PM Cares ಫಂಡ್​ಗೆ ವಿದೇಶೀ ದೇಣಿಗೆಗೆ ಅವಕಾಶ; ಇದು ಹೊಸ ನೀತಿಯೇನಲ್ಲ: ಸರ್ಕಾರದ ಮೂಲಗಳು ಸ್ಪಷ್ಟನೆ

ಪ್ರಧಾನ ಮಂತ್ರಿ ನೈಸರ್ಗಿಕ ವಿಕೋಪ ಪರಿಹಾರ ನಿಧಿ ಒಂದು ಪಬ್ಲಿಕ್ ಟ್ರಸ್ಟ್ ಆಗಿದ್ದು 2011ರಿಂದಲೂ ವಿದೇಶೀ ದೇಣಿಗೆ ಪಡೆಯುತ್ತಿದೆ. ಇದೇ ನೀತಿಯನ್ನು ಈಗಲೂ ಮುಂದುವರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

news18
Updated:April 2, 2020, 12:56 PM IST
PM Cares ಫಂಡ್​ಗೆ ವಿದೇಶೀ ದೇಣಿಗೆಗೆ ಅವಕಾಶ; ಇದು ಹೊಸ ನೀತಿಯೇನಲ್ಲ: ಸರ್ಕಾರದ ಮೂಲಗಳು ಸ್ಪಷ್ಟನೆ
ಪ್ರಧಾನಿ ಮೋದಿ.
  • News18
  • Last Updated: April 2, 2020, 12:56 PM IST
  • Share this:
ನವದೆಹಲಿ(ಏ. 02): ಕೊರೋನಾ ವೈರಸ್ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ದೇಶಕ್ಕೆ ಸಹಾಯ ಮಾಡಲು ಇಚ್ಛಿಸುವ ವಿದೇಶೀ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆಂತರಿಕ ಬಿಕ್ಕಟ್ಟಿನಲ್ಲಿ ವಿದೇಶಿಗರಿಂದ ದೇಣಿಗೆ ಸ್ವೀಕರಿಸಬಾರದು ಎಂದು ಈ ಮೊದಲಿದ್ದ ನೀತಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಕೇಳಿಬಂದಿದೆ. ಆದರೆ, ಸರ್ಕಾರದ ಮೂಲಗಳ ಪ್ರಕಾರ, ಬಿಕ್ಕಟ್ಟು ಪರಿಸ್ಥಿತಿಯಲ್ಲಿ ವಿದೇಶಿಗರಿಂದ ದೇಣಿಗೆ ಪಡೆಯುವ ಹಿಂದಿನ ನೀತಿಯನ್ನೇ ಈಗಲೂ ಮುಂದುವರಿಸಲಾಗಿದೆ.

“ಪ್ರಧಾನ ಮಂತ್ರಿಗಳ ತುರ್ತು ಸಂದರ್ಭ ನಾಗರಿಕ ಸಹಾಯ ಮತ್ತು ಪರಿಹಾರ ನಿಧಿಗೆ (PM CARES Fund) ವಿದೇಶಗಳಿಂದ ದೇಣಿಗೆ ಪಡೆಯಲು ಒಪ್ಪಿಗೆ ನೀಡಲಾಗಿದೆ. ಸರ್ಕಾರದ ಯತ್ನಗಳಿಗೆ ಬೆಂಬಲ ನೀಡಲು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಮತ್ತು ಬಿಕ್ಕಟ್ಟಿನ ತೀವ್ರತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಹಾಗೂ ವಿದೇಶಗಳಲ್ಲಿ ಇರುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ದೇಣಿಗೆ ನೀಡಬಹುದಾಗಿದೆ” ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಮುಂಚೆ ವಿದೇಶಿಗರಿಂದ ದೇಣಿಗೆ ಪಡೆಯುವ ನೀತಿ ಇರಲಿಲ್ಲ ಎಂದೂ ಹೇಳಲಾಗಿರುವುದು ತಪ್ಪು ಎಂದೂ ಮೂಲಗಳು ಸ್ಪಷ್ಪಪಡಿಸಿವೆ.

ಇದನ್ನೂ ಓದಿ: ವೈದ್ಯರ ಮೇಲೇ ಉಗುಳ್ತಾರೆ!; ಇದು ದೆಹಲಿ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡವರ ಅಸಭ್ಯ ವರ್ತನೆ

ಪ್ರಧಾನ ಮಂತ್ರಿ ನೈಸರ್ಗಿಕ ವಿಕೋಪ ಪರಿಹಾರ ನಿಧಿ ಒಂದು ಪಬ್ಲಿಕ್ ಟ್ರಸ್ಟ್ ಆಗಿದ್ದು 2011ರಿಂದಲೂ ವಿದೇಶೀ ದೇಣಿಗೆ ಪಡೆಯುತ್ತಿದೆ. ಇದೇ ನೀತಿಯನ್ನು ಈಗಲೂ ಮುಂದುವರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

First published: April 2, 2020, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading