ನವದೆಹಲಿ: ಏರ್ ಇಂಡಿಯಾ (Air India) ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಇಂದೋರ್ - ದುಬೈ Indore- Dubai ವಿಮಾನ ಸೇವೆಯನ್ನು ಇಂದಿನಿಂದ ಆರಂಭಿಸಿದೆ. ಭಾರತದಲ್ಲಿ ಕೋವಿಡ್ - 19 ಪ್ರಕರಣಗಳು (COVID-19 Cases) ಹೆಚ್ಚುತ್ತಿರುವುದನ್ನು ಪರಿಗಣಿಸಿ ಯುಎಇ (UAE) ಭಾರತ ಮತ್ತು ಇತರ ದೇಶಗಳ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ನಿಷೇಧ ಹೇರಿದ ನಂತರ ಸೇವೆಗಳನ್ನು ನಿಲ್ಲಿಸಲಾಯಿತು. ಯುಎಇ ಭಾರತದಿಂದ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ, ವಿಮಾನ ಸೇವೆಗಳು ಪುನರಾರಂಭಗೊಂಡಿವೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ಜನರಲ್ ಡಾ ವಿ ಕೆ ಸಿಂಗ್ (ನಿವೃತ್ತ) ಅವರು ಏರ್ ಇಂಡಿಯಾದ ಇಂದೋರ್ (ಮಧ್ಯ ಪ್ರದೇಶ) - ದುಬೈ (ಯುಎಇ) ನೇರ ವಿಮಾನಯಾನಕ್ಕೆ ಚಾಲನೆ ನೀಡಿದರು.
ಅಂತಾರಾಷ್ಟ್ರೀಯ ಮಾರ್ಗದಲ್ಲಿ, ಏರ್ ಇಂಡಿಯಾ 2019 ರಿಂದ ಇಂದೋರ್ನಿಂದ ದುಬೈಗೆ ನೇರ ವಿಮಾನಯಾನ ಸೇವೆ ಆರಂಭಿಸಿತ್ತು. ಆದರೆ, ಏತನ್ಮಧ್ಯೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದ್ದರಿಂದ ಭಾರತದ ಎಲ್ಲ ವಿಮಾನಗಳ ಹಾರಾಟಕ್ಕೆ ದುಬೈ ನಿಷೇಧ ಹೇರಿತ್ತು. ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಕಾರಣ ನಿರ್ಬಂಧ ಸಡಿಲಿಕೆ ಮಾಡಿದೆ. ಹೀಗಾಗಿ ಇಂದೋರ್ನಿಂದ ದುಬೈವರೆಗೆ ತಡೆರಹಿತ ವಿಮಾನಯಾನ ಸೇವೆ ಈಗ ಪುನರಾರಂಭಗೊಂಡಿದೆ.
ಏರ್ ಇಂಡಿಯಾ ಇಂದೋರ್ - ದುಬೈ ವಿಮಾನವು ಇಂದೋರ್ ನಿಂದ ಪ್ರತಿ ಬುಧವಾರ ಮಧ್ಯಾಹ್ನ 12:35 ಕ್ಕೆ ಹಾರಲಿದೆ ಮತ್ತು 03:05 ಕ್ಕೆ ದುಬೈನಲ್ಲಿ ಇಳಿಯಲಿದೆ. ಅದೇ ವಿಮಾನವು ದುಬೈನಿಂದ ಮಧ್ಯಾಹ್ನ 04:05 ಗೆ ಮರಳುತ್ತದೆ ಮತ್ತು 08:55 ಕ್ಕೆ ಇಂದೋರ್ ತಲುಪುತ್ತದೆ.
ಯುಎಇ ಆಗಸ್ಟ್ 30 ರಿಂದ ಸಂಪೂರ್ಣ ಲಸಿಕೆ ಹಾಕಿದ ಪ್ರವಾಸಿಗರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸುವುದಾಗಿ ಘೋಷಿಸಿತು. ಜೂನ್ 3ರಿಂದ ಕಳೆದ ವಾರದವರೆಗೆ ದೇಶದಲ್ಲಿ ದಿನನಿತ್ಯದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಾ ಬರುತ್ತಿದೆ. ಪ್ರತಿನಿತ್ಯ ಸಾವಿರಕ್ಕಿಂತ ಕಡಿಮೆ ಪ್ರಮಾಣದ ಪ್ರಕರಣಗಳು ಮಾತ್ರ ವರದಿಯಾಗುತ್ತಿವೆ. ಡಬ್ಲ್ಯುಎಚ್ಒ ಅನುಮೋದಿಸಿದ ಕೋವಿಡ್ -19 ಲಸಿಕೆಗಳಲ್ಲಿ ಆಸ್ಟ್ರಾಜೆನೆಕಾ/ ಆಕ್ಸ್ಫರ್ಡ್/ ಕೋವಿಶೀಲ್ಡ್, ಜಾನ್ಸನ್ ಮತ್ತು ಜಾನ್ಸನ್, ಮಾಡರ್ನಾ, ಫೈಜರ್/ ಬಯೋಟೆಕ್, ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆ ಪಡೆದ ಪ್ರವಾಸಿಗರಿಗೆ ದುಬೈ ವೀಸಾ ನೀಡಲು ಅನುಮತಿ ನೀಡಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತವು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಗ್ರಸ್ಥಾನ ರಾಷ್ಟ್ರವಾಗಿದೆ. 2021 ರ ಮೊದಲಾರ್ಧದಲ್ಲಿ ಟ್ರಾಫಿಕ್ ಪ್ರಮಾಣದಿಂದ 1.9 ಮಿಲಿಯನ್ (19 ಲಕ್ಷ) ಮೀರಿದೆ. ಪ್ರಯಾಣಿಕ ನಿರ್ಬಂಧಗಳ ಹೊರತಾಗಿಯೂ ಕೋವಿಡ್ -19 ಅದರ ಪ್ರಮುಖ ಮೂಲ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಶ್ರೀಲಂಕಾ ಸಹ ಭಾರತೀಯ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿತ್ತು. ಇತ್ತೀಚೆಗೆ ಶ್ರೀಲಂಕಾ ಕೂಡ ಎರಡು ಡೋಸ್ ಲಸಿಕೆ ಪಡೆದ ಭಾರತೀಯ ಪ್ರವಾಸಿಗರು ಶ್ರೀಲಂಕಾ ಪ್ರವಾಸ ಕೈಗೊಳ್ಳಬಹುದು ಎಂದು ನಿರ್ಬಂಧ ಸಡಿಲಿಕೆ ಮಾಡಿತ್ತು.
ಇದನ್ನು ಓದಿ: covid vaccine near me; ಕೋವಿಡ್ ಲಸಿಕೆ ಎಲ್ಲಿ ಸಿಗುತ್ತದೆ ಎಂದು ತಿಳಿಯಬೇಕೇ? ಹೀಗೆ ಸರ್ಚ್ ಮಾಡಿ!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಸಾಧ್ಯವಾದಷ್ಟು ಗುಂಪುಗೂಡುವುದನ್ನು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಜಾರಿಗೆ ತರುತ್ತಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಪಾಲಿಸಬೇಕಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ