೀಡಿರುವುದಾಗಿ ಕೂಡ ತಿಳಿಸಿದ್ದಾರೆ. ನಾವು ಮಾಡಿರುವ ಸಹಾಯವನ್ನು ಪ್ರಚಾರ ಪಡೆಯುವುದು. ಸಾರ್ವಜನಿಕವಾಗಿ ಮಾತನಾಡುವುದು ಮುಜುಗರ ನೀಡುತ್ತದೆ. ಇದೇ ಹಿನ್ನಲೆಯಲ್ಲಿ ತಮ್ಮ ಚಾರಿಟಬಲ್​​ ಸೇವೆಯನ್ನು ಈವರೆಗೂ ಬಹಿರಂಗ ಪಡಿಸಿಲ್ಲ ಎಂದಿದ್ದಾರೆ.

ಜನರಿಗೆ ಸಹಾಯ ಮಾಡುತ್ತಿಲ್ಲ ಎಂದು ನನಗೆ ಮತ್ತು ನನ್ನ ಕುಟುಂಬಕ್ಕೆ ಸಾಕಷ್ಟು ಕೆಟ್ಟ ಕಮೆಂಟ್​ ಗಳನ್ನು ಮಾಡುತ್ತಿದ್ದಾರೆ. ಇದು ನಮಗೆ ಹೊಸತಲ್ಲ. ಈ ಹಿಂದಿನಿಂದಲೂ ಈ ರೀತಿಯ ಕೆಟ್ಟ ಟೀಕೆಗಳನ್ನು ಎದುರಿಸುತ್ತಿದ್ದೇವೆ ಎಂದಿದ್ದಾರೆ.

ಇದೇ ವೇಳೆ ತಮ್ಮ ಚಾರಿಟಬಲ್​ ಸೇವೆಗಳನ್ನು ಪಟ್ಟಿ ಮಾಡುವ ಮೂಲಕ ತಮ್ಮ ವಿರುದ್ಧ ಕೀಳು ಮಟ್ಟದ ಕಮೆಂಟ್​ ಮಾಡುತ್ತಿದ್ದವರ ಬಾಯಿಯನ್ನು ಕೂಡ ಮುಚ್ಚಿಸಿದ್ದಾರೆ. ತಮ್ಮ ವೈಯಕ್ತಿಯ ಹಣದಿಂದ 1500 ರೈತರ ಬ್ಯಾಂಕ್​ ಸಾಲ ತೀರಿಸಲಾಗಿದೆ. ಈ ಮೂಲಕ ರೈತರ ಆತ್ಮಹತ್ಯೆಯನ್ನು ತಡೆದಿದ್ದೇವೆ. ಕಳೆದ ವರ್ಷ ದೇಶದ ನಾಲ್ಕು ಲಕ್ಷ ದಿನಗೂಲಿ ಮಾಡುವವರಿಗೆ ಒಂದು ತಿಂಗಳ ಕಾಲ ಆಹಾರವನ್ನು ಒದಗಿಸಲಾಗಿದೆ, ಜನರದಲ್ಲಿ ಸುಮಾರು 5000 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ಹಾಗೂ ಪೊಲೀಸ್​ ಕರ್ತವ್ಯ ನಿರ್ವಹಿಸುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಪಿಪಿಇ ಕಿಟ್​, ಮಾಸ್​ ನೀಡಲಾಗಿದೆ.

ಇದನ್ನು ಓದಿ: ಕೋವಿಡ್​ ಸಂಕಷ್ಟ: 2 ಕೋಟಿ ನೆರವು ನೀಡಿದ ಅನುಷ್ಕಾ ಶರ್ಮಾ-ವಿರಾಟ್​ ಕೊಹ್ಲಿ..!

ಉತ್ತರ ಪ್ರದೇಶ ಮತ್ತು ಬಿಹಾರದ ವಲಸಿಗರಿಗಾಗಿ 30 ಬಸ್​ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಇವರ ರಾತ್ರಿ ಪ್ರಯಾಣದ ಸಮಯದಲ್ಲಿ ಊಟ ಮತ್ತು ನೀರನ್ನು ಪೂರೈಸಲಾಗಿದೆ. ಮುಂಬೈನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದ 2800 ವಲಸಿಗರಿಗೆ ಇಡೀ ರೈಲನ್ನೇ ಕಾದಿರಿಸಲಾಯಿತು. ಬಿಹಾರಕ್ಕೆ 180 ವಲಸಿಗರನ್ನು ತಲುಪಿಸಲು ಮೂರು ಇಂಡಿಗೋ ಏರ್​ಲೈನ್​ ಬುಕ್​ ಮಾಡಲಾಯಿತು. ಅಲ್ಲದೇ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರಕ್ಕೂ ಕೂಡ ವಿಮಾನದ ಮೂಲಕ ವಲಸಿಗರನ್ನು ಕಳುಹಿಸುವ ಯತ್ನ ನಡೆಸಲಾಯಿತು.

ಬೃಹನ್​ ಮುಂಬೈನ್​ ಮುನ್ಸಿಪಲ್​​ ಕಾರ್ಪೋರೇಷನ್​ಗಾಗಿ 20 ವೆಂಟಿಲೇಟರ್​ ವ್ಯವಸ್ಥೆ ಮಾಡಲಾಗಿದೆ, ರಾಕಬ್​ಗಂಜ್​ ಸಾಹಿಬ್​ ಗುರುದ್ವಾರಕ್ಕೆ ದೇಣಿಗೆ ನೀಡಲಾಗಿದೆ. ದೆಹಲಿಯ ಬಾಂಗ್ಲಾ ಸಾಹಿಬ್​ ಗುರುದ್ವಾರದಲ್ಲಿ ಡಯೋಗ್ನೋಸಿಟ್​ ಕೇಂದ್ರ ನಿರ್ಮಾಣಕ್ಕಾಗಿ ದೇಣಿಗೆ ನೀಡಲಾಗಿದೆ. ಕೋವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಇಬ್ಬರು ಮಕ್ಕಳನ್ನು ದತ್ತು ಪಡೆಯಲಾಗಿದೆ. ಅವರಿಗೆ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುವುದು ಎಂದು ತಮ್ಮ ಸೇವಾ ಕಾರ್ಯಗಳನ್ನು ಪಟ್ಟಿ ಮಾಡಿದ್ದಾರೆ.
Published by: Seema R
First published: May 10, 2021, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories