ಮೈಸೂರಿನ ಕೊರೋನಾ ಅಡ್ಡೆ ಜುಬಿಲೆಂಟ್ಸ್ ಫಾರ್ಮಾಗೆ ಲೀಗಲ್ ನೋಟಿಸ್; ಕಾರ್ಖಾನೆ ಪುನರಾರಂಭಕ್ಕೆ ಇದೆಯಾ ಒತ್ತಡ?

ಎಲ್ಲ ತನಿಖೆ ಮುಗಿದು ಕಾರ್ಖಾನೆ ಬಗ್ಗೆ ಇರುವ ಅನುಮಾನ ಬಗೆಹರಿಯಬೇಕು. ಅಲ್ಲಿಯವರೆಗೂ ಕಾರ್ಖಾನೆ ಪುನಾರರಂಭ ಆಗಬಾರದು‌ ಎಂದು ಶಾಸಕ ಹರ್ಷವರ್ಧನ್ ಆಗ್ರಹಿಸಿದ್ದಾರೆ.

news18-kannada
Updated:April 9, 2020, 7:55 PM IST
ಮೈಸೂರಿನ ಕೊರೋನಾ ಅಡ್ಡೆ ಜುಬಿಲೆಂಟ್ಸ್ ಫಾರ್ಮಾಗೆ ಲೀಗಲ್ ನೋಟಿಸ್; ಕಾರ್ಖಾನೆ ಪುನರಾರಂಭಕ್ಕೆ ಇದೆಯಾ ಒತ್ತಡ?
ಜುಬಿಲೆಂಟ್ ಕಾರ್ಖಾನೆ
  • Share this:
ಮೈಸೂರು(ಏ. 09): ರಾಜ್ಯಾದ್ಯಂತ ಕೊರೊನಾ ಸೋಂಕು ಹರಡುವಿಕೆಗೆ ಪರೋಕ್ಷ ಕಾರಣವಾಗಿರುವ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಜುಬುಲೆಂಟ್ಸ್ ಕಾರ್ಖಾನೆಗೆ ಲೀಗಲ್‌ ನೋಟಿಸ್ ಜಾರಿಯಾಗಿದೆ. ಈ ಬಗ್ಗೆ ಇಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.

"ಜುಬುಲೆಂಟ್ಸ್ ಕಾರ್ಖಾನೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಯಿತು‌. ಮುಖ್ಯಮಂತ್ರಿಗಳು ಈ ಬಗ್ಗೆ ಕಾನೂನಾತ್ಮಕ ತನಿಖೆ ಆಗಲಿ ಅಂತ ಹೇಳಿದ್ದಾರೆ. ಕಾರ್ಖಾನೆ ಮಾಲೀಕರು ಎಷ್ಟೇ ಪ್ರಭಾವಿತರಾದರೂ ತನಿಖೆ ನಡೆಯಲಿದೆ. ಈಗಾಗಲೇ ಜುಬಿಲೆಂಟ್ಸ್ ಕಾರ್ಖಾನೆಗೆ ಲಿಗಲ್ ನೋಟಿಸ್ ನೀಡಲಾಗಿದೆ. ನಾನು ಮತ್ತು ಆರೋಗ್ಯ ಸಚಿವರು ಸಿಎಂಗೆ ಇಡೀ ಪ್ರಕರಣದ ಮಾಹಿತಿ ನೀಡಿದ್ದೇವೆ.  ಸದ್ಯ ಸಮಸ್ಯೆಯಿಂದ ಹೊರಬರಬೇಕು. ಸೋಂಕು ಹೇಗೆ ಬಂತು ಅನ್ನೋದು ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಜುಬುಲೆಂಟ್ಸ್ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದೆ" ಎಂದು ವಿ. ಸೋಮಣ್ಣ ಹೇಳಿದರು.

ಇದನ್ನೂ ಓದಿ: ಕೋವಿಡ್-19 ಬಿಕ್ಕಟ್ಟು: ತುರ್ತು ಸ್ಪಂದನೆ ವ್ಯವಸ್ಥೆಗೆ ಕೇಂದ್ರದಿಂದ 15,000 ಕೋಟಿ ರೂ ಪ್ಯಾಕೇಜ್

ಇನ್ನು, ಜುಬುಲೆಂಟ್ಸ್ ಕಾರ್ಖಾನೆ ಆರಂಭಕ್ಕೆ ಒತ್ತಡ ಬರುತ್ತಿವೆ. ಒತ್ತಡ ಹಾಕುವವರಲ್ಲಿ ರಾಜಕಾರಣಿಗಳು, ಉದ್ಯಮಿಗಳು ಇದ್ದಾರೆ. ಯಾರು ಅಂತ ನಾನು ಹೇಳಲ್ಲ. ಆದ್ರೆ ನಾನು ಯಾರ ಒತ್ತಡಕ್ಕೂ ಮಣಿಯೋಲ್ಲ ಅಂತ ಮೈಸೂರಿನಲ್ಲಿ ನಂಜನಗೂಡು ಶಾಸಕ ಹರ್ಷ‌ವರ್ಧನ್ ತಿಳಿಸಿದರು.

ಮೈಸೂರಿನಲ್ಲಿ ನ್ಯೂಸ್‌18 ಜೊತೆ ಮಾತನಾಡಿರುವ ಅವರು, ಜುಬಿಲೆಂಟ್ಸ್ ಕಾರ್ಖಾನೆಯವರು ನಿರ್ಲಕ್ಷ್ಯ ತೋರಿದ್ದಾರೆ. ನವೆಂಬರ್‌ನಲ್ಲಿ ಆರ್ಡ‌ರ್ ಮಾಡಿ ಫೆಬ್ರವರಿ ತಿಂಗಳಲ್ಲೇ ಚೀನಾದಿಂದ ಕಚ್ಚಾ ವಸ್ತುಗಳನ್ನ ಆಮದು ಮಾಡಿಕೊಂಡಿದ್ದಾರೆ. ಈ ರಿಸ್ಕ್ ಯಾಕೆ ಬೇಕಾಗಿತ್ತು? ಸೋಂಕು ಹರಡುವಲ್ಲಿ ಕಾರ್ಖಾನೆ ನಿರ್ಲಕ್ಷ್ಯ ವಹಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆ ಪುರನಾರಂಭ ಬೇಡ. ಈ ಬಗ್ಗೆ ಒಂದು ಉನ್ನತಮಟ್ಟದ ತನಿಖೆಯಾಗಲಿ. ಕ್ಷೇತ್ರದ ಶಾಸಕನಾಗಿ ಕಾರ್ಖಾನೆಯಿಂದಾಗಿರುವ ಸಮಸ್ಯೆ ನನಗೆ ಮಾತ್ರ ಗೊತ್ತು. ಆಸ್ಟ್ರೇಲಿಯಾ‌ದಿಂದ ಒಬ್ಬರು ಬಂದಿದ್ದರು ಅನ್ನೋದು ಸಹ ವದಂತಿ ಇದೆ.ಯಾವುದನ್ನೇ ಆಗಲಿ ಕಾರ್ಖಾನೆಯವರು ನೇರವಾಗಿ ಸ್ಪಷ್ಟಪಡಿಸಲಿ. ಅದನ್ನ ಬಿಟ್ಟು ಸಮಯ ಹಾಳು ಮಾಡುವ ಕೆಲಸ ಬೇಡ ಎಂದು ಬುದ್ಧಿ ಹೇಳಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮುಖ್ಯಮಂತ್ರಿಗಳು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಅವರು ಕೊಟ್ಟ 25 ಲಕ್ಷ ದೇಣಿಗೆಯನ್ನು ವಾಪಸ್ ಕೊಡಬೇಕು. ಎಲ್ಲ ತನಿಖೆ ಮುಗಿದು ಕಾರ್ಖಾನೆ ಬಗ್ಗೆ ಇರುವ ಅನುಮಾನ ಬಗೆಹರಿಯಬೇಕು. ಅಲ್ಲಿಯವರೆಗೂ ಕಾರ್ಖಾನೆ ಪುನಾರರಂಭ ಆಗಬಾರದು‌ ಎಂದು ಹರ್ಷವರ್ಧನ್ ಆಗ್ರಹಿಸಿದರು.

ಇದನ್ನೂ ಓದಿ: ‘ಮಲಗಿದ್ರೆ ಸಾವು, ಕೂತಿದ್ರೆ ರೋಗ, ನಡೀತಿದ್ರೆ ಜೀವನ, ಎರಡರಲ್ಲಿ ಒಂದು ಮಾಡಿ‘ - ಬಿಎಸ್​​ವೈಗೆ ಉಪೇಂದ್ರ ಹೀಗೊಂದು ಸಲಹೆಶಾಸಕರ ಈ ಮಾತಿಗೆ ಉಸ್ತುವಾರಿ ಸಚಿವರು ತಿರುಗೇಟು ನೀಡಿದರು. ಜುಬಿಲೆಂಟ್ಸ್ ಕಾರ್ಖಾನೆ ಪುರನಾರಂಭ ವಿಚಾರವಾಗಿ ಶಾಸಕ ಹರ್ಷವರ್ಧನ್ ಯಾವ ಹಿನ್ನೆಲೆಯಿಂದ ಹೇಳಿಕೆ‌ ನೀಡಿದ್ದಾರೋ ಗೊತ್ತಿಲ್ಲ. ಮಾತನಾಡುವ ಮುನ್ನ ನಾವು ‌ವಸ್ತುಸ್ಥಿತಿ ನೋಡಬೇಕು ಅಲ್ಲಿ 1,500 ನೌಕರರು ಇದ್ದಾರೆ. ಅವರೆಲ್ಲ ಕ್ವಾರೆಂಟೈನ್ ಆಗಿದ್ದಾರೆ. ಅವರನ್ನ ಮೊದಲು ಸೋಂಕಿನ ಭಯದಿಂದ ವಾಪಸ್ ಕರೆತರಬೇಕು‌. ನಂತರ ಕಾರ್ಖಾನೆ ತೆರೆಯೋದು ಹಾಗೂ ಮುಚ್ಚೋದರ ಕಾನೂನಿನ ವಿಚಾರ ಮಾತನಾಡೋಣ. ಎಲ್ಲ ವಿಚಾರ ಸಿಎಂ ಹಾಗೂ ಕಾರ್ಯದರ್ಶಿ ಗಮನಕ್ಕೆ ತಂದಿದ್ದೇವೆ. ಅವರೇ ಈ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ಹೇಳುವ ಮೂಲಕ ಕಾರ್ಖಾನೆ ಪುನಾರಾರಂಭದ ವಿಚಾರಕ್ಕೆ ಸೋಮಣ್ಣ ದ್ವಂದ ನಿಲುವು ತೋರಿದರು.

ಇವೆಲ್ಲದರ ನಡುವೆ ಮೈಸೂರಿನಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 37ರಲ್ಲಿ ಓರ್ವ ಸೋಂಕಿತ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದು, ಉಳಿದ 36 ಸೋಂಕಿತರಿಗೆ ಮೈಸೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. P183 ಎಂದು ಗುರುತಿಸಲಾಗರುವ 55 ವರ್ಷದ ಸೋಂಕಿತ ವ್ಯಕ್ತಿಯು P104 ಅವರ ತಂದೆಯಾಗಿದ್ದಾರೆ. 68 ವರ್ಷದ P 184 ವ್ಯಕ್ತಿ P159ರ ತಂದೆಯಾಗಿದ್ದಾರೆ. ಇಬ್ಬರನ್ನೂ ಈ ಮೊದಲೇ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಹಾಗೂ ಸೋಂಕು ಲಕ್ಷಣ ಹಿನ್ನೆಲೆಯಲ್ಲಿ ಇವರಿಬ್ಬರ ಸ್ಯಾಂಪಲ್​ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪರೀಕ್ಷೆ ವರದಿಯಲ್ಲಿ ಸೋಂಕು ತಗುಲಿರುವುದು ದೃಢವಾಗರೋದನ್ನ‌ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಖಾತ್ರಿ ಪಡಿಸಿದ್ದಾರೆ.

ವರದಿ: ಪುಟ್ಟಪ್ಪ

First published: April 9, 2020, 7:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading