HOME » NEWS » Coronavirus-latest-news » AIR INDIA SUSPENDS CONTRACT OF AROUND 200 PILOTS DUE TO CORONA EFFECT HK

ಕೋವಿಡ್​​​-19; 200 ಪೈಲಟ್​​ಗಳ ಒಪ್ಪಂದ ಸ್ಥಗಿತಗೊಳಿಸಿದ ಏರ್​ ಇಂಡಿಯಾ

ನಿವೃತ್ತಿಯ ನಂತರ ಉದ್ಯೋಗಕ್ಕೆ ನೇಮಿಸಿಕೊಂಡಿದ್ದ 200 ಪೈಲೆಟ್​ಗಳ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ವಿಮಾನಯಾಣ ಸಂಸ್ಥೆ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:April 2, 2020, 3:38 PM IST
ಕೋವಿಡ್​​​-19; 200 ಪೈಲಟ್​​ಗಳ ಒಪ್ಪಂದ ಸ್ಥಗಿತಗೊಳಿಸಿದ ಏರ್​ ಇಂಡಿಯಾ
ವಿಮಾನ
  • Share this:
ನವದೆಹಲಿ(ಏ.02) : ಮಾರಕ ಕೊರೋನಾ ವೈರಸ್​​ ನ್ನು ತಡೆಗಟ್ಟಲು  ಏಪ್ರಿಲ್ 14 ವರೆಗೆ ದೇಶದ ಎಲ್ಲಾ ದೇಶಿಯ ಹಾಗೂ ಅಂತರಾಷ್ಟೀಯ ವಾಣಿಜ್ಯ ಪ್ರಯಾಣಿಕರ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಏರ್ ಇಂಡಿಯಾದ 200 ಪೈಲಟ್​ಗಳು ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರ ನೇಮಕಾತಿ ಗುತ್ತಿಗೆಯನ್ನು ಏರ್ ಇಂಡಿಯಾ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ತಾತ್ಕಾಲಿಕ ಮಾತ್ರ ಎನ್ನಲಾಗಿದೆ. ಇವರೆಲ್ಲರೂ ಕೂಡ ಏರ್ ಇಂಡಿಯಾದಲ್ಲಿ ಈ ಹಿಂದೆ ಪೈಲಟ್​ಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮತ್ತೆ ಅವರ ಸೇವೆ ಪಡೆದುಕೊಳ್ಳಲಾಗಿತ್ತು. 

ಕೆಲವು ವಾರಗಳ ಹಿಂದೆ ಬಹುತೇಕ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಇದರಿಂದ ಆದಾಯ ಕುಸಿತ ಕಂಡಿದೆ. ಹೀಗಾಗಿ ನಿವೃತ್ತಿಯ ನಂತರ ಉದ್ಯೋಗಕ್ಕೆ ನೇಮಿಸಿಕೊಂಡಿದ್ದ 200 ಪೈಲೆಟ್​ಗಳ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ವಿಮಾನಯಾಣ ಸಂಸ್ಥೆ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ವೈರಸ್​ ಸಂಕಷ್ಟದ ವೇಳೆ ಹಣ ಉಳಿಸುವ ಸಲುವಾಗಿ ಮುಂದಿನ ಮೂರು ತಿಂಗಳವರೆಗೆ ಕ್ಯಾಬಿನ್​​ ಸಿಬ್ಬಂದಿ ಹೊರತುಪಡಿಸಿ ಎಲ್ಲಾ ಉದ್ಯೋಗಿಗಳ ಭತ್ಯೆಯನ್ನು ಶೇ. 10 ರಷ್ಟು ಕಡಿತಗೊಳಿಸಿದ್ದೇವೆ ಎಂದು ಏರ್ ಇಂಡಿಯಾ ಸಂಸ್ಥೆ ಹೇಳಿದೆ.

ದೇಶದಲ್ಲಿ ಕೊರೋನಾ ವೈರಸ್​​ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶಾದ್ಯಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ಗೆ ಕರೆ ನೀಡಿದ್ದರೂ ಸೋಂಕಿತ ಪ್ರಕರಣಗಳೇನೂ ಕಡಿಮೆಯಾಗುತ್ತಿಲ್ಲ. ಇಂದು ಚಂಡೀಘಡ ಮತ್ತು ಗುಜರಾತ್‌ನಲ್ಲಿ ಮೃತಪಟ್ಟಿರುವ ವ್ಯಕ್ತಿಗಳನ್ನೂ ಸೇರಿಸಿ ಭಾರತದಲ್ಲಿ ಕೊರೋನಾ ಸಾವಿನ ಸಂಖ್ಯೆ 50ಕ್ಕೆ ಏರಿದೆ.

ಇದನ್ನೂ ಓದಿ : PM Cares ಫಂಡ್​ಗೆ ವಿದೇಶೀ ದೇಣಿಗೆಗೆ ಅವಕಾಶ; ಇದು ಹೊಸ ನೀತಿಯೇನಲ್ಲ: ಸರ್ಕಾರದ ಮೂಲಗಳು ಸ್ಪಷ್ಟನೆ

ಇದುವರೆಗೂ ಭಾರತದಲ್ಲಿ ಸುಮಾರು 2000 ಜನರಿಗೆ ಕೊರೋನಾ ಸೋಂಕು ಹರಡಿದಂತಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 335ಕ್ಕೆ ಏರಿಕೆಯಾಗಿದೆ. ಆಂಧ್ರಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ 9 ಹೊಸ ಕೇಸ್​ಗಳು ವರದಿಯಾಗಿವೆ. ಈವರೆಗೆ ಮೂರು ಜನ ಸಾವನ್ನಪ್ಪಿದ್ದಾರೆ.
Youtube Video
First published: April 2, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories