ಕೊರೋನಾ ಬೆನ್ನಿಗೆ ಮನೆ ಓನರ್‌ಗಳ ಕಿರಿಕ್; Home Isolation ನಲ್ಲಿರುವವರನ್ನು ಮನೆ ಖಾಲಿ ಮಾಡುವಂತೆ ತಾಕೀತು

ಇಂದು ತುರ್ತು ಸಭೆ ನಡೆಸಿರುವ ಸರ್ಕಾರ ಮತ್ತು ಆರೋಗ್ಯ ಇಲಾಖೆ , ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿ, ಬಿಬಿಎಂಪಿ ಆಯುಕ್ತರಿಗೆ ಮತ್ತು ಎಲ್ಲಾ ಜಿಲ್ಲಾ ಎಸಿ ಗಳಿಗೆ ಸೂಚನೆ ನೀಡಿದೆ.

news18-kannada
Updated:March 26, 2020, 11:15 AM IST
ಕೊರೋನಾ ಬೆನ್ನಿಗೆ ಮನೆ ಓನರ್‌ಗಳ ಕಿರಿಕ್; Home Isolation ನಲ್ಲಿರುವವರನ್ನು ಮನೆ ಖಾಲಿ ಮಾಡುವಂತೆ ತಾಕೀತು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮಾರ್ಚ್‌ 26); ಮಾರಣಾಂತಿಕ ಕೊರೋನಾ ಸೋಂಕು ಪ್ರಸ್ತುತ ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ. ಮೇ ಎರಡನೇ ವಾರಕ್ಕೆ ದೇಶದಲ್ಲಿ ಸುಮಾರು 13 ಲಕ್ಷ ಜನರಿಗೆ ಈ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲರಿಗೂ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಕೆಲವು ಸೋಂಕಿತರಿಗೆ ಮನೆಯಲ್ಲೇ Isolation ಮಾಡುವ ಮೂಲಕ ಚಿಕಿತ್ಸೆ ನೀಡುತ್ತಿದೆ.

ರಾಜ್ಯದಲ್ಲೇ ಬೆಂಗಳೂರಿನಲ್ಲಿ ಅಧಿಕ ಜನರಿಗೆ ಸೋಂಕು ತಗುಲಿದೆ. ಅಲ್ಲದೆ, ಶಂಕಿತರಿಗೆ ಮನೆಯಲ್ಲೇ Isolation  ಮಾಡಲಾಗುತ್ತಿದೆ. ಆದರೆ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಂದ ತಮಗೂ ಈ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಹಲವೆಡೆ ಮನೆ ಮಾಲಿಕರು ಮನೆ ಖಾಲಿ ಮಾಡುವಂತೆ ತಾಕೀತು ಮಾಡುತ್ತಿದ್ದಾರೆ. ಬೆಂಗಳೂರಿನಂತಹ ಮಹಾ ನಗರದಲ್ಲಿ ಬಹುಪಾಲು ಜನ ಬಾಡಿಗೆ ಮನೆಯಲ್ಲೇ ವಾಸವಾಗಿರುವ ಕಾರಣ ಇಂತಹ ಅಮಾನವೀಯ ಪ್ರಕರಣಗಳು ಇದೀಗ ಅನೇಕ ಕಡೆಗಳಲ್ಲಿ ದಾಖಲಾಗುತ್ತಿದೆ.

ಸೋಂಕು ಪೀಡಿತ ಶಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು , ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಮನೆಗೆ ಆಗಮಿಸಿದರೆ, "ನಿಮ್ಮಿಂದ ನಮಗೂ ಕೊರೋನಾ ಹರಡುತ್ತೆ. ಫಸ್ಟ್ ಮನೆ ಖಾಲಿ ಮಾಡಿ ಎಂದು ಮನೆ ಮಾಲಿಕರು ಧಮಕಿ ಹಾಕುತ್ತಿದ್ದಾರೆ. ಹಾಗಾಗೀ ವೈದ್ಯರು, ನರ್ಸ್‌‌ಗಳಿಂದ ಸರ್ಕಾರಕ್ಕೆ ದೂರು ಸಲ್ಲಿಸಲಾಗಿದೆ.

ಈ ಕುರಿತು ಇಂದು ತುರ್ತು ಸಭೆ ನಡೆಸಿರುವ ಸರ್ಕಾರ ಮತ್ತು ಆರೋಗ್ಯ ಇಲಾಖೆ , ಮನೆ ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿರುವ ಮನೆ ಮಾಲಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿ, ಬಿಬಿಎಂಪಿ ಆಯುಕ್ತರಿಗೆ ಮತ್ತು ಎಲ್ಲಾ ಜಿಲ್ಲಾ ಎಸಿ ಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ : ಕೊರೋನಾ ಬಗ್ಗೆ ಇನ್ನೂ ಎಚ್ಚೆತ್ತಿಲ್ಲ ಬೆಂಗಳೂರು; ಚಿಕನ್​-ಮಟನ್ ಖರೀದಿಗೆ ಮುಗಿಬಿದ್ದ ಜನತೆ
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading