ಮಂಡ್ಯ(ಮಾ.11) : ರಾಜ್ಯದಲ್ಲಿ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎಲ್ ಕೆ ಜಿ ಯಿಂದ ರಿಂದ 5 ತರಗತಿಯ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಮಂಡ್ಯ ಜಿಲ್ಲೆಯ ಮದ್ದೂರಿನ ಕೆಲವು ಶಾಲೆಗಳಲ್ಲಿ ಹೊರಡಿಸಿದ ಆದೇಶ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.
ಮದ್ದೂರು ಪಟ್ಟಣದ ನಳಂದಾ, ಐಶ್ವರ್ಯ, ಸೆಂಟ್ ಆನ್ಸ್ ಶಾಲೆಗಳಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಶಾಲೆಗೆ ಬರುವ ವಿದ್ಯಾರ್ಥಿಗಳು ಮಾಸ್ಕ್ಗಳನ್ನು ಧರಿಸಿಕೊಂಡು ಬರಬೇಕು, ಜೊತೆಗೆ ಹ್ಯಾಂಡ್ ವಾಶ್ ಗೆ ಡೆಟಾಲ್ ತರಬೇಕು ಎಂದು ಶಾಲೆಯ ಮುಖ್ಯೋಪಾಧ್ಯಯರು ಮೌಖಿಕ ಆದೇಶ
ಹೊರಡಿಸಿದ್ದಾರೆ. ಮಾಸ್ಕ್ ಧರಿಸಿಕೊಂಡು ಬರದಿದ್ದಲ್ಲಿ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಮಾಸ್ಕ್ ಹಾಗೂ ಹ್ಯಾಂಡ್ ವಾಶ್ ಗೆ ಡೆಟಾಲ್ ತರದೆ ಶಾಲೆಗೆ ಬರಬಾರದೆಂದು ಆದೇಶದಲ್ಲಿ ತಿಳಿಸಲಾಗಿದೆ.
ಶಾಲಾ ಆಡಳಿತ ಮಂಡಳಿಯವರ ಈ ಆದೇಶ ಪೋಷಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಪೋಷಕರು ಮೆಡಿಕಲ್ ಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ, ಅಲ್ಲಿ ಮಾಸ್ಕ್ ಹಾಗೂ ಡೆಟಾಲ್ಗಳು ಲಭ್ಯವಿಲ್ಲದ ಕಾರಣ ತೀವ್ರ ತೊಂದರೆ ಪಡುವಂತಾಗಿದೆ.
ರಾಜ್ಯದಲ್ಲಿ 4 ಕೊರೋನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದೆ. ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 5ನೇ ತರಗತಿವರೆಗಿನ ಮಕ್ಕಳಿಗೆ ರಜೆ ನೀಡಲಾಗಿದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವೈದ್ಯಕೀಯ ಇಲಾಖೆ ಸಮಕ್ಷಮದಲ್ಲಿ ರಜೆ ಘೋಷಣೆ ಮಾಡಲಾಗಿದೆ
ಕೆಲವು ಖಾಸಗಿ ಶಾಲೆಗಳು ವ್ಯತಿರಿಕ್ತ ವರ್ತನೆ ತೋರುತ್ತಿವೆ. ತಮ್ಮದೇ ಬೇರೆ ಸಾಮ್ರಾಜ್ಯ ಎಂದು ತಿಳಿದುಕೊಂಡಿದ್ದಾರೆ. ಆ ಶಾಲೆಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ತಿಳಿದು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆದೇಶ ಪಾಲಿಸದ ಶಾಲೆಗಳಿಗೆ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ :
ಕೊರೋನಾ ಶಂಕೆ: ಸೌದಿಯಿಂದ ಮರಳಿದ್ದ ವೃದ್ಧ ಸಾವು, ಸಂಜೆ ಸಿಗಲಿದೆ ಖಚಿತ ಮಾಹಿತಿ, ಆತಂಕದ ಅಗತ್ಯವಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ