ಭಾನುವಾರದ ಲಾಕಡೌನ್ ಮಧ್ಯೆಯೂ ವಿಜಯಪುರಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಕಾರ್ಮಿಕರು; ಮತ್ತೆ ಹೆಚ್ಚಿದ ಕೊರೋನಾ ಭೀತಿ

ಇವರ ಆಗಮನದ ಕುರಿತು ಪೊಲೀಸರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.  ಮೊದಲಿಗೆ ಈ ಕಾರ್ಮಿಕರನ್ನು ಆರೋಗ್ಯ ಇಲಾಖೆ ಕಾರ್ಯಕರ್ತರಿಂದ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.  ನಂತರ ಕ್ವಾರಂಟೈನ್​ ಮಾಡಲಾಗುತ್ತದೆ.

news18-kannada
Updated:July 12, 2020, 8:58 AM IST
ಭಾನುವಾರದ ಲಾಕಡೌನ್ ಮಧ್ಯೆಯೂ ವಿಜಯಪುರಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಕಾರ್ಮಿಕರು; ಮತ್ತೆ ಹೆಚ್ಚಿದ ಕೊರೋನಾ ಭೀತಿ
ವಿಜಯಪುರ
  • Share this:
ವಿಜಯಪುರ (ಜು.12): ಕೊರೋನಾ ವೈರಸ್​ ರಾಜ್ಯದಲ್ಲಿ ಮಿತಿಮೀರಿ ಹರಡುತ್ತಿದೆ. ಅದರಲ್ಲೂ ಹೊರ ರಾಜ್ಯದಿಂದ ಬಂದಿರುವವರಲ್ಲೇ ಕೊರೋನಾ ವೈರಸ್​ ಹೆಚ್ಚು ಪತ್ತೆ ಆಗಿದೆ. ಈ ಮಧ್ಯೆ ಸಂಡೆ ಲಾಕಡೌನ್ ಇದ್ದರೂ ಹೊರ ರಾಜ್ಯದಿಂದ ವಿಜಯಪುರಕ್ಕೆ ಕಾರ್ಮಿಕರು ಆಗಮಿಸಿರುವ ಕಾರ್ಮಿಕರು ಆತಂಕ ಸೃಷ್ಟಿಸಿದ್ದಾರೆ.

ಪಶ್ಚಿಮ ಬಂಗಾಳದಿಂದ 14 ಜನ ಕಾರ್ಮಿಕರು ವಿಜಯಪುರ ಜಿಲ್ಲೆಗೆ ಆಗಮಿಸಿದ್ದು, ಇವರನ್ನು ತಡೆದ ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ.  ಪಶ್ಚಿಮ ಬಂಗಾಳ ಮೂಲದ ಈ ಕಾರ್ಮಿಕರು ವಿದ್ಯುತ್ ಕಾಮಗಾರಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.  ಇವರನ್ನು ಕರೆಸಿರುವ ಗುತ್ತಿಗೆದಾರನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ವಿಜಯಪುರ ಬಸ್ ನಿಲ್ದಾಣದ ಬಳಿ ಯುವಕರು ಗುಂಪು ಸೇರಿದೆ ಎಂಬ ಮಾಹಿತಿ ಪಡೆದ ಗಾಂಧಿಚೌಕ್ ಪೊಲೀಸರು ಅಲ್ಲಿಗೆ ದೌಡಾಯಿಸಿ ವಿಚಾರಣೆ ನಡೆಸಿದ್ದಾರೆ.  ಈ ಸಂದರ್ಭಲ್ಲಿ ಈ ಯುವಕರು ತಾವು ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಬಂದಿದ್ದು, ಗುತ್ತಿಗೆದಾರರೊಬ್ಬರು ತಮ್ಮನ್ನು ವಿದ್ಯುತ್ ಕಾಮಗಾರಿಗೆ ಕರೆಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.  ವಿಜಯಪುರ ಜಿಲ್ಲೆಗೆ ರೈಲು ಮೂಲಕ ಆಗಮಿಸಿರುವ ಇವರು, ನಂತರ ಬಸ್ ನಿಲ್ದಾಣದ ಬಳಿ ಬಂದು ಸೇರಿದ್ದರು.  ಇದೀಗ ಇವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇವರ ಆಗಮನದ ಕುರಿತು ಪೊಲೀಸರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.  ಮೊದಲಿಗೆ ಈ ಕಾರ್ಮಿಕರನ್ನು ಆರೋಗ್ಯ ಇಲಾಖೆ ಕಾರ್ಯಕರ್ತರಿಂದ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.  ನಂತರ ಗುತ್ತಿಗೆದಾರನನ್ನು ಹುಡುಕಾಟ ನಡೆಸಿದ ಅವರಿಂದಲೇ ಹೋಂ ಕ್ವಾರಂಟೈನ್ ಮಾಡಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಹೊಸ ಮಾರ್ಗಸೂಚಿಯಂತೆ ಬೇರೆ ರಾಜ್ಯಗಳಿಂದ ಬರುವ ಜನರನ್ನು ಹೋಂ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.  ಇವರನ್ನೂ ಕೂಡ ಹೋಂ ಕ್ವಾರಂಟೈನ್ ಗೆ ಕಳುಹಿಸಿ ಕೊಡಲು ಪೊಲೀಸರು ನಿರ್ಧರಿಸಿದ್ದಾರೆ.

ಈ ಮಧ್ಯೆ ಸಂಡೆ ಲಾಕಡೌನ್ ವಿಜಯಪುರ ಜಿಲ್ಲಾದ್ಯಂತ ಶಾಂತಿಯುತವಾಗಿ ಮುಂದುವರೆದಿದೆ.  ವಿಜಯಪುರ ನಗರದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.  ನಗರ ಮತ್ತು ಗ್ರಾಮೀಣ ಸಾರಿಗೆ ಬಸ್ಸುಗಳೂ ಕೂಡ ಸಂಚಾರ ಬಂದ್ ಆಗಿವೆ.  ಅಟೋಗಳೂ ಕೂಡ ರಸ್ತೆಗೆ ಇಳಿದಿಲ್ಲ. ವಿಜಯಪುರ ನಗರದ ಎಲ್ಲ ರಸ್ತೆಗಳು ಜನ ಮತ್ತು ವಾಹನಗಳಿಲ್ಲದೇ ಬಿಕೋ ಎನ್ನುತ್ತಿವೆ. ಈ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಿಗೀ ಪೊಲೀಸ್ ಏರ್ಪಡಿಸಲಾಗಿದೆ. ವಿನಾಕಾರಣ ರಸ್ತೆಗಿಳಿಯುವವರನ್ನು ಪೊಲೀಸರು ವಿಚಾರಣೆ ನಡೆಸಿ ವಾಪಸ್ ಕಳುಹಿಸುತ್ತಿದ್ದಾರೆ.ಎಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು, ತುರ್ತು ಸೇವೆಗಳಾದ ಔಷಧ ಅಂಗಡಿ, ಪೆಟ್ರೋಲ್ ಬಂಕ್ ಗಳು ಮಾತ್ರ ತೆರೆದಿವೆ. ಸರಕಾರ ಜಾರಿಗೆ ತಂದಿರುವ ಸಂಡೆ ಲಾಕಡೌನ್ ಗೆ ವಿಜಯಪುರ ಜಿಲ್ಲೆಯ ಜನರೂ ಕೂಡ ಸ್ಪಂದಿಸುತ್ತಿರುವುದಕ್ಕೆ ಜಿಲ್ಲಾಡಳಿತ ಸಂತಸ ವ್ಯಕ್ತಪಡಿಸಿದೆ.
Published by: Rajesh Duggumane
First published: July 12, 2020, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading