Priyanka Gandhi: ಉತ್ತರಪ್ರದೇಶದಲ್ಲಿ ಕೈ ಮೀರಿದ ಕೊರೋನಾ; ಯೋಗಿ ಆದಿತ್ಯನಾಥ್​ಗೆ 5 ಅಂಶಗಳ ಪತ್ರ ಬರೆದ ಪ್ರಿಯಾಂಕಾ ಗಾಂಧಿ

ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ನಿವಾರಣೆಯಲ್ಲಿ ಖಾಸಗಿ ವಲಯದ ಆಸ್ಪತ್ರೆಗಳು ದೊಡ್ಡ ಪಾತ್ರವಹಿಸಿವೆ. ಆದರೆ ಖಾಸಗಿ ಆಸ್ಪತ್ರೆಗಳು ಜನರಿಗೆ ಕೊರೋನಾ ಚಿಕಿತ್ಸೆಗಾಗಿ ಭಾರಿ ಮೊತ್ತವನ್ನು ವಿಧಿಸುತ್ತಿವೆ. ಇದರ ವಿರುದ್ಧ ಸರ್ಕಾರ ಕೂಡಲೇ ಕ್ರಮ ವಹಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

ಪ್ರಿಯಾಂಕಾ ಗಾಂಧಿ - ಯೋಗಿ ಆದಿತ್ಯನಾಥ್.

ಪ್ರಿಯಾಂಕಾ ಗಾಂಧಿ - ಯೋಗಿ ಆದಿತ್ಯನಾಥ್.

 • Share this:
  ಲಖನೌ (ಮೇ 20); ಉತ್ತರಪ್ರದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಒಂದೆಡೆ ಕೊರೋನಾ ಸೋಂಕಿನ ಸಂಖ್ಯೆ ಅಧಿಕವಾಗುತ್ತಿದ್ದರೆ. ಮತ್ತೊಂದೆಡೆ ಕೊರೋನಾದಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ಮಾಡಲು ಹಣವಿಲ್ಲದೆ ಹಲವರು ತಮ್ಮವರ ಶವಗಳನ್ನು ಗಂಗಾ ನದಿಗೆ ಎಸೆದು ಹೋಗುತ್ತಿರುವುದು ದೊಡ್ಡ ಸುದ್ದಿಯಾಗಿದೆ. ಇನ್ನೂ ಉತ್ತರಪ್ರದೇಶದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆ ಸಾಕಷ್ಟು ದುಬಾರಿಯಾಗಿದೆ ಎಂಬ ಆರೋಪ ಗಳೂ ಕೇಳಿ ಬರುತ್ತಿದೆ. ಈ ಬೆಳವಣಿಗೆಯನ್ನು ಖಂಡಿಸಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ 5 ಅಂಶಗಳ ಪತ್ರ ಬರೆದಿರುವ ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, "ಕೊರೋನಾ ಸಾಂಕ್ರಾಮಿಕದ ಪರಿಣಾಮದಿಂದ ರಾಜ್ಯದಲ್ಲಿ  ಮಧ್ಯಮ ವರ್ಗದ ಜನ ಸಂಕಷ್ಟಕ್ಕೆ ಒಳಗಾಗು ತ್ತಿದ್ದಾರೆ. ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು"  ಎಂದು ಮನವಿ ಮಾಡಿದ್ದಾರೆ.

  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪ್ರಿಯಾಂಕಾ ಗಾಂಧಿ ಬರೆದ ಪತ್ರದಲ್ಲಿ, "ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಿದೆ. ಆಡಳಿತದ ಅಸಮರ್ಥತೆ ಮತ್ತು ಸಿದ್ಧತೆಯ ಕೊರತೆಯಿಂದಾಗಿ ಜನರು ಅಸಹನೀಯ ನೋವು ಅನುಭವಿಸಬೇಕಾಗಿದೆ. ಆದರೂ ಏಪ್ರಿಲ್-ಮೇ ತಿಂಗಳಲ್ಲಿನ ಕೊರೋನಾ ಅಪಾಯದ ಬಗ್ಗೆ ಸರ್ಕಾರ ಯಾವುದೇ ಯೋಜನೆಯನ್ನು ಹೊಂದಿಲ್ಲದಿರುವುದು ದುರಾದೃಷ್ಟಕರ. ಸರ್ಕಾರದ ಅನೇಕ ಅನಗತ್ಯ ನಿಯಮಗಳು ಜನರಿಗೆ ಸಮಸ್ಯೆಗಳನ್ನು ತಂದಿಟ್ಟಿದೆ" ಎಂದು ಅವರು ಟೀಕಿಸಿದ್ದಾರೆ.

  "ಒಂದು ಕಡೆ ಸಾಂಕ್ರಾಮಿಕ ರೋಗವು ನಮ್ಮನ್ನು ಕಾಡುತ್ತಿದೆ, ಮತ್ತೊಂದೆಡೆ ಈ ಸೋಂಕು ಜನರ ಜೀವನೋಪಾಯ, ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಭಾರಿ ತೊಂದರೆಗಳನ್ನು ಸೃಷ್ಟಿಸಿದೆ. ಇಂದು, ಕೋಟ್ಯಾಂತರ ಜನರು ತಮ್ಮ ಭವಿಷ್ಯದ ಬಗ್ಗೆ ಭಯಭೀತರಾಗಿದ್ದಾರೆ, ಅವರ ಉದ್ಯೋಗ, ಸಂಪಾದನೆಯ ದಾರಿ ಕಡಿಮೆಯಾಗಿವೆ. ಇತ್ತ ಹಣದುಬ್ಬರ ಹೆಚ್ಚಾಗಿದ್ದು, ವಿಶೇಷವಾಗಿ ಮಧ್ಯಮ ವರ್ಗವನ್ನು ತೊಂದರೆಗೆ ಸಿಲುಕಿಸಿದೆ" ಎಂದು ಪತ್ರದಲ್ಲಿ ಬರೆದಿದ್ದಾರೆ.

  ಪತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜ್ಯದ ಜನರಿಗೆ ಪರಿಹಾರ ಒದಗಿಸಲು ಯೋಗಿ ಆದಿತ್ಯನಾಥ್ ಅವರಿಗೆ ಐದು ಸಲಹೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ನಿವಾರಣೆಯಲ್ಲಿ ಖಾಸಗಿ ವಲಯದ ಆಸ್ಪತ್ರೆಗಳು ದೊಡ್ಡ ಪಾತ್ರವಹಿಸಿವೆ. ಆದರೆ, ಖಾಸಗಿ ಆಸ್ಪತ್ರೆಗಳು ಜನರಿಗೆ ಕೊರೋನಾ ಚಿಕಿತ್ಸೆಗಾಗಿ ಭಾರಿ ಮೊತ್ತವನ್ನು ವಿಧಿಸುತ್ತಿವೆ. ಆದರಿಂದ ವೈದ್ಯಕೀಯ ಸೌಲಭ್ಯಗಳಿಗೆ ಅನುಗುಣವಾಗಿ ಜನರಿಗೆ ಅನುಕೂಲಕರ ಬೆಲೆಗಳನ್ನು ನಿಗದಿಪಡಿಸಲು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: CoronaVirus: ಕೋವಿಡ್​ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಮುಖವಾಗಿದೆ, ಆದರೂ ನಿರ್ಲಕ್ಷ್ಯತೆ ಸಾಧ್ಯವಿಲ್ಲ; ಕೇಂದ್ರ ಸರ್ಕಾರ

  ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದವರಿಗೆ ರಾಜ್ಯ ಸರ್ಕಾರವು ಪರಿಹಾರವನ್ನು ನೀಡಬೇಕು. ಲಾಕ್‌ಡೌನ್ ಸಮಯದಲ್ಲಿ ಜನರಿಗೆ ತೊಂದರೆಯಾಗದಂತೆ, ಹಣದುಬ್ಬರವನ್ನು ನಿಯಂತ್ರಿಸಬೇಕು ಮತ್ತು ಅಗತ್ಯ ವಸ್ತುಗಳಾದ ಖಾದ್ಯ ತೈಲಗಳು, ತರಕಾರಿಗಳು ಮತ್ತು ಹಣ್ಣುಗಳ ಬೆಲೆ ದರ ನಿಗದಿಪಡಿಸುವಂತೆ ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ.

  ಇದನ್ನೂ ಓದಿ: Viral Video; ವಿವಾಹ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಂದ ಲಾಕ್​ಡೌನ್ ಉಲ್ಲಂಘನೆ; ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತಾ?

  ಈಗಿರುವ ಸಮಸ್ಯೆಗಳ ನಡುವೆಯೇ ಹೆಚ್ಚಿನ ವಿದ್ಯುತ್ ಬಿಲ್‌ಗಳಿಂದಾಗಿ ಜನರ ಸಮಸ್ಯೆಗಳು ಹೆಚ್ಚಾಗಿದೆ. ಹೀಗಾಗಿ ಬಿಲ್ ಪಾವತಿಗೆ ಪರಿಹಾರ ನೀಡಬೇಕು ಮತ್ತು ವಿದ್ಯುತ್ ಬೆಲೆಯನ್ನು ಮತ್ತಷ್ಟು ಹೆಚ್ಚಿಸಬಾರದು. ಶಾಲೆಗಳು ಮುಚ್ಚಲ್ಪಟ್ಟಿವೆ ಆದರೆ ಪ್ರತಿ ತಿಂಗಳು ಶುಲ್ಕವನ್ನು ಕಟ್ಟುವಂತೆ ಶಾಲೆಗಳು ಒತ್ತಾಯಿಸುತ್ತಿದ್ದು, ಪೋಷಕರು ಒತ್ತಡದಲ್ಲಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  ಉತ್ತರಪ್ರದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ ಹೆಚ್ಚಿದ್ದರೂ ಸರ್ಕಾರ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು, ವಿಪಕ್ಷಗಳು ಆರೋಪಿಸಿವೆ. ಆದರೆ, ಈ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡದಿರುವುದೂ ಸಹ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
  Published by:MAshok Kumar
  First published: