Amit Shah Interview: ಸರ್ಕಾರದಿಂದ ನೇರವಾಗಿ ಜನರ ಖಾತೆಗೆ ಹಣ, ಜನ್​ಧನ್​ ಖಾತೆ ಯಾಕೆ ಎಂಬ ಪ್ರಶ್ನೆಗೆ ಇದೇ ಉತ್ತರ: ಅಮಿತ್​ ಶಾ

ಕೊರೋನಾ ಲಾಕ್​ಡೌನ್​​ ಬಳಿಕ ಮೊದಲ ಬಾರಿಗೆ ನೆಟ್​ವರ್ಕ್​18 ಗ್ರೂಪ್​ ಪ್ರಧಾನ ಸಂಪಾದಕ ರಾಹುಲ್​ ಜೋಶಿಯವರ ಜತೆಗೆ ನಡೆದ ವಿಶೇಷ ಸಂದರ್ಶನದಲ್ಲಿ ಮಾತಾಡಿದ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಹೀಗೆಂದರು.

ಅಮಿತ್ ಶಾ

ಅಮಿತ್ ಶಾ

  • Share this:
    ನವದೆಹಲಿ(ಜೂನ್​​.01): ಜನ್​ಧನ್​​ ಖಾತೆ ಯಾಕೇ? ಎಂಬ ಕೇಂದ್ರ ವಿರೋಧ ಪಕ್ಷಗಳ ಪ್ರಶ್ನೆಗೆ ಸರ್ಕಾರದಿಂದ ನೇರವಾಗಿ ಜನರ ಖಾತೆಗೆ ಹಣ ಬಂದಿರುವುದೇ ಉತ್ತರ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಹೇಳಿದರು. ಕೊರೋನಾ ಲಾಕ್​ಡೌನ್​​ ಬಳಿಕ ಮೊದಲ ಬಾರಿಗೆ ನೆಟ್​ವರ್ಕ್​18 ಗ್ರೂಪ್​ ಪ್ರಧಾನ ಸಂಪಾದಕ ರಾಹುಲ್​ ಜೋಶಿಯವರ ಜತೆಗೆ ನಡೆಯುತ್ತಿರುವ ವಿಶೇಷ ಸಂದರ್ಶನದಲ್ಲಿ ಮಾತಾಡಿದ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಹೀಗೆಂದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಶನಿವಾರಕ್ಕೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಬಿಕ್ಕಟ್ಟು ಸಂದರ್ಭದಲ್ಲಿ ದೇಶವಾಸಿಗಳನ್ನುದ್ದೇಶಿಸಿ ಅಮಿತ್​​ ಶಾ ಅವರು, ನೆಟ್​ವರ್ಕ್​18 ಗ್ರೂಪ್​ ಪ್ರಧಾನ ಸಂಪಾದಕ ರಾಹುಲ್​ ಜೋಶಿಯವರ ಜತೆಗಿನ ಸಂದರ್ಶನದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಮಾಡಿದ ಆರ್ಟಿಕಲ್​​ 370ನೇ ತಿದ್ದುಪಡಿ, ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ನೀಡಿದ ರಾಮ ಮಂದಿರ ತೀರ್ಪು, ತ್ರಿವಳಿ ತಲಾಖ್, ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವುದರ ಕುರಿತು ಬಣ್ಣಿಸುತ್ತಿದ್ಧಾರೆ.
    First published: