ನವದೆಹಲಿ: ಐದು ಲಕ್ಷದವರೆಗಿನ ಬಾಕಿ ಇರುವ ಎಲ್ಲ ಮರುಪಾವತಿಯನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಬುಧವಾರ ಆದಾಯ ತೆರಿಗೆ ಇಲಾಖೆ ಹೇಳಿದೆ. ಈ ನಡೆಯಿಂದ ಸುಮಾರು 14 ಲಕ್ಷ ತೆರಿಗೆ ಪಾವತಿದಾರರು ಇದರ ಅನುಕೂಲ ಪಡೆದುಕೊಳ್ಳಲಿದ್ದಾರೆ.ಹಾಗೆಯೇ, ಸಣ್ಣ ಉದ್ದಿಮೆದಾರರಿಗೆ ಪರಿಹಾರಾತ್ಮಕವಾಗಿ ಸುಮಾರು 18 ಸಾವಿರ ಕೋಟಿ ಜಿಎಸ್ಟಿ ಮತ್ತು ಕಸ್ಸಮ್ಸ್ ಮರುಪಾವತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ತೀರ್ಮಾನಿಸಿದೆ.ಎಲ್ಲ ಜಿಎಸ್ಟಿ ಮತ್ತು ಕಸ್ಟಮ್ಸ್ ಮರುಪಾವತಿಯನ್ನು ಬಿಡುಗಡೆ ಮಾಡಲಾಗಿದೆ. ಸುಮಾರು ಒಂದು ಲಕ್ಷ ಉದ್ಯಮ ಸಂಸ್ಥೆಗಳು, ಸಣ್ಣ ಕೈಗಾರಿಕೆಗಳು ಇದರ ಲಾಭ ಪಡೆಯಲಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಒಟ್ಟು ಸರಿಸುಮಾರು 18 ಸಾವಿರ ಕೋಟಿ ರೂ. ಮರುಪಾವತಿಯಾಗಲಿದೆ ಎಂದು ಹೇಳಿದೆ.ಕೊರೋನಾ ವೈರಸ್ನಿಂದಾಗಿ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿದ್ದು, ಸಣ್ಣ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಅನುಕೂಲ ಕಲ್ಪಿಸಿಕೊಡುವ ತಕ್ಷಣವೇ ಜಿಎಸ್ಟಿ ಮತ್ತು ಕಸ್ಟಮ್ ಮರುಪಾವತಿ ಬಿಡುಗಡೆಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ.ಇದನ್ನು ಓದಿ: ಏ.14ರ ನಂತರ ಲಾಕ್ಡೌನ್ ಮುಂದುವರಿಸಿ: ರಾಜ್ಯ ಸರ್ಕಾರಕ್ಕೆ ಟಾಸ್ಕ್ಪೋರ್ಸ್ ಶಿಫಾರಸು ಮಾಡಿದ ಪ್ರಮುಖ ಅಂಶಗಳು
ಇದುವರೆಗೂ ದೇಶದಲ್ಲಿ 5ಸಾವಿರಕ್ಕೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, 150ಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.