ಲಾಕ್​ಡೌನ್ ನಡುವೆ ಮುಂಬೈ ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ; ಮಹಾರಾಷ್ಟ್ರ ಸಿಎಂಗೆ ಕರೆ ಮಾಡಿ ಮಾತನಾಡಿದ ಅಮಿತ್ ಶಾ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮಾತನಾಡಿ, ಮೋದಿ ಅವರು ರಾಜ್ಯ ಗಡಿ ತೆರೆಯುವಂತೆ ಆದೇಶಿಸಿದ್ದಾರೆ ಎಂದು ವಲಸೆ ಕಾರ್ಮಿಕರು ತಪ್ಪಾಗಿ ಭಾವಿಸಿದ್ದಾರೆ. ಹೊರಗೆ ಹೋಗಲು ಗಡಿ ತೆರದಿಲ್ಲ ಎಂದು ಪೊಲೀಸರು ಹೇಳಿದರು ಅವರು ಕೇಳಿಲ್ಲ. ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿಸಿದ್ದಾರೆ.

ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು.

ಲಾಠಿ ಬೀಸಿ ಪ್ರತಿಭಟನಾಕಾರರನ್ನು ಚದುರಿಸಿದ ಪೊಲೀಸರು.

 • Share this:
  ಮುಂಬೈ: ಮಾರಕ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಪ್ರಧಾನಿ ಮೋದಿ ಅವರು ದೇಶಾದ್ಯಂತ ಲಾಕ್​ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದ ನಿರ್ಧಾರ ಘೋಷಿಸಿದ ಬಳಿಕ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದರು. ತಮ್ಮ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು.

  ರೈಲ್ವೆ ನಿಲ್ದಾಣ ಸಮೀಪದ ಬಾಂದ್ರಾ (ಪಶ್ಚಿಮ) ಬಸ್​ ಡಿಪೋ ಸಮೀಪ ಸಂಜೆ 4 ಗಂಟೆ ಸಮಯದಲ್ಲಿ ಸಾವಿರಾರು ಮಂದಿ ಸೇರಿದ್ದರು. ನಮ್ಮ ಪರಿಸ್ಥಿತಿ ಅತಂತ್ರವಾಗಿ. ದಿನದೂಡುವುದೇ ದುಸ್ಥರವಾಗಿದೆ. ದಯವಿಟ್ಟು ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿಕೊಟ್ಟುಬಿಡಿ ಎಂದು ಕಾರ್ಮಿಕರು ಆಗ್ರಹಿಸಿ, ರಸ್ತೆಗೆ ಇಳಿದಾಗ, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಯೋಗಿಸಿ, ಗುಂಪು ಚದುರಿಸಿದರು.

  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ, ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತವೆ. ಇಂತಹ ಘಟನೆಗಳನ್ನು ನಡೆಯಂತೆ ಸರ್ಕಾರ ಜಾಗರೂಕವಾಗಿರಬೇಕು ಎಂದು ಹೇಳಿದರು. ಜೊತೆಗೆ ರಾಜ್ಯ ಸರ್ಕಾರಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದರು.

  ಇದನ್ನು ಓದಿ: ಏಪ್ರಿಲ್ 20ರ ಬಳಿಕ ಲಾಕ್‌ಡೌನ್‌ನಿಂದ ಯಾವ್ಯಾವುದಕ್ಕೆ ವಿನಾಯಿತಿ ಸಿಗಬಹುದು?

  ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮಾತನಾಡಿ, ಮೋದಿ ಅವರು ರಾಜ್ಯ ಗಡಿ ತೆರೆಯುವಂತೆ ಆದೇಶಿಸಿದ್ದಾರೆ ಎಂದು ವಲಸೆ ಕಾರ್ಮಿಕರು ತಪ್ಪಾಗಿ ಭಾವಿಸಿದ್ದಾರೆ. ಹೊರಗೆ ಹೋಗಲು ಗಡಿ ತೆರದಿಲ್ಲ ಎಂದು ಪೊಲೀಸರು ಹೇಳಿದರು ಅವರು ಕೇಳಿಲ್ಲ. ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ತಿಳಿಸಿದ್ದಾರೆ.

  First published: