HOME » NEWS » Coronavirus-latest-news » ALLAHABAD HC ISSUES NOTICE TO STATE ELECTION COMMISSION OVER DEATH OF 135 PANCHAYAT POLL STAFF MAK

ಯುಪಿ ಪಂಚಾಯತ್ ಚುನಾವಣೆಯಲ್ಲಿ 135 ಸಿಬ್ಬಂದಿ ಕೊರೋನಾಗೆ ಬಲಿ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಶೋ-ಕಾಸ್ ನೋಟಿಸ್ ನೀಡಿ, ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ವಿಫಲವಾಗಿದ್ದು ಏಕೆ? ಎಂದು ಪ್ರಶ್ನಿಸಿದೆ.

news18-kannada
Updated:April 28, 2021, 7:06 PM IST
ಯುಪಿ ಪಂಚಾಯತ್ ಚುನಾವಣೆಯಲ್ಲಿ 135 ಸಿಬ್ಬಂದಿ ಕೊರೋನಾಗೆ ಬಲಿ: ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್
ಅಲಹಾಬಾದ್ ಹೈಕೋರ್ಟ್.
  • Share this:
ಅಲಹಾಬಾದ್​ (ಏಪ್ರಿಲ್ 28); ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯತ್​ ಚುನಾವಣೆ ನಡೆದಿತ್ತು. ಆದರೆ, ಈ ಚುನಾವಣೆಯಲ್ಲಿ ಪಂಚಾಯತ್ ಚುನಾವಣಾ ಕೆಲಸಕ್ಕೆ ನಿಯೋಜನಗೊಂಡ 135 ವಿದ್ಯಾರ್ಥಿಗಳು, 'ಶಿಕ್ಷಾ ಮಿತ್ರರು' ಮತ್ತು ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ತನಿಖಾಧಿಕಾರಿಗಳು ಕೋವಿಡ್ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹಿಂದಿ ದಿನಪತ್ರಿಕೆ 'ಅಮರ್ ಉಜಲಾ' ಇತ್ತೀಚೆಗೆ ಆಘಾತಕಾರಿ ಸುದ್ದಿಯೊಂದನ್ನು ಭಿತ್ತರಿಸಿತ್ತು. ಈ ಸುದ್ದಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶ ಚುನಾವಣಾ ಆಯೋಗಕ್ಕೆ ಈ ಸಂಬಂಧ ವಿವರಣೆ ನೀಡುವಂತೆ ಇಂದು ಶೋ-ಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿದ್ಧಾರ್ಥ್​ ವರ್ಮಾ ಮತ್ತು ನ್ಯಾಯಮೂರ್ತಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ರಾಜ್ಯ ಚುನಾವಣಾ ಆಯೋಗಕ್ಕೆ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪಂಚಾಯತ್ ಚುನಾವಣೆಯ ಉಳಿದ ಹಂತಗಳಲ್ಲಿ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿತು, ಇಲ್ಲದಿದ್ದರೆ ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತು.

ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಶೋ-ಕಾಸ್ ನೋಟಿಸ್ ನೀಡಿ, ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ವಿಫಲವಾಗಿದ್ದು ಏಕೆ? ಎಂದು ಪ್ರಶ್ನಿಸಿದೆ. ಅಂತಹ ಉಲ್ಲಂಘನೆಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.
"ಚುನಾವಣಾ ಕರ್ತವ್ಯದಲ್ಲಿರುವ ಜನರನ್ನು ಮಾರಕ ವೈರಸ್ ಸೋಂಕಿಗೆ ಒಳಗಾಗದಂತೆ ರಕ್ಷಿಸಲು ಪೊಲೀಸರು ಅಥವಾ ಚುನಾವಣಾ ಆಯೋಗವು ಏನನ್ನೂ ಮಾಡಿಲ್ಲ" ಎಂದು ಆದೇಶದಲ್ಲಿ ಟೀಕಿಸಲಾಗಿದೆ.

ಇದನ್ನೂ ಓದಿ: ಉಮೇಶ್ ಕತ್ತಿ ವಿವಾದಾತ್ಮಕ ಹೇಳಿಕೆ; ಸಚಿವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ಹೊರಹಾಕಿದ ಕಾಂಗ್ರೆಸ್!

ತುರ್ತು ಪರಿಹಾರ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, "ಕೈಗೊಂಡ ಕ್ರಮಗಳು ಮತ್ತು ಅದರ ಸಮರ್ಪಕತೆಯ ಬಗ್ಗೆ ತೋರಿಸಲು ಯಾವುದೇ ದಾಖಲೆಗಳನ್ನು ಅಥವಾ ಸಾರ್ವಜನಿಕ ಪ್ರಕಟಣೆಗಳನ್ನು ಕೋರ್ಟ್ ಸಹಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ರಾಜ್ಯದಲ್ಲಿ 2020ರ ಅಂತ್ಯದ ವೇಳೆಗೆ ವೈರಸ್ ಪ್ರಭಾವ ದುರ್ಬಲಗೊಂಡ ನಂತರ ಮೈಮರೆತ ಸರ್ಕಾರ, ಪಂಚಾಯತ್ ಚುನಾವಣೆ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದೆ" ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
Youtube Video
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಜನರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಗಮನಿಸಿದ ನ್ಯಾಯಾಲಯ, ಲಕ್ನೋ, ಪ್ರಯಾಗರಾಜ್, ವಾರಣಾಸಿ, ಆಗ್ರಾ, ಕಾನ್ಪುರ ನಗರ, ಗೋರಖ್‌ಪುರ ಮತ್ತು ಝಾನ್ಸಿಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ದಿನಕ್ಕೆ ಎರಡು ಬಾರಿ ಆರೋಗ್ಯ ಬುಲೆಟಿನ್ ಪ್ರಕಟಿಸುವಂತೆ ನಿರ್ದೇಶನ ನೀಡಿತು. ಇದರಿಂದ ಆಸ್ಪತ್ರೆಗಳಿಗೆ ರೋಗಿಗಳ ಪರಿಚಾರಕರು ಭೇಟಿ ನೀಡುವುದನ್ನು ಕಡಿಮೆಗೊಳಿಸಬಹುದು ಎಂದು ಕೋರ್ಟ್ ಸಲಹೆ ನೀಡಿದೆ. ಈ ಕುರಿತು ಮುಂದಿನ ವಿಚಾರಣೆಯನ್ನು ಮೇ 3ಕ್ಕೆ ನಿಗದಿಪಡಿಸಲಾಗಿದೆ.
Published by: MAshok Kumar
First published: April 28, 2021, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories