ಅಮೆರಿಕಕ್ಕೆ ಭಾರತ ಸರಬರಾಜು ಮಾಡಿದ ಔಷಧಿಯನ್ನೇ ನಿತ್ಯ ಸೇವಿಸುತ್ತಿರುವ ಟ್ರಂಪ್

ಡೊನಾಲ್ಡ್ ಟ್ರಂಪ್ ಅವರು ತಮ್ಮ ವೈಟ್ ಹೌಸ್​ನ ಮುಖ್ಯ ವೈದ್ಯರ ಒಪ್ಪಿಗೆ ಮೇರೆಗೆಯೇ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇವಿಸುತ್ತಾ ಬಂದಿದ್ಧಾರಂತೆ. ಇಲ್ಲಿಯವರೆಗೆ ನನಗೇನೂ ಆಗಿಲ್ಲ. ಆರೋಗ್ಯವಂತನಂತೆ ಇದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ಧಾರೆ.

news18
Updated:May 19, 2020, 9:58 AM IST
ಅಮೆರಿಕಕ್ಕೆ ಭಾರತ ಸರಬರಾಜು ಮಾಡಿದ ಔಷಧಿಯನ್ನೇ ನಿತ್ಯ ಸೇವಿಸುತ್ತಿರುವ ಟ್ರಂಪ್
ಡೊನಾಲ್ಡ್ ಟ್ರಂಪ್
  • News18
  • Last Updated: May 19, 2020, 9:58 AM IST
  • Share this:
ವಾಷಿಂಗ್ಟನ್(ಮೇ 19): ವೈಟ್ ಹೌಸ್ ಸಿಬ್ಬಂದಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕು ತಗುಲಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಕಷ್ಟು ಜಾಗ್ರತೆ ವಹಿಸುತ್ತಿದ್ದಾರೆ. ಪ್ರತಿ ನಿತ್ಯವೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ಧಾರೆ. ಈಗ ಅವರು ಇನ್ನೊಂದು ವಿಚಾರವನ್ನು ಹೊರಹಾಕಿದ್ಧಾರೆ. ಕೊರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆಯಾಗಿ ಅವರು ದಿನವೂ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯನ್ನು ಸೇವಿಸುತ್ತಿದ್ದಾರಂತೆ.

ಶ್ವೇತಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದ ವೇಳೆ ಈ ವಿಚಾರವನ್ನು ಅವರು ತಿಳಿಸಿದ್ದಾರೆ. “ನಾನು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಸೇವಿಸುತ್ತಿದ್ದೇನೆ. ಕಳೆದ ಒಂದೂವರೆ ವಾರದಿಂದ ನಾನು ನಿತ್ಯವೂ ಒಂದು ಮಾತ್ರೆ ನುಂಗುತ್ತಿದ್ದೇನೆ” ಎಂದಿದ್ದಾರೆ.

ಇತ್ತೀಚೆಗಷ್ಟೇ ಟ್ರಂಪ್ ಅವರು ಭಾರತದ ಮೇಲೆ ಒತ್ತಡ ಹಾಕಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಅಮೆರಿಕಕ್ಕೆ ತರಿಸಿಕೊಂಡಿದ್ದರು. ಮಲೇರಿಯಾ ರೋಗಕ್ಕೆ ಮದ್ದಾಗಿ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವು ಕೊರೋನಾ ರೋಗಕ್ಕೂ ಬಳಕೆ ಮಾಡಬಹುದು ಎಂದು ಆರಂಭಿಕ ಪ್ರಯೋಗಗಳಿಂದ ಸುಳಿವು ಸಿಕ್ಕಿತ್ತು. ಆದರೆ, ನಂತರದ ಪ್ರಯೋಗಗಳಲ್ಲಿ ಈ ಔಷಧ ಕೋವಿಡ್ ರೋಗಿಗಳಿಗೆ ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬುದು ತಿಳಿದುಬಂದಿದೆ. ಆದರೂ ಕೂಡ ಡೊನಾಲ್ಡ್ ಟ್ರಂಪ್ ಅವರು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಕೋವಿಡ್​​-19: ಒಂದೇ ದಿನ 4,970 ಹೊಸ ಕೇಸ್, ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಭಾರತದಲ್ಲಿ ಕೊರೋನಾ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಬಳಕೆ ಮಾಡಲು ಕೇಂದ್ರ ಸರ್ಕಾರ ಅಧಿಕೃತ ನಿರ್ದೇಶನ ನೀಡಿದ್ದರೂ ಈಗ ವಿವಿಧ ಔಷಧಗಳ ಪರೀಕ್ಷೆ ನಡೆಸಲಾಗುತ್ತಿದೆ. ಭಾರತದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಸಾಕಷ್ಟು ಪ್ರಮಾಣದಲ್ಲಿದ್ದು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಸರಬರಾಜು ಮಾಡಲಾಗಿದೆ.

ಇನ್ನು, ಡೊನಾಲ್ಡ್ ಟ್ರಂಪ್ ಅವರು ತಮ್ಮ ವೈಟ್ ಹೌಸ್​ನ ಮುಖ್ಯ ವೈದ್ಯರ ಒಪ್ಪಿಗೆ ಮೇರೆಗೆಯೇ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಸೇವಿಸುತ್ತಾ ಬಂದಿದ್ಧಾರಂತೆ. ಇಲ್ಲಿಯವರೆಗೆ ನನಗೇನೂ ಆಗಿಲ್ಲ. ಆರೋಗ್ಯವಂತನಂತೆ ಇದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ಧಾರೆ.

ಟ್ರಂಪ್ ಅವರ ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರಸಂಗವನ್ನು ವಿಪಕ್ಷವಾದ ಡೆಮೋಕ್ರಾಟ್​ನವರು ಟೀಕೆ ಮಾಡಿದ್ದಾರೆ. ಟ್ರಂಪ್ ಅವರ ವರ್ತನೆಯು ಜನರಿಗೆ ಸುಳ್ಳು ಮಾಹಿತಿ ನೀಡಿದಂತಾಗಿದೆ ಎಂದು ಚುಕ್ ಶುಮರ್ ಹರಿಹಾಯ್ದಿದ್ದಾರೆ.
First published: May 19, 2020, 9:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading