ಚಿತಾಗಾರದ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವ ಆ್ಯಂಬುಲೆನ್ಸ್: ಆಡಳಿತ ವೈಫಲ್ಯ ಒಪ್ಪಿಕೊಂಡರೇ ಬಿಬಿಎಂಪಿ ಕಮಿಷನರ್.!?

ಇಂದಿನಿಂದ ನೈಟ್ ಕರ್ಫ್ಯೂ ಸಮಯ ಬದಲಾವಣೆಯಾಗಿ ಮತ್ತೆ ಮುಂದುವರೆಯುತ್ತಿದೆ. ಹೀಗಾಗಿ ಹೊಸ ಗೈಡ್ ಲೈನ್ಸ್‌ಗೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ‌. ಅತ್ತ ಕೊರೋನಾ ಉಗ್ರರೂಪದ ದರ್ಶನಕ್ಕೆ ಆ್ಯಂಬುಲೆನ್ಸ್ ‌ಗಳು ಸಾಲು ಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್‌ಗಳು.!

ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್‌ಗಳು.!

 • Share this:
  ಬೆಂಗಳೂರು: ಕೊರೋನಾ ವಿಸ್ಫೋಟಗೊಳ್ಳುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮತ್ತೆ ಹೊಸ ಗೈಡ್ ಲೈನ್ಸ್ ಜಾರಿ ಮಾಡಿದೆ. ಅಲ್ಲದೇ ಹಿಂದಿದ್ದ ನೈಟ್ ಕರ್ಫ್ಯೂ ಸಮಯ ಬದಲಾವಣೆ ಮಾಡಿ ಮುಂದುವರೆಸಿದೆ. ರಾತ್ರಿ 9ರಿಂದ ಬೆಳಗ್ಗಿನ ಜಾವ 6 ಗಂಟೆವರೆಗೆ ನೈಟ್ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ. ಇದಕ್ಕೆ ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ನೈಟ್ ಕರ್ಫ್ಯೂ ಸಂಪೂರ್ಣ ಜವಾಬ್ದಾರಿ ಪೊಲೀಸ್ ಇಲಾಖೆ ವಹಿಸಿಕೊಂಡಿದ್ದೆಯಾದರೂ ಪೊಲೀಸ್ ಇಲಾಖೆ ಹೆಗಲಿಗೆ ಹೆಗಲಾಗಿ ಬಿಬಿಎಂಪಿ ಕೆಲಸ ಮಾಡಲಿದೆ. ಅಂಗಡಿಗಳು, ಮಾರುಕಟ್ಟೆ ಕ್ಲೋಸ್ ಹೊಣೆ ಬಿಬಿಎಂಪಿ ಮೇಲಿದೆ. ಹೋಟೆಲ್, ರೆಸ್ಟೋರೆಂಟ್, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯದಿದ್ದರೆ ದಂಡ ಹಾಕುವುದು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಡಿಕೊಳ್ಳಲಿದೆ.

  ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತರು ಗೌರವ್ ಗುಪ್ತಾ, ಸರ್ಕಾರಿ ಕಚೇರಿಗಳ ಸಿಬ್ಬಂದಿ ಶೇ.50 ರಷ್ಟು ಇರುವಂತೆ ನೋಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಅಗತ್ಯ ವಸ್ತು ಕೊರೋನಾ ನಿಯಮದಂತೆ ಎಲ್ಲಾ ಸಿಗುವಂತೆ ಮಾಡುವುದು. ಪೊಲೀಸರ ಜೊತೆಗೆ ಕೋ ಆರ್ಡಿನೇಷನ್ ಇಟ್ಟುಕೊಳ್ಳುವುದು ಹಾಗೂ ಅವರಿಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡುವುದು ನಮ್ಮ ಮೇಲಿರುವ ಜವಾಬ್ದಾರಿ ಎಂದಿದ್ದಾರೆ‌.

  ಇದನ್ನು ಓದಿ: ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸೋರಿಕೆ; ಮೃತರ ಸಂಖ್ಯೆ 22ಕ್ಕೆ ಏರಿಕೆ

  ಕೋವಿಡ್ ಎರಡನೇ ಅಲೆ.. ಕೊರೋನಾ ಭೀಕರತೆ ಸಾರಿ ಹೇಳುತ್ತಿದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್‌ಗಳು.!

  ಇನ್ನು ಕಳೆದ ಕೆಲವು ದಿನಗಳಿಂದ ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿರುವ ಆ್ಯಂಬುಲೆನ್ಸ್ ಕೊರೋನಾ ಭೀಕರತೆ ಸಾರಿ ಹೇಳುತ್ತಿದೆ. ಸುಮ್ಮನಹಳ್ಳಿ, ಪೀಣ್ಯ, ಕೂಡ್ಲುಗೇಟು ಹಾಗೂ ಯಲಹಂಕದ ಅಗ್ರಹಾರ ಚಿತಗಾರದ ಮುಂದೆ ಸೋಂಕಿತರ ಶವ ಹೊತ್ತು ಆ್ಯಂಬುಲೆನ್ಸ್ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆಯೂ ಮಾತನಾಡಿದ ಗೌರವ್ ಗುಪ್ತಾ ಅವರು, ಚಿತಾಗಾರಗಳ ಮೇಲೆ ಬಾರಿ ಒತ್ತಡ ಇದೆ. ಪಾಲಿಕೆ ವ್ಯಾಪ್ತಿಗೆ ಬರುವ ಚಿತಾಗಾರಕ್ಕೆ ಹೊರವಲಯಗಳಿಂದಲೂ ಮೃತ ದೇಹಗಳು ಬರ್ತಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ ಚಿತಾಗಾರದ ಮುಂದೆ ಶವ ಹೊತ್ತ ಆ್ಯಂಬುಲೆನ್ಸ್​ಗಳ ಕ್ಯೂ ಕಾಣ್ತಿದೆ. ನಗರದ ಹೊರವಲಯಗಳ ಶವ ಅಲ್ಲೇ ವಿಲೇವಾರಿ ಮಾಡಬೇಕು. ಚಿತಾಗಾರದ ಈ ವ್ಯವಸ್ಥೆ ಸರಿ ಮಾಡಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ ಎಂದರು.

  ನಗರದಲ್ಲಿ ಹಾಸಿಗೆಗಳ ಕೊರತೆ ಇಲ್ಲ.. ಆದರೆ ಐಸಿಯು ಬೆಡ್‌ಗಳು ಖಾಲಿ.!!

  ಇನ್ನು ಬೆಂಗಳೂರು ನಗರದಲ್ಲಿ ಉದ್ಭವವಾಗಿರುವ ದೊಡ್ಡ ಸಮಸ್ಯೆಲ್ಲೊಂದು ಹಾಸಿಗೆ ಸಿಗದೆ ಇರುವುದು. ಸೋಂಕಿತರು ಬೆಡ್‌ಗಳು ಸಿಗದೆ ಪರದಾಡ್ತಿದ್ರೆ ಇತ್ತ ಬಿಬಿಎಂಪಿ ನಗರದಲ್ಲಿ ಹಾಸಿಗೆಗೆ ಕೊರತೆ ಇಲ್ಲ ಎಂದು ಹೇಳಿದೆ. ಆದರೆ ವೆಂಟಿಲೇಟರ್ ಸೇರಿದಂತೆ ಯಾವುದೇ ಐಸಿಯೂ ಬೆಡ್‌ಗಳು ಭರ್ತಿಯಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಸರ್ಕಾರ ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಸಾಕಷ್ಟು ಚರ್ಚೆ ಮಾಡಿದೆ. ನಗರದಲ್ಲಿ ಈಗಾಗಲೇ 12 ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅವುಗಳಲ್ಲಿ 10 ಕೋವಿಡ್ ಕೇರ್ ಸೆಂಟರ್ ಗಳು ಸಿದ್ಧವಾಗಿವೆ. ಸುವರ್ಣ ಸುರಕ್ಷಾ ವತಿಯಿಂದ ಬಿಬಿಎಂಪಿ 7 ಸಾವಿರ ಬೆಡ್ ಪಡೆದಿದೆ.‌ 5,600 ಬೆಡ್ ಗಳು ಈಗಾಗಲೇ ಸಿಕ್ಕಿದೆ. ಆದರೆ ಸೋಂಕಿತರಿಗೆ ಮಾತ್ರ ಹಾಸಿಗೆಗಳು ಸಿಗದೆ ನರಳಾಡುವ ಸ್ಥಿತಿ ನಿರ್ಮಾಣ ಎದುರಾಗಿದೆ. ಇದರ ಜೊತೆಗೆ ಸೋಂಕಿತರಿಗೆ ಬಿಯು ನಂಬರ್ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು. ಕಳೆದ ನಾಲ್ಕು ದಿನಗಳಿಂದ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಸೂಕ್ತವಾಗಿ ಬಿಯೂ ನಂಬರ್ ಸೋಂಕಿತರಿಗೆ ಹಂಚಿಕೆಯಾಗಿಲ್ಲ ಎಂದು ಬಿಬಿಎಂಪಿ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ.

  ವರದಿ: ಆಶಿಕ್ ಮುಲ್ಕಿ
  Published by:HR Ramesh
  First published: