ಅಮೆರಿಕದಲ್ಲಿ ಕೋವಿಡ್​​-19 ಕಾವು: ಒಂದೇ ದಿನ 66,528 ಕೇಸ್​​, 3.18 ಮಿಲಿಯನ್​​ ದಾಟಿದ ಸೋಂಕಿತರ ಸಂಖ್ಯೆ

ಮಾರಕ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಾಗಾಗಿಯೇ ನಿನ್ನೆ ಒಂದೇ ದಿನ ಮಹಾಮಾರಿ ವೈರಸ್ 774 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದರೊಂದಿಗೆ ಸಾವಿನ ಸಂಖ್ಯೆ ಕೂಡ 133,969ಕ್ಕೆ ಏರಿಕೆ ಆಗಿದೆ.

news18-kannada
Updated:July 12, 2020, 9:49 AM IST
ಅಮೆರಿಕದಲ್ಲಿ ಕೋವಿಡ್​​-19 ಕಾವು: ಒಂದೇ ದಿನ 66,528 ಕೇಸ್​​, 3.18 ಮಿಲಿಯನ್​​ ದಾಟಿದ ಸೋಂಕಿತರ ಸಂಖ್ಯೆ
ಪ್ರಾತಿನಿಧಿಕ ಚಿತ್ರ
  • Share this:
ವಾಷಿಂಗ್ಟನ್(ಜು.12): ಜಗತ್ತಿನಾದ್ಯಂತ ಮಾರಕ ಕೋವಿಡ್​-19 ವೈರಸ್​ ರೋಗದ ಆರ್ಭಟ ಮುಂದುವರಿದಿದೆ. ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್​​-19 ಸೋಂಕು ಈಗ ಜಗತ್ತಿನ ಎಲ್ಲಾ ದೇಶಗಳಿಗೂ ವ್ಯಾಪಿಸಿದೆ. ಇದುವರೆಗೂ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸುಮಾರು 1 ಕೋಟಿ 25 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿದೆ.

ಇನ್ನು, ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕಾ ರಾಷ್ಟ್ರವನ್ನು ಕೊರೋನಾ ಬೆಂಬಿಡದಂತೆ ಕಾಡುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 66,528 ಮಂದಿಗೆ ಕೊರೋನಾ ವೈರಸ್​ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ. ಒಂದೇ ದಿನ 66,528 ಹೊಸ ಕೋವಿಡ್​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿರುವುದರಿಂದ ಇದುವರೆಗೂ ರಾಷ್ಟ್ರದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 3.18 ಮಿಲಿಯನ್'ಗೆ ತಲುಪಿದೆ.

ಮಾರಕ ಕೊರೋನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹಾಗಾಗಿಯೇ ನಿನ್ನೆ ಒಂದೇ ದಿನ ಮಹಾಮಾರಿ ವೈರಸ್ 774 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಇದರೊಂದಿಗೆ  ಸಾವಿನ ಸಂಖ್ಯೆ ಕೂಡ 133,969ಕ್ಕೆ ಏರಿಕೆ ಆಗಿದೆ.

ಕೊರೋನಾ ಎಫೆಕ್ಟ್​ನಿಂದಾಗಿ ಅಮೆರಿಕದ ಆರ್ಥಿಕತೆ ಅಧೋಗತಿಗೆ ಕುಸಿದಿದೆ. ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ದುರ್ಬಲಗೊಂಡಿರುವ ಅಮೆರಿಕದ ಆರ್ಥಿಕತೆಯನ್ನು ಮೇಲೆತ್ತಲು 2 ಟ್ರಿಲಿಯನ್ ಡಾಲರ್ ಯೋಜನೆಗೆ ಈ ಹಿಂದೆಯೇ ಸಹಿ ಹಾಕಿದ್ದರು.

ಶ್ವೇತ ಭವನವು ಈ ಆರ್ಥಿಕ ಯೋಜನೆಗೆ ಅನುಮೋದನೆ ನೀಡಿತ್ತು. ಅಮೆರಿಕ ಇತಿಹಾಸದಲ್ಲಿ ಇದು ಅತ್ಯಂತ ಬೃಹತ್ ಆರ್ಥಿಕ ಪರಿಹಾರ ಎಂದು ಎರಡೂ ಪಕ್ಷಗಳೂ ಹೆಚ್ಚಿನ ಸಂಖ್ಯೆಯಲ್ಲಿ ಹೇಳಿದ್ದರಿಂದ 2 ಟ್ರಿಲಿಯನ್​ ಡಾಲರ್​ ಆರ್ಥಿಕ ಪ್ಯಾಕೇಜ್​ಗೆ ಅನುಮೋದನೆ ನೀಡಲಾಗಿತ್ತು.

ಈ ಆರ್ಥಿಕ ಪ್ಯಾಕೇಜ್​ ಲಕ್ಷಾಂತರ ಅಮೆರಿಕನ್ನರಿಗೆ ಪಾವತಿಗಳನ್ನು ನೀಡಲು ಸಹಕಾರಿಯಾಗುತ್ತದೆ. ನಿರುದ್ಯೋಗ ಪ್ರಯೋಜನಗಳನ್ನು ಹೆಚ್ಚಿಸುತ್ತದೆ. ದೊಡ್ಡ ಮತ್ತು ಸಣ್ಣ ವ್ಯವಹಾರಗಳಿಗೆ ಸಾಲಗಳು, ಅನುದಾನಗಳು ಮತ್ತು ತೆರಿಗೆ ವಿನಾಯಿತಿಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೇ, ರಾಜ್ಯಗಳು, ಸ್ಥಳೀಯ ಸರ್ಕಾರಗಳು ಮತ್ತು ರಾಷ್ಟ್ರದಲ್ಲಿ ಹೆಚ್ಚಿನ ಆರೋಗ್ಯ ವ್ವಸ್ಥೆಯನ್ನು ಒದಗಿಸುತ್ತದೆ.
ಇದನ್ನೂ ಓದಿ: ವಾಸುದೇವ ಮಯ್ಯ ಆತ್ಮಹತ್ಯೆ ಬೆನ್ನಲ್ಲೀಗ ಮತ್ತೊಂದು ಬಹುಕೋಟಿ ವಂಚನೆ ಆರೋಪ: 14 ಮಂದಿ ವಿರುದ್ಧ ಎಫ್​ಐಆರ್​​

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ದೇಶಾದ್ಯಂತ ಆಸ್ಪತ್ರೆಗಳ ನಿರ್ಮಾಣಕ್ಕೆ ಟ್ರಂಪ್ ಚಿಂತನೆ ನಡೆಸಿದ್ದು, ಎಂಜಿನಿಯರ್​ಗಳ ಜೊತೆ ಚರ್ಚೆ ನಡೆಸಿದ್ದಾರೆ. ಜೊತೆಗೆ ವಿಶ್ವಾದ್ಯಂತ ಅಗತ್ಯವಿರುವ ದೇಶಗಳಿಗೆ ವೆಂಟಿಲೇಟರ್​ಗಳನ್ನು ಪೂರೈಸಲು ಸಿದ್ದವಾಗಿದ್ದೇವೆ ಎಂದು ಟ್ರಂಪ್​ ಹೇಳಿದ್ದಾರೆ. ಅಮೆರಿಕದ್ಯಾಂತ ವೆಂಟಿಲೇಟರ್​​​ ಮತ್ತು ವೈದ್ಯಕೀಯ ಉಪಕರಣಗಳನ್ನು ಪೂರೈಸಲು ಟ್ರಂಪ್ ಮುಂದಾಗಿದ್ದಾರೆ.
Published by: Ganesh Nachikethu
First published: July 12, 2020, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading