Kumbha mela: ಮಾಸ್ಕ್ ಇಲ್ಲ, ಅಂತರವೂ ಇಲ್ಲ; ಕುಂಭಮೇಳದಲ್ಲಿ ಕೊರೋನಾ ನಿಯಮಗಳ ಉಲ್ಲಂಘನೆಯಿಂದ ಟೆನ್ಶನ್..!

ಸಾಮಾನ್ಯವಾಗಿ ಕುಂಭಮೇಳ 4 ತಿಂಗಳುಗಳ ಕಾಲ ನಡೆಯುತ್ತದೆ. ಆದ್ರೆ ಕೊರೋನಾ ಸಾಂಕ್ರಾಮಿಕ ರೋಗದಿಂದ ಈ ಬಾರಿ ಒಂದು ತಿಂಗಳ ಮಟ್ಟಿಗೆ ಆಚರಿಸಲು ಅನುಮತಿ ನೀಡಲಾಗಿದೆ. ಏ.1ರಿಂದ 30ರವರೆಗೆ ಈ ಬಾರಿ ಕುಂಭಮೇಳ ನಡೆಯುತ್ತಿದೆ. ಮುಂದಿನ ಪುಣ್ಯಸ್ನಾನವನ್ನು ಏ.15 ಹಾಗೂ ಏ.27ರಂದು ನಿಗದಿಪಡಿಸಲಾಗಿದೆ.

ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಸಾಧುಗಳು.

ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಸಾಧುಗಳು.

 • Share this:
  ಹರಿದ್ವಾರ (ಏ. 12): ಹೆಮ್ಮಾರಿ ಕೊರೋನಾದ 2ನೇ ಅಲೆ ದೇಶಾದ್ಯಂತ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಡೆಡ್ಲಿ ವೈರಸ್ ತೂಗುಗತ್ತಿ ಎಲ್ಲರ ಮೇಲೆ ನೇತಾಡುತ್ತಿದೆ. ಬಹುತೇಕ ರಾಜ್ಯಗಳು ಕೊರೋನಾಸುರನಿಂದ ಪಾರಾಗಲು ನೈಟ್​ ಕರ್ಫ್ಯೂ, ವಿಕೇಂಡ್ ಕರ್ಫ್ಯೂ, ಕಟ್ಟುನಿಟ್ಟಿನ ಕ್ರಮಗಳಿಗೆ ಮೊರೆ ಹೋಗಿವೆ. ರಸ್ತೆಗಳಲ್ಲಿ ಮಾಸ್ಕ್ ಇಲ್ಲದೆ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯ ಮಧ್ಯೆಯೂ ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿದೆ. ಕೊರೋನಾ ಅಬ್ಬರಿಸುತ್ತಿರುವ ಮಧ್ಯೆ ನಡೆಯುತ್ತಿರುವ ಕುಂಭಮೇಳದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

  ವಿಶ್ವದ ಬೃಹತ್ ಧಾರ್ಮಿಕ ಸಮಾಗಮ ಅಂತಲೇ ಖ್ಯಾತಿ ಗಳಿಸಿರುವ ಕುಂಭಮೇಳವನ್ನು ಕೊರೋನಾ ಕಾರಣದಿಂದ ಈ ಸಲ 4 ತಿಂಗಳ ಬದಲು 1 ತಿಂಗಳುಗಳ ಕಾಲ ಆಚರಿಸಲಾಗುತ್ತಿದೆ. ಇಂದು ಒಂದೇ ದಿನ ಗಂಗಾ ನದಿಯಲ್ಲಿ 28 ಲಕ್ಷಕ್ಕೂ ಹೆಚ್ಚು ಮಂದಿ ಮಿಂದೆದ್ದಿದ್ದು, ಕೊರೋನಾ ಕರಾಳ ಛಾಯೆ ಆವರಿಸಿಕೊಂಡಿದೆ. ಹರ್ ಕಿ ಪೌರ್ ಘಾಟ್ ಬಳಿ ನಾಗಸಾಧುಗಳು, ಸಾಧುಸಂತರು ಸೇರಿ ಲಕ್ಷಾಂತರ ಮಂದಿ ಗಂಗೆಯಲ್ಲಿ (ಶಾಹಿ ಸ್ನಾನ್) ಪುಣ್ಯಸ್ನಾನ ಮಾಡಿದ್ದಾರೆ.

  ಇದನ್ನು ಓದಿ: ಲಾಕ್​ಡೌನ್​ ಭೀತಿ: ಊರುಗಳಿಗೆ ತೆರಳಲು ರೈಲ್ವೆ ನಿಲ್ದಾಣಗಳಲ್ಲಿ ಕಿಕ್ಕಿರಿದು ಜಮಾಯಿಸಿದ ವಲಸಿಗರು..!

  ಒಮ್ಮೆಗೆ ಭಾರೀ ಸಂಖ್ಯೆಯಲ್ಲಿ ಸಾಧುಸಂತರು ಜಮಾಯಿಸುವುದನ್ನು ತಪ್ಪಿಸಲು 13 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್, ಸಾಮಾಜಿಕ ಅಂತರ ಕಾಯ್ದೆಕೊಳ್ಳಬೇಕೆಂದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದರೆ ಗಂಗಾ ಸ್ನಾನದ ವೇಳೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗುಂಪುಗುಂಪಾಗಿ ಬಂದ ನಾಗಾಸಾಧುಗಳು ಪುಣ್ಯಸ್ನಾನ ಮಾಡಿದ್ದಾರೆ. ಬಹುತೇಕರು ಮಾಸ್ಕ್​ಗಳನ್ನು ಧರಿಸಿರಲಿಲ್ಲ. ಆದರೆ ಸ್ಥಳದಲ್ಲಿ ಪೊಲೀಸರು ಸಾಧುಸಂತರ ಬಳಿ ಮಾಸ್ಕ್ ಧರಿಸುವಂತೆ ಮೃದುವಾಗೇ ಮನವಿ ಮಾಡಿಕೊಂಡಿದ್ದಾರೆ. ವಾಸ್ತವದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಲು ಸಾಧ್ಯವಾಗಿಲ್ಲ ಎಂದು ಐಜಿ ಸಂಜಯ್ ಗುಂಜ್ಯಾಲ್ ಕೂಡ ಒಪ್ಪಿಕೊಂಡಿದ್ದಾರೆ.

  ಸಾಮಾನ್ಯವಾಗಿ ಕುಂಭಮೇಳ 4 ತಿಂಗಳುಗಳ ಕಾಲ ನಡೆಯುತ್ತದೆ. ಆದ್ರೆ ಕೊರೋನಾ ಸಾಂಕ್ರಾಮಿಕ ರೋಗದಿಂದ ಈ ಬಾರಿ ಒಂದು ತಿಂಗಳ ಮಟ್ಟಿಗೆ ಆಚರಿಸಲು ಅನುಮತಿ ನೀಡಲಾಗಿದೆ. ಏ.1ರಿಂದ 30ರವರೆಗೆ ಈ ಬಾರಿ ಕುಂಭಮೇಳ ನಡೆಯುತ್ತಿದೆ. ಮುಂದಿನ ಪುಣ್ಯಸ್ನಾನವನ್ನು ಏ.15 ಹಾಗೂ ಏ.27ರಂದು ನಿಗದಿಪಡಿಸಲಾಗಿದೆ. ಇನ್ನು ಕೊರೋನಾ ಹರಡುವಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕುಂಭಮೇಳಕ್ಕೆ ಬರುವವರು 72 ಗಂಟೆಗಳ ಹಿಂದಿನ ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯ ಎಂದು ಉತ್ತರಾಖಂಡ್ ಹೈಕೋರ್ಟ್ ಮೊದಲೇ ಷರತ್ತು ವಿಧಿಸಿದೆ.

  • ವರದಿ: ಕಾವ್ಯಾ ವಿ

  Published by:HR Ramesh
  First published: