Amarnath Yatra 2020: ‘ಅಮರನಾಥ ಯಾತ್ರೆ ನಿಲ್ಲಿಸಿ‘ ಎಂದು ಸುಪ್ರೀಂ​ ಮೊರೆ - ಅರ್ಜಿದಾರರ ಮನವಿ ತಿರಸ್ಕರಿಸಿದ ಕೋರ್ಟ್​

ಜುಲೈ 31ರವರೆಗೆ ಅಮರನಾಥ ದೇವಸ್ಥಾನಕ್ಕೆ ಭಕ್ತರ ಭೇಟಿಗೆ ಅವಕಾಶ ಇಲ್ಲ. ಆದರೀಗ ವೈಷ್ಣೋದೇವಿ ದೇವಸ್ಥಾನವನ್ನು ಮೊದಲು ಸ್ಥಳೀಯ ಜನರಿಗೆ ತೆರೆಯಲಾಗುವುದು. ನಂತರ ಪರಿಸ್ಥಿತಿ ನೋಡಿಕೊಂಡು ಇತರ ರಾಜ್ಯಗಳ ಜನರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿದು ಬಂದಿದೆ.


Updated:July 13, 2020, 5:39 PM IST
Amarnath Yatra 2020: ‘ಅಮರನಾಥ ಯಾತ್ರೆ ನಿಲ್ಲಿಸಿ‘ ಎಂದು ಸುಪ್ರೀಂ​ ಮೊರೆ - ಅರ್ಜಿದಾರರ ಮನವಿ ತಿರಸ್ಕರಿಸಿದ ಕೋರ್ಟ್​
ಸುಪ್ರೀಂ ಕೋರ್ಟ್​​
  • Share this:
ನವದೆಹಲಿ(ಜು.13): ಮಾರಕ ಕೋವಿಡ್​​-19 ವೈರಸ್​​​ ವ್ಯಾಪಕವಾಗಿ ಹರಡುತ್ತಿರುವ ಕಾರಣ ಅಮರನಾಥ ಯಾತ್ರೆಗೆ ಅವಕಾಶ ನೀಡಬಾರದು ಎಂದು ಸಲ್ಲಿಸಲಾಗಿದ್ದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್​​ ತಿರಸ್ಕರಿಸಿದೆ. ಇಂದು ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ, ಅಮರನಾಥ ಯಾತ್ರೆ ನಡೆಸಲೇಬೇಕೆಂದು ದೇಗುಲ ಮಂಡಳಿ ನಿರ್ಧಾರ ಮಾಡಿದೆ. ಯಾತ್ರೆ ವಿಚಾರದಲ್ಲಿ ಅಮರನಾಥ ದೇಗುಲ ಮಂಡಳಿ ತೆಗೆದುಕೊಂಡ ನಿರ್ಧಾರವೇ ಅಂತಿಮ. ನಾವು ಈ ವಿಚಾರಕ್ಕೆ ಮಧ್ಯಪ್ರವೇಶಿಸುವುದಿಲ್ಲ ಎಂದು ಖಡಕ್​ ಆಗಿ ಹೇಳಿದೆ.

ಇನ್ನು, ಅರ್ಜಿದಾರ ಕೊರೋನಾ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಗೆ ಯಾರು ಭಕ್ತಾಧಿಗಳು ಹೋಗದೆಂತೆ ಆದೇಶಿಸಿ ಎಂದು ಸುಪ್ರೀಂಕೋರ್ಟ್​ ಮನವಿ ಸಲ್ಲಿಸಿದ್ದ. ಹಾಗೆಯೇ ಈ ವಿಚಾರ ಸಂಬಂಧ ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಅಮರನಾಥ ದೇಗುಲ ಮಂಡಳಿಗೆ ಸೂಚನೆ ನೀಡಿ ಎಂದು ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದ. ಆದರೀಗ, ಹೀಗೆ ಮಾಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್​ ಅರ್ಜಿ ತಿರಸ್ಕರಿಸಿದೆ.

ಇಡೀ ಜಗತ್ತನ್ನು ಬೆಂಬಿಡದೇ ಕಾಡುತ್ತಿರುವ ಕೊರೋನಾ ವೈರಸ್​ನಿಂದ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲಾಗಿದೆ. ಆದರೆ, ಅಮರನಾಥ ಯಾತ್ರೆಗೆ ಮಾತ್ರ ಕೇಂದ್ರ ಸರ್ಕಾರ ಅವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಅಮರನಾಥ ದೇಗುಲ ಮಂಡಳಿ ಎಲ್ಲ ಸಿದ್ದತೆ ನಡೆಸಿಕೊಳ್ಳುತ್ತಿದೆ.

ಜುಲೈ 21ರಿಂದಲೇ ಅಮರನಾಥ ಯಾತ್ರೆ ಪ್ರಾರಂಭಿಸುವ ಸಾಧ್ಯತೆ ಇದೆ. ಅಮರನಾಥ ಯಾತ್ರೆ ಪ್ರಯಾಣದ ಅಂತಿಮ ದಿನಾಂಕದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಈ ಯಾತ್ರೆಯಲ್ಲಿ ಒಂದು ದಿನಕ್ಕೆ 500ಕ್ಕಿಂತ ಹೆಚ್ಚು ಭಕ್ತರು ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂಬ ಚರ್ಚೆ ನಡೆದಿದೆ.

ಜುಲೈ 31ರವರೆಗೆ ಅಮರನಾಥ ದೇವಸ್ಥಾನಕ್ಕೆ ಭಕ್ತರ ಭೇಟಿಗೆ ಅವಕಾಶ ಇಲ್ಲ. ಆದರೀಗ ವೈಷ್ಣೋದೇವಿ ದೇವಸ್ಥಾನವನ್ನು ಮೊದಲು ಸ್ಥಳೀಯ ಜನರಿಗೆ ತೆರೆಯಲಾಗುವುದು. ನಂತರ ಪರಿಸ್ಥಿತಿ ನೋಡಿಕೊಂಡು ಇತರ ರಾಜ್ಯಗಳ ಜನರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Google For India 2020: ಭಾರತದ ಡಿಜಿಟಲೀಕರಣಕ್ಕೆ ಕೈಜೋಡಿಸಿದ ಗೂಗಲ್​​: 75 ಸಾವಿರ ಕೋಟಿ ರೂ. ಹೂಡಿಕೆಇನ್ನು, ದೇಶದಲ್ಲಿ ನಿನ್ನೆ ಒಂದೇ ದಿನ 28,701 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 8,78,254ಕ್ಕೆ ಏರಿಕೆಯಾಗಿದೆ. ಇದಲ್ಲದೆ ಭಾನುವಾರ 500 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 23 ಸಾವಿರದ ಗಡಿ ದಾಟಿದೆ.
Published by: Ganesh Nachikethu
First published: July 13, 2020, 5:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading