• ಹೋಂ
  • »
  • ನ್ಯೂಸ್
  • »
  • Corona
  • »
  • ಕೋವಿಡ್​​ ಬೂಸ್ಟರ್ ಶಾಟ್ ' Booking' ಮಾಡುವಾಗ ಹಣ ಕಳೆದುಕೊಳ್ಳಬಹುದು ಎಚ್ಚರ..!

ಕೋವಿಡ್​​ ಬೂಸ್ಟರ್ ಶಾಟ್ ' Booking' ಮಾಡುವಾಗ ಹಣ ಕಳೆದುಕೊಳ್ಳಬಹುದು ಎಚ್ಚರ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುಪಿಐ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ  ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಲು ಒಟಿಪಿ ಕೇಳಲಾಗುತ್ತದೆ ಎಚ್ಚರ..

  • Trending Desk
  • 2-MIN READ
  • Last Updated :
  • Share this:

ಕೆಲವು ದಿನಗಳಿಂದ ವೇಗವಾಗಿ ಹರಡುತ್ತಿರುವ ಓಮಿಕ್ರಾನ್‌ (Omicron) ರೂಪಾಂತರದಿಂದಾಗಿ ಭಾರತದಾದ್ಯಂತ ಕೋವಿಡ್ ಪ್ರಕರಣಗಳಲ್ಲಿ (Covid Cases) ಹಠಾತ್ತನೆ ಹೆಚ್ಚಳವಾಗಿರುವುದನ್ನು ನಾವು ನೋಡುತ್ತಿದ್ದೇವೆ.ಈ ರೋಗದ ವಿರುದ್ಧ ಹೋರಾಡಲು ತಮ್ಮ ದೇಹದಲ್ಲಿ ರೋಗನಿರೋಧಕತೆ ಹೆಚ್ಚಿಸಿಕೊಳ್ಳಲು ಜನರು ಈಗ ಮೂರನೇ ಲಸಿಕೆ ಅಥವಾ ಬೂಸ್ಟರ್ ಶಾಟ್ (Booster Shot) ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ಸ್ಕ್ಯಾಮರ್‌ಗಳು ಓಮಿಕ್ರಾನ್ ಭಯದ ಲಾಭ ಪಡೆಯುತ್ತಿದ್ದಾರೆ ಮತ್ತು ಜನರಿಗೆ ಬೂಸ್ಟರ್ ಶಾಟ್ ಪಡೆಯಲು 'ಸಹಾಯ' ಮಾಡುವ ಮೂಲಕ ಹಣ ಗಳಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ.


ಹೊಸದಾಗಿ ಶುರುವಾದ ಕೋವಿಡ್ ಲಸಿಕೆ ಹಗರಣ ಏನು ಗೊತ್ತೇ?


ಸರ್ಕಾರಿ ಆರೋಗ್ಯ ಅಧಿಕಾರಿಯೆಂದು ಹೇಳಿ ಸ್ಕ್ಯಾಮರ್‌ಗಳು ತಮ್ಮ ಬೂಸ್ಟರ್ ಶಾಟ್ ಕಾಯ್ದಿರಿಸಲು ಮೋಸ ಮಾಡಿ ಹಣವನ್ನು ದೋಚಲು ಹಿರಿಯ ನಾಗರಿಕರಿಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಕ್ಯಾಮರ್‌ಗಳು ಹೆಚ್ಚಾಗಿ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಈ ವಂಚನೆಯನ್ನು ಹೇಗೆ ಮಾಡಬಹುದೆಂದು ತಿಳಿದುಕೊಳ್ಳೋಣ ಬನ್ನಿ.. ಆರೋಗ್ಯ ಇಲಾಖೆಯಿಂದ ಮಾತಾಡುತ್ತಿದ್ದೇವೆ ಎಂದು ವ್ಯಕ್ತಿಯೊಬ್ಬ ವಯಸ್ಸಾದ ವ್ಯಕ್ತಿಗೆ ಕರೆಯಲ್ಲಿ ಹೇಳಿ ಅವರ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳೊಂದಿಗೆ ಮೊದಲ ಮತ್ತು ಎರಡನೇ ಲಸಿಕೆ ಡೋಸ್ ವಿವರಗಳಂತಹ ವೈಯಕ್ತಿಕ ವಿವರಗಳನ್ನು ಕೇಳಿ ತಿಳಿದುಕೊಳ್ಳುತ್ತಾನೆ.


ಇದನ್ನೂ ಓದಿ: Coronaದಿಂದ ಮನೆಯಲ್ಲಿಯೇ ಐಸೋಲೇಟ್ ಆಗಿದ್ರೆ ಸರ್ಕಾರದ ಈ ಮಾರ್ಗಸೂಚಿ ಪಾಲಿಸಿ


OTP ಕೇಳ್ತಾರೆ ಎಚ್ಚರ..! 


ಕೆಲವು ದಿನಗಳ ನಂತರ, ಆರೋಗ್ಯ ಇಲಾಖೆಯವನು ಎಂದು ಹೇಳಿಕೊಳ್ಳುವ ಇನ್ನೊಬ್ಬ ವ್ಯಕ್ತಿಯಿಂದ ಮತ್ತೊಂದು ಕರೆ ಬರುತ್ತದೆ, ಆ ವ್ಯಕ್ತಿಯು ಬೂಸ್ಟರ್ ಶಾಟ್ ಕಾಯ್ದಿರಿಸಲು ಸಹಾಯ ಮಾಡಲಾಗುತ್ತದೆ. ಈ ಕರೆಯು ನೈಜ ಕರೆ ಎಂದು ಗೊತ್ತಾಗುವ ಸಲುವಾಗಿ ಮೊದಲು ಕೇಳಿ ತಿಳಿದುಕೊಂಡ ವೈಯಕ್ತಿಕ ವಿವರಗಳನ್ನು ದೃಢೀಕರಿಸಲಾಗುತ್ತದೆ ಮತ್ತು ಕರೆ ಮಾಡಿದ ವ್ಯಕ್ತಿಯು ಅವರಿಗೆ ನೋಂದಾಯಿತ ಫೋನ್ ನಂಬರ್‌ನಲ್ಲಿ ಒಟಿಪಿಯೊಂದಿಗೆ ಸಂದೇಶವನ್ನು ಸ್ವೀಕರಿಸುತ್ತೀರಿ ಎಂದು ಹೇಳುತ್ತಾರೆ. ನಂತರ ಬೂಸ್ಟರ್ ಶಾಟ್ ಬುಕಿಂಗ್ ಅನ್ನು ದೃಢೀಕರಿಸಲು ಅವನು ನಿಮಗೆ ಬಂದಂತಹ ಆ ಒಟಿಪಿಯನ್ನು ಕೇಳುತ್ತಾರೆ.


ಬ್ಯಾಂಕ್​ ಖಾತೆಗೆ ಕನ್ನ ಸಾಧ್ಯತೆ 


ಇತರ ಸಂದರ್ಭಗಳಲ್ಲಿ ನಿಮಗೆ ಕರೆ ಮಾಡುವವರು ತಮ್ಮ ಫೋನ್‌ನಲ್ಲಿ ಒಂದು ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವಂತೆ ಕೇಳಬಹುದು, ಇದು ಹೆಚ್ಚಾಗಿ ಎನಿಡೆಸ್ಕ್ ಅಥವಾ ಟೀಮ್ ವ್ಯೂವರ್‌ನಂತಹ ರಿಮೋಟ್ ಡೆಸ್ಕ್ ಟಾಪ್ ಅಪ್ಲಿಕೇಶನ್‌ಗಳು, ಬುಕಿಂಗ್ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡುತ್ತದೆ. ಈಗ ಇಲ್ಲಿ ಸಮಸ್ಯೆಯೆಂದರೆ ಒಟಿಪಿ ಹೆಚ್ಚಾಗಿ ಯುಪಿಐಯಲ್ಲಿ ಹಣದ ವಿನಂತಿ ವೈಶಿಷ್ಟ್ಯಕ್ಕಾಗಿ ಉತ್ಪತ್ತಿಯಾಗುತ್ತದೆ ಅಥವಾ ಸ್ಕ್ಯಾಮರ್ ಈಗಾಗಲೇ ಬಲಿಪಶುವಿನ ಬ್ಯಾಂಕ್ ವಿವರಗಳನ್ನು ತಮ್ಮ ಡೇಟಾಬೇಸ್‌ನಲ್ಲಿ ಹೊಂದಿದ್ದಾರೆಯೇ ಎಂಬುದನ್ನು ನೋಡಿಕೊಳ್ಳುತ್ತಾರೆ. ಅವರು ಬ್ಯಾಂಕ್ ವಿವರಗಳನ್ನು ಹೊಂದಿಲ್ಲದಿದ್ದರೆ, ಅವರು ಪಾವತಿ ಮಾಡಲು ಮತ್ತು ಸ್ಲಾಟ್ ಅನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಬ್ಯಾಂಕ್ ವಿವರಗಳು ಮತ್ತು ಒಟಿಪಿ ಕೇಳಬಹುದು. ಯುಪಿಐ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ  ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಲು ಒಟಿಪಿ ಕೇಳಲಾಗುತ್ತದೆ.


ಇದನ್ನೂ ಓದಿ: Covid 19: ಇಲ್ಲಿ ನಿಮಗೆ ಕೋವಿಡ್ ಇದ್ಯಾ ಇಲ್ವಾ ಅಂತ ನಾಯಿಗಳು ಗುರುತಿಸುತ್ತವೆ, ಇದರ ರಿಸಲ್ಟ್ ಯಾವಾಗ್ಲೂ ಸರಿಯಾಗೇ ಇರುತ್ತಂತೆ!


ಸ್ಕ್ಯಾಮರ್‌ಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರನ್ನು ಗುರಿಯಾಗಿಸಿಕೊಳ್ಳುತ್ತಾರೆ, ಏಕೆಂದರೆ ಬಹುತೇಕರಿಗೆ ಈ ಯುಪಿಐ, ರಿಮೋಟ್ ಡೆಸ್ಕ್ ಟಾಪ್ ಅಪ್ಲಿಕೇಶನ್‌ಗಳು ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ.


ಇಂತಹ ಹಗರಣಗಳಿಂದ ಸುರಕ್ಷಿತವಾಗಿರುವುದು ಹೇಗೆ?


ಮೊದಲಿಗೆ ನೀವು ಗಮನಿಸಬೇಕಾದ ಅಂಶವೆಂದರೆ ಸರ್ಕಾರಿ ಅಧಿಕಾರಿಗಳು ಲಸಿಕೆ ಸ್ಲಾಟ್‌ಗಳನ್ನು ಕಾಯ್ದಿರಿಸಲು ಯಾರಿಗೂ ಕರೆ ಮಾಡುವುದಿಲ್ಲ. ವಾಸ್ತವವಾಗಿ, ಫೋನ್ ಕರೆ ಮೂಲಕ ನೋಂದಾಯಿಸುವ ನಿಬಂಧನೆ ಅಸ್ತಿತ್ವದಲ್ಲಿಲ್ಲ. ಕೋವಿಡ್ ಲಸಿಕೆಯನ್ನು ಕಾಯ್ದಿರಿಸುವ ಏಕೈಕ ಮಾರ್ಗವೆಂದರೆ ಕೋವಿನ್ ಪೋರ್ಟಲ್ ಪ್ಲಾಟ್ ಫಾರ್ಮ್ ಮೂಲಕ ಮಾತ್ರವೇ ಎಂದು ಅರ್ಥ ಮಾಡಿಕೊಳ್ಳಿರಿ. ನೀವು ಕೋವಿನ್ ಅಥವಾ ಆರೋಗ್ಯ ಸೇತು ಆ್ಯಪ್ ಬಳಸಬಹುದು. ಇಲ್ಲದಿದ್ದಲ್ಲಿ ನೀವು ನೇರವಾಗಿ ಯಾವುದೇ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಬಹುದು ಮತ್ತು ಲಸಿಕೆಯನ್ನು ಪಡೆಯಬಹುದು.

top videos


    ಲಸಿಕೆ ಸ್ಲಾಟ್ ಅನ್ನು ಕಾಯ್ದಿರಿಸಲು ಯಾವುದೇ ಸರ್ಕಾರಿ ಅಧಿಕಾರಿ ಎಂದಿಗೂ ಯಾವುದೇ ಒಟಿಪಿಯನ್ನು ನಿಮಗೆ ಕೇಳುವುದಿಲ್ಲ. ಅಲ್ಲದೆ, ನಿಮ್ಮ ಒಟಿಪಿಗಳನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು.

    First published: