ಈಗ ಎಲ್ಲಿ ನೋಡಿದರೂ ಕೊರೋನಾ ವೈರಸ್ನದ್ದೇ ಸದ್ದು. ಇದರ ಸೋಂಕಿಗೆ ಈಗಾಗಲೇ ದೇಶದಲ್ಲೂ ಜನರು ಬಲಿಯಾಗಿದ್ದಾರೆ.ಜೊತೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಿರುವಾಗಲೇ ಬಾಲಿವುಡ್ನ ಕೃಷ್ಣ ಸುಂದರಿ ಕಾಜೋಲ್ ಹಾಗೂ ಅವರ ಮಗಳಿಗೂ ಕೊರೋನಾ ಸೋಂಕು ತಗುಲಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಹೌದು, ಭಾರತದಲ್ಲಿ ಕೊರೋನಾ ಸೋಂಕು ಹರಡುವುದು ಆರಂಭವಾದ ನಂತರ ಕಾಜೋಲ್ ಸಿಂಗಾಪುರಕ್ಕೆ ಹೋಗಿ ಅಲ್ಲಿದ್ದ ತಮ್ಮ ಮಗಳು ನ್ಯಾಸಾರನ್ನು ಮುಂಬೈಗೆ ಕರೆತಂದಿದ್ದರು. ಆಗಿನಿಂದ ಅಮ್ಮ-ಮಗಳಿಗೆ ಸೋಂಕು ತಗುಲಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿತ್ತು.
ಹರಿದಾಡುತ್ತಿರುವ ಕೊರೋನಾ ವದಂತಿ ಕುರಿತಾಗಿ ಕೊನೆಗೂ ನಟ ಅಜಯ್ ದೇವಗನ್ ಮೌನ ಮುರಿದಿದ್ದಾರೆ. ತಮ್ಮ ಪತ್ನಿ ಹಾಗೂ ಮಗಳ ಆರೋಗ್ಯದ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
Thank you for asking. Kajol & Nysa are absolutely fine. The rumour around their health is unfounded, untrue & baseless🙏
— Ajay Devgn (@ajaydevgn) March 30, 2020
HBD Ramcharan: 35ನೇ ವಸಂತಕ್ಕೆ ಕಾಲಿಟ್ಟ ರಾಮ್ಚರಣ್ರ ಅಪರೂಪದ ಚಿತ್ರಗಳು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ