Akshay Kumar: ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಕೋಟಿ ಘೋಷಿಸಿದ ಅಕ್ಷಯ್​ ಕುಮಾರ್​: ಪ್ರತಿಕ್ರಿಯಿಸಿದ ಮೋದಿ..!

Akshay Kumar Donates 25 Crore: ನಿನ್ನೆಯಷ್ಟೆ ಪ್ರಭಾಸ್​ 3 ಕೋಟಿ, ಮೊನ್ನೆ ಪವನ್ ಕಲ್ಯಾಣ್​ ಒಂದು ಕೋಟಿ ಹೀಗೆ ಹಲವಾರು ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಸ್ವಲ್ಪ ಸಮಯದ ಹಿಂದೆಯಷ್ಟೆ ಉದ್ಯಮಿ ರತನ್​ ಟಾಟಾ ಅವರೂ ಟಾಟಾ ಟ್ರಸ್ಟ್ ವತಿಯಿಂದ 500 ಕೋಟಿ ನೀಡುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಈಗ ನಟ ಅಕ್ಷಯ್​ ಕುಮಾರ್​ ಸಹ 25 ಕೋಟಿ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಟ್ವೀಟ್​ ಮಾಡಿದ್ದಾರೆ.

Anitha E | news18-kannada
Updated:March 28, 2020, 7:29 PM IST
Akshay Kumar: ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಕೋಟಿ ಘೋಷಿಸಿದ ಅಕ್ಷಯ್​ ಕುಮಾರ್​: ಪ್ರತಿಕ್ರಿಯಿಸಿದ ಮೋದಿ..!
ಅಕ್ಷಯ್​ ಕುಮಾರ್​
  • Share this:
ವಿಶ್ವದೆಲ್ಲೆಡೆ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಭಾರತವೂ ಹೋರಾಟ ನಡೆಸುತ್ತಿದೆ.  ವೈರಸ್​ ವಿರುದ್ಧದ ಹೋರಾಟಕ್ಕೆ ಸಾಮಾನ್ಯ ಜನರು, ಉದ್ಯಮಿಗಳು ಸೇರಿದಂತೆ ಸೆಲೆಬ್ರಿಟಿಗಳೂ ಕೈ ಜೋಡಿಸಿದ್ದಾರೆ. ಸಿನಿ ತಾರೆಯರು ಆಯಾ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿ ಸೇರಿದಂತೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಿದ್ದಾರೆ.

ನಿನ್ನೆಯಷ್ಟೆ ಪ್ರಭಾಸ್​ 3 ಕೋಟಿ, ಮೊನ್ನೆ ಪವನ್ ಕಲ್ಯಾಣ್​ ಒಂದು ಕೋಟಿ ಹೀಗೆ ಹಲವಾರು ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಸ್ವಲ್ಪ ಸಮಯದ ಹಿಂದೆಯಷ್ಟೆ ಉದ್ಯಮಿ ರತನ್​ ಟಾಟಾ ಅವರೂ ಟಾಟಾ ಟ್ರಸ್ಟ್ ವತಿಯಿಂದ 500 ಕೋಟಿ ನೀಡುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಈಗ ನಟ ಅಕ್ಷಯ್​ ಕುಮಾರ್​ ಸಹ 25 ಕೋಟಿ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಟ್ವೀಟ್​ ಮಾಡಿದ್ದಾರೆ.ಇಲ್ಲಿಯವರೆಗೆ ಇಷ್ಟು ದೊಡ್ಡ ಮೊತ್ತದ ಹಣ ನೀಡಿದ ಏಕೈಕ ನಟ ಎಂದರೆ ಅದು ಅಕ್ಷಯ್​ ಕುಮಾರ್​. ಆ್ಯಕ್ಷನ್​ ಕಿಂಗ್​ ದೇಶದಲ್ಲಿ ಯಾವಾಗ ಇಂತಹ ಪರಿಸ್ಥಿತಿ ಎದುರಾದರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅಕ್ಷಯ್​ ಕುಮಾರ್​ ಅವರ ಟ್ವೀಟ್ ನೋಡಿರುವ ಪ್ರಧಾನಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.ಗಂಡ ಅಕ್ಷಯ್​ ಅವರ ನಿರ್ಧಾರದಿಂದ ಖುಷಿಯಾಗಿರುವ ಟ್ವಿಂಕಲ್​ ಖನ್ನಾ ಸಹ ಹೆಮ್ಮೆಯಿಂದ ಟ್ವೀಟ್​ ಮಾಡಿದ್ದಾರೆ.

The man makes me proud. When I asked him if he was sure as it was such a massive amount and we needed to liquidate funds, he just said, ‘ I had nothing when I started and now that I am in this position, how can I hold back from doing whatever I can for those who have nothing.’ https://t.co/R9hEin8KF1ಕೊರೋನಾ ವಿರುದ್ಧದ ಹೋರಾಟಕ್ಕೆ ಹೃತಿಕ್​ ರೋಷನ್​ 20 ಲಕ್ಷ, ಕಪಿಲ್​ ಶರ್ಮಾ 50 ಲಕ್ಷ ನೀಡಿದ್ದಾರೆ. ಹೀಗೆ ಟಾಲಿವುಡ್​, ಸ್ಯಾಂಡಲ್​ವುಡ್​ ಕಲಾವಿದರೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

Niveditha-Chandan Shetty: ಮೊದಲ ಯುಗಾದಿ ಆಚರಿಸಿದ ಚಂದನ್​-ನಿವೇದಿತಾರ ಕ್ಯೂಟ್​ ಚಿತ್ರಗಳು..!

First published:March 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading