ಅಮವಾಸ್ಯೆ ಎಫೆಕ್ಟ್- ಬಾರದ ಪ್ರಯಾಣಿಕರು; ವಿಜಯಪುರದಲ್ಲಿ ಬಸ್​ಗಳ ಸಂಚಾರದಲ್ಲಿ ಭಾರಿ ಕಡಿತ

ವಿಜಯಪುರ ನಗರದಲ್ಲಿ ಎರಡು ಬಸ್ ನಿಲ್ದಾಣಗಳಿದ್ದು, ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸೆಟಲೈಟ್ ಬಸ್ ನಿಲ್ದಾಣ ಎರಡೂ ಕಡೆಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಬಸ್

ಬಸ್

  • Share this:
ವಿಜಯಪುರ(ಮೇ. 22): ಅಮವಾಸ್ಯೆ ಬಸವನಾಡಿನಲ್ಲಿ ಬಸ್​ಗಳ ಸಂಚಾರದ ಮೇಲೆ ಪರಿಣಾಮ ಬೀರಿದಂತಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರು ಬಸ್​ಗಳಿಗೆ ಭಾರಿ ಬೇಡಿಕೆ ಬಂದಿತ್ತು. ಆದರೆ, ಇಂದು ಆ ಬೇಡಿಕೆ ಶೇ. 50ಕ್ಕಿಂತಲೂ ಕಡಿಮೆಯಾಗಿದೆ.  ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕಡಿತ ಉಂಟಾಗಿದೆ. ನಿನ್ನೆ ಒಟ್ಟು 13 ಬಸ್​ಗಳು ವಿಜಯಪುರದಿಂದ ಬೆಂಗಳೂರಿಗೆ ತೆರಳಿದ್ದವು. ಆದರೆ, ಇಂದು ವಿಜಯಪುರದಿಂದ ಬೆಂಗಳೂರಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಈವರೆಗೆ ಕೇವಲ ನಾಲ್ಕು ಬಸ್​ಗಳು ಮಾತ್ರ ರಾಜಧಾನಿಗೆ ಪ್ರಯಾಣ ಬೆಳೆಸಿವೆ. ಉಳಿದ ಊರುಗಳ ಬಸ್​ಗಳನ್ನೂ ಕೇಳವರೇ ಇಲ್ಲದಂತಾಗಿದೆ.

ಪ್ರಯಾಣಿಕರ ಸಂಖ್ಯೆಯೂ ಭಾರಿ ಕಡಿಮೆಯಾಗಿದ್ದು, ಬಸ್ ಆರಂಭವಾದ ಮೊದಲ ದಿನ 1500, ಎರಡನೇ ದಿನ 2000, ನಿನ್ನೆ 3100 ಪ್ರಯಾಣಿಕರ ಸಂಚಾರ ಮಾಡಿದ್ದರು.  ಇದರಿಂದ ಮೊದಲ ದಿನ ರೂ. 1.50 ಲಕ್ಷ, 2ನೇ ದಿನ ರೂ. 4 ಲಕ್ಷ ಮತ್ತು ನಿನ್ನೆ 7 ಲಕ್ಷ ರೂಪಾಯಿ ಹಣ ಸಂಗ್ರಹವಾಗಿತ್ತು.  ಮೊದಲ ದಿನ 83, ಎರಡನೇ ದಿನ 117, ನಿನ್ನೆಯೂ 117 ಬಸ್​ಗಳು ವಿಜಯಪುರ ಜಿಲ್ಲೆಯಲ್ಲಿ ಓಡಾಡಿದ್ದವು. ಆದರೆ, ಇಂದು ಆ ಸಂಖ್ಯೆಯೂ ಕಡಿಮೆಯಾಗಲಿದೆ. ಇಂದು ಬೇರೆ ಊರುಗಳಿಗೂ ಬಸ್ ಸಂಖ್ಯೆ ಕಡಿತವಾಗಿದ್ದು, ಹಣ ಸಂಗ್ರಹವೂ ಕುಸಿತವಾಗುವ ಸಾಧ್ಯತೆ ಇದೆ. ಜನರಲ್ಲಿ ಕೊರೊನಾ ಭೀತಿಯೂ ಇನ್ನೂ ಹೋಗಿಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ವಿಜಯಪುರ ನಗರದಲ್ಲಿ ಎರಡು ಬಸ್ ನಿಲ್ದಾಣಗಳಿದ್ದು, ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮತ್ತು ಸೆಟಲೈಟ್ ಬಸ್ ನಿಲ್ದಾಣ ಎರಡೂ ಕಡೆಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಅಷ್ಟೇ ಅಲ್ಲ, ವಿಜಯಪುರ ನಗರ ಬಸ್ ಸಂಚಾರದಲ್ಲಿಯೂ ಪ್ರಯಾಣಿಕರು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ ಎಂದು ವಿಜಯಪುರ ಎನ್ ಇ ಕೆ ಆರ್ ಟಿ ಸಿ ಮೂಲಗಳು ನ್ಯೂಸ್ 18 ಕನ್ನಡಕ್ಕೆ ತಿಳಿಸಿವೆ.

ಇದನ್ನೂ ಓದಿ : ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 7 ವಿಶೇಷ ಶ್ರಮಿಕ್​​​​ ರೈಲು: 10500 ಸಾವಿರ ವಲಸಿಗರು ತಾಯ್ನಾಡಿಗೆ ವಾಪಸ್​​​

ಉತ್ತರ ಕರ್ನಾಟಕದಲ್ಲಿ ಜನರು ಸಾಮಾನ್ಯವಾಗಿ ಅಮವಾಸ್ಯೆ ದಿನ ದೇವಸ್ಥಾನ ಮತ್ತು ಸುಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಾರೆ.  ಆದರೆ, ಈಗ ಕೊರೋನಾದಿಂದಾಗಿ ಎಲ್ಲ ದೇವಸ್ಥಾನಗಳ ಬಾಗಿಲುಗಳು ಬಂದ್ ಆಗಿರುವುದರಿಂದ ಪ್ರಯಾಣಿಕರು ಧಾರ್ಮಿಕ ಸ್ಥಳಗಳಿಗೂ ತೆರಳಲು ಸಾಧ್ಯವಾಗುತ್ತಿಲ್ಲ. ಇದೂ ಕೂಡ ಇಂದು ಬಸ್​ಗಳ ಸಂಚಾರ ಕಡಿಮೆಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.
First published: