Amit Shah On News18: ಪ್ರಧಾನಿ ನರೇಂದ್ರ ಮೋದಿ ಆಡಳಿತದಿಂದ 60 ಕೋಟಿ ಜನರ ಬದುಕು ಬದಲಾಗಿದೆ - ಅಮಿತ್​​ ಶಾ

ಮೋದಿ ಸರ್ಕಾರ ರೈತ, ಮಹಿಳೆ, ಕಾರ್ಮಿಕ, ವಿದ್ಯಾರ್ಥಿ, ಯುವಕ ಮತ್ತು ದಲಿತ ಸೇರಿದಂತೆ ಎಲ್ಲಾ ವರ್ಗಗಳಿಗೂ ನ್ಯಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಮೋದಿ 1.0 ಮತ್ತು ಮೋದಿ 2.0 ಸರ್ಕಾರದ ಸಾಧನೆಗಳು ಬೇರೆ ಬೇರೆಯಲ್ಲ. ಸರ್ಕಾರವೂ 31 ಕೋಟಿ ಜನ್​ಧನ್​​ ಖಾತೆ ತೆರೆದಿದೆ. ಇದಕ್ಕೆ ನೇರವಾಗಿ ಹಣವೂ ಜಮಾ ಆಗಿದೆ ಎಂದರು.

ಅಮಿತ್ ಶಾ, ರಾಹುಲ್​​ ಜೋಷಿ

ಅಮಿತ್ ಶಾ, ರಾಹುಲ್​​ ಜೋಷಿ

 • Share this:
  ನವದೆಹಲಿ(ಜೂ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರದ ಆಡಳಿತದಿಂದ ದೇಶದ 60 ಕೋಟಿ ಜನರ ಬದುಕು ಬದಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅಭಿಪ್ರಾಯಪಟ್ಟರು. ಕೊರೋನಾ ಲಾಕ್​ಡೌನ್​​ ಬಳಿಕ ಮೊದಲ ಬಾರಿಗೆ ನೆಟ್​ವರ್ಕ್​18 ಗ್ರೂಪ್​ ಪ್ರಧಾನ ಸಂಪಾದಕ ರಾಹುಲ್​ ಜೋಶಿಯವರ ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತಾಡಿದ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಹೀಗೆ ಮೋದಿ ಸರ್ಕಾರದ ಸಾಧನೆಯನ್ನು ಕೊಂಡಾಡಿದರು. 

  ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್​ ಆಡಳಿತದಿಂದ ತತ್ತರಿಸಿದ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತವೂ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದೆ. ನಮ್ಮ ಸರ್ಕಾರದಿಂದ ಜನರ ಬದುಕು ಅಷ್ಟೋ ಇಷ್ಟೋ ಬದಲಾಗಿದೆ ಎಂದರು ಅಮಿತ್​​ ಶಾ.

  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಶನಿವಾರಕ್ಕೆ ಒಂದು ವರ್ಷವಾಗಿದೆ. ಇದರ ಬಗ್ಗೆಯೂ ನೆಟ್​ವರ್ಕ್​18 ಗ್ರೂಪ್​ ಪ್ರಧಾನ ಸಂಪಾದಕ ರಾಹುಲ್​ ಜೋಶಿಯವರ ಸಂದರ್ಶನದಲ್ಲಿ ಅಮಿತ್​​ ಶಾ ಮಾತಾಡಿದರು.

  ಮೋದಿ ಸರ್ಕಾರ ರೈತ, ಮಹಿಳೆ, ಕಾರ್ಮಿಕ, ವಿದ್ಯಾರ್ಥಿ, ಯುವಕ ಮತ್ತು ದಲಿತ ಸೇರಿದಂತೆ ಎಲ್ಲಾ ವರ್ಗಗಳಿಗೂ ನ್ಯಾಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಮೋದಿ 1.0 ಮತ್ತು ಮೋದಿ 2.0 ಸರ್ಕಾರದ ಸಾಧನೆಗಳು ಬೇರೆ ಬೇರೆಯಲ್ಲ. ಸರ್ಕಾರವೂ 31 ಕೋಟಿ ಜನ್​ಧನ್​​ ಖಾತೆ ತೆರೆದಿದೆ. ಇದಕ್ಕೆ ನೇರವಾಗಿ ಹಣವೂ ಜಮಾ ಆಗಿದೆ ಎಂದರು.
  First published: