HOME » NEWS » Coronavirus-latest-news » AMIT SHAH INTERVIEW THE FIGHT AGAINST COVID 19 IS THE BIGGEST ACHIEVEMENT OF MODI GOVERNMENT SAYS HOME MINISTER SNVS

Amit Shah On Coronavirus - ಕೋವಿಡ್-19 ವಿರುದ್ಧದ ಹೋರಾಟವೇ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ: ಅಮಿತ್ ಶಾ

Amit Shah Interview - ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಅಡಿಯಲ್ಲಿ ಭಾರತ ಸಮರ್ಥವಾಗಿ ಹೋರಾಡುತ್ತಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಈ ಹೋರಾಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

news18
Updated:June 1, 2020, 8:48 PM IST
Amit Shah On Coronavirus - ಕೋವಿಡ್-19 ವಿರುದ್ಧದ ಹೋರಾಟವೇ ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ: ಅಮಿತ್ ಶಾ
ಅಮಿತ್ ಶಾ
  • News18
  • Last Updated: June 1, 2020, 8:48 PM IST
  • Share this:
ನವದೆಹಲಿ(ಜೂ. 01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಕೊರೋನಾ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಇದನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ಧಾರೆ. ನೆಟ್​ವರ್ಕ್ 18 ಗ್ರೂಪ್​ನ ಮುಖ್ಯ ಸಂಪಾದಕ ರಾಹುಲ್ ಜೋಷಿ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ ಅವರು ಕೋವಿಡ್ ವಿರುದ್ಧದ ಹೋರಾಟವನ್ನು ಮೋದಿ ಸರ್ಕಾರದ ಅತಿದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಅಡಿಯಲ್ಲಿ ಭಾರತ ಸಮರ್ಥವಾಗಿ ಹೋರಾಡುತ್ತಿದೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಈ ಹೋರಾಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿಯವರೆಗೆ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ ಸೋಂಕಿತರ ಪ್ರಮಾಣ 12.6 ಮಾತ್ರ ಇದೆ. ಚೇತರಿಕೆ ದರ ಕೂಡ ಶೇ. 42ರಷ್ಟಿದೆ. ಇದು ಅಮೆರಿಕ, ಬ್ರಜಿಲ್ ಮತ್ತಿತರ ದೇಶಗಳಿಗೆ ಹೋಲಿಸಿದರೆ ಬಹಳ ಒಳ್ಳೆಯ ಸಂಖ್ಯೆ ಎಂದು ಅಮಿತ್ ಶಾ ಹೇಳಿದ್ಧಾರೆ.

ಇದನ್ನೂ ಓದಿ: Amit Shah Interview: ಸರ್ಕಾರದಿಂದ ನೇರವಾಗಿ ಜನರ ಖಾತೆಗೆ ಹಣ, ಜನ್​ಧನ್​ ಖಾತೆ ಯಾಕೆ ಎಂಬ ಪ್ರಶ್ನೆಗೆ ಇದೇ ಉತ್ತರ: ಅಮಿತ್​ ಶಾ

ಈ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಸಂಪೂರ್ಣವಾಗಿ ಗೆಲುವು ಸಾಧಿಸಲಿದೆ ಎಂದೂ ಅಮಿತ್ ಶಾ ಈ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಇನ್ನು, ಈ ವಿಶೇಷ ಇಂಟರ್​ವ್ಯೂನಲ್ಲಿ ಅಮಿತ್ ಶಾ ಅವರು ಸರ್ಕಾರದ ಅಭಿವೃದ್ಧಿ ಸಾಧನೆಗಳ ವಿವರ ನೀಡಿದ್ಧಾರೆ. ಹಾಗೆಯೇ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಂಕಷ್ಟ ನಿವಾರಿಸಲು ಸರ್ಕಾರದ ಮಾಡಿದ ಪ್ರಯತ್ನಗಳನ್ನ ತಿಳಿಸಿದ್ದಾರೆ.

ಇದನ್ನೂ ಓದಿ: Amit Shah On News18; ರೈತರ-ಅಸಂಘಟಿತ ವಲಯದ ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಗೆ ಶ್ರಮಿಸಲಾಗಿದೆ; ಅಮಿತ್‌ ಶಾ
First published: June 1, 2020, 8:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories