ಬೆಂಗಳೂರು ಲಾಕ್​ಡೌನ್; ಮೆಡಿಕಲ್ಸ್ ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಮಧ್ಯಾಹ್ನ 12ಗಂಟೆಯೊಳಗೆ ಮುಚ್ಚಬೇಕು

ಸಾರ್ವಜನಿಕ ಸೇವೆಯನ್ನು ವಾರಕ್ಕೆ 10 ಗಂಟೆ ಕಾಲ ಇರುತ್ತೆ. 18 ರಿಂದ 40 ವರ್ಷದ ಜನರನ್ನು ಬಳಸಿಕೊಳ್ಳಲಾಗುವುದು. ಅವರಿಗೆ ಹ್ಯಾಟ್ ಕೊಡಲಾಗುವುದು. ಆ ಸೇವೆ ಮಾಡಬಯಸುವವರು ಆನ್​ಲೈನ್​ನಲ್ಲೇ ಅಪ್ಲಿಕೇಶನ್ ಹಾಕಬಹುದು. ವಾಲೆಂಟಿಯರ್ಸ್ ಸೇವೆಯನ್ನು ನಗರದಲ್ಲಿ ಮೊಟ್ಟಮೊದಲ ಬಾರಿಗೆ ಬಳಸಿಕೊಳ್ಳುತ್ತಿದ್ದೇವೆ. ಇವರಿಗೆ ಯಾವುದೇ ಆಯುಧ ಕೊಡುವುದಿಲ್ಲ ಎಂದು ತಿಳಿಸಿದರು.  

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

ಪೊಲೀಸ್ ಆಯುಕ್ತ​​ ಭಾಸ್ಕರ್ ರಾವ್

  • Share this:
    ಬೆಂಗಳೂರು; ಬೆಂಗಳೂರು ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಂಗಳವಾರ ರಾತ್ರಿ 8 ಗಂಟೆಯಿಂದ ಲಾಕ್​ಡೌನ್ ಆರಂಭವಾಗಿದ್ದು, ಇಂದಿನಿಂದ ಮುಂದಿನ ಒಂದು ವಾರಗಳ ಕಾಲ ಲಾಕ್​ಡೌನ್ ಜಾರಿಯಲ್ಲಿರಲಿದೆ.

    ಲಾಕ್​ಡೌನ್ ಜಾರಿ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು, ರಾಜ್ಯ ಸರ್ಕಾರ ಆದೇಶದಂತೆ ಇಂದಿನಿಂದ ಲಾಕ್ಡೌನ್ ಶುರುವಾಗಿದೆ. ಬೆಳ್ಳಗೆ 5 ಗಂಟೆಯಿಂದ 12 ಗಂಟೆ ತನಕ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. 12 ಗಂಟೆಯ ನಂತರ ಯಾವುದೇ ಕಾರಣಕ್ಕೂ ಅಂಗಡಿಗಳು ತೆಗೆಯಲು ಅವಕಾಶವಿಲ್ಲ. ಸಾರ್ವಜನಿಕರು ಲಾಕ್ ಡೌನ್ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.

    ಬಿಎಂಟಿಸಿ ಬಸ್ ಸೇವೆ ಜನರಿಗೆ ಇರುವುದಿಲ್ಲ. ಬೆಳಗ್ಗೆ 5ರಿಂದ ಮಧ್ಯಾಹ್ನ‌ 12 ರವರೆಗೆ ದಿನಸಿ ಅಂಗಡಿ ಕ್ಲೋಸ್ ಮಾಡಬೇಕು. ಫುಡ್ ಡೆಲಿವರಿಯವರು ರಾತ್ರಿ 8ಕ್ಕೆ ತಮ್ಮ ಸೇವೆ ನಿಲ್ಲಿಸಬೇಕು. ಮೆಡಿಕಲ್ ಶಾಪ್​ಗಳು ಮಾತ್ರ ರಾತ್ರಿವರೆಗೂ ಸೇವೆ ಸಲ್ಲಿಸಬಹುದು.  ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಹೊಂದಿಕೊಂಡಿರುವ ಜಿಲ್ಲೆಗಳಿಗೆ ನಗರಗಳಿಗೆ ಬಂದು ಹೋಗಲು‌ ವಿನಾಯಿತಿ ನೀಡಲಾಗಿದೆ. ಅಲ್ಪಕಾಲದ ಲಾಕ್ ಡೌನ್ ಇರುವುದರಿಂದ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ. ನಗರದಿಂದ ಹೊರಗೆ ಹೋಗಬಹುದು. ರಾಜ್ಯದ ಬೇರೆ ಭಾಗದಿಂದ ನಗರಕ್ಕೆ ಬರುವವರು ಸೇವಾ ಸಿಂದುವಿನಲ್ಲಿ ಅನುಮತಿ ಪಡೆದಿರಬೇಕು. ಈ ಸಲ ಪ್ರತಿಯೊಬ್ಬರನ್ನು ಚೆಕ್ ಮಾಡಬಹುದು. ವಿಮಾನ ನಿಲ್ದಾಣದ ರಸ್ತೆಯ ಫ್ಲೈಒವರ್ ಬಿಟ್ಟು ಎಲ್ಲ ಫ್ಲೈ ಒವರ್ ಗಳು ಬಂದ್ ಆಗಲಿವೆ. ಏರ್ಪೋರ್ಟ್ ಮತ್ತು ರೈಲ್ವೆಗೆ ಟ್ಯಾಕ್ಸಿ ಸೇವೆ ಇರುತ್ತೆ ಎಂದು ಆಯುಕ್ತರು ಹೇಳಿದರು.

    ಈ ಸಲದ ಲಾಕ್​ಡೌನ್ ಗೆ ಪೊಲೀಸ್ ಸಿಬ್ಬಂದಿ ಕೊರತೆ ಸಹ ಇದೆ.  ಅಧಿಕಾರಿ, ಸಿಬ್ಬಂದಿ ಬಹಳಷ್ಟು ಕೆಲಸ ಮಾಡಿ ಸೋಂಕಿಗೆ ತುತ್ತಾಗಿದ್ದಾರೆ. 8 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಸಾರ್ವಜನಿಕ ಸಹಕಾರ ನಮಗೆ ಬಹಳ ಮುಖ್ಯ. ಬೆಂಗಳೂರು ಮಟ್ಟದಲ್ಲಿ ಸಿವಿಲ್ ಡಿಫೆನ್ಸ್ ಬಳಕೆ ಮಾಡಿಕೊಳ್ಳುತ್ತೇವೆ. ಅವರು ಠಾಣೆಯ ಕೆಲಸ, ಚೆಕ್ ಪಾಯಿಂಟ್​ಗಳಲ್ಲಿ ಸಿಬ್ಬಂದಿ ಜೊತೆ ಕೆಲಸ ಮಾಡ್ತಾರೆ. ಸಾರ್ವಜನಿಕರ ಸೇವೆಗೆ ಯಾವುದೇ ಸಂಬಳ ಇರುವುದಿಲ್ಲ. ಸಾರ್ವಜನಿಕ ಸೇವೆಯನ್ನು ವಾರಕ್ಕೆ 10 ಗಂಟೆ ಕಾಲ ಇರುತ್ತೆ. 18 ರಿಂದ 40 ವರ್ಷದ ಜನರನ್ನು ಬಳಸಿಕೊಳ್ಳಲಾಗುವುದು. ಅವರಿಗೆ ಹ್ಯಾಟ್ ಕೊಡಲಾಗುವುದು. ಆ ಸೇವೆ ಮಾಡಬಯಸುವವರು ಆನ್​ಲೈನ್​ನಲ್ಲೇ ಅಪ್ಲಿಕೇಶನ್ ಹಾಕಬಹುದು. ವಾಲೆಂಟಿಯರ್ಸ್ ಸೇವೆಯನ್ನು ನಗರದಲ್ಲಿ ಮೊಟ್ಟಮೊದಲ ಬಾರಿಗೆ ಬಳಸಿಕೊಳ್ಳುತ್ತಿದ್ದೇವೆ. ಇವರಿಗೆ ಯಾವುದೇ ಆಯುಧ ಕೊಡುವುದಿಲ್ಲ ಎಂದು ತಿಳಿಸಿದರು.

    ಇದನ್ನು ಓದಿ: Bengaluru Lockdown: ನಾಳೆಯಿಂದ 1 ವಾರ ತುರ್ತು ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್​​​ ಲಭ್ಯ: ಯಾರೆಲ್ಲಾ ಪ್ರಯಾಣಿಸಬಹುದು ಗೊತ್ತೇ?

    ಜನರಲ್ಲಿ ಬಹಳ ಹುಷಾರಾಗಿ ನಡೆದುಕೊಳ್ಳಬೇಕು. ಲಾಕ್ಡೌನ್ ಸಮಯದಲ್ಲಿ ನಿಯಮ ಉಲ್ಲಂಘಿಸಿದರೆ ದಂಡ ಹಾಕಲಾಗುವುದು. ಜುಲೈ 22 ಬೆಳಗ್ಗೆ 5 ಗಂಟೆಗೆ ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
    Published by:HR Ramesh
    First published: