ಮೇ. 4ರಿಂದ ದೇಶೀಯ, ಜೂ.1ರಿಂದ ಅಂತಾರಾಷ್ಟ್ರೀಯ ಹಾರಾಟ ಆರಂಭಿಸಲಿರುವ ಏರ್ ಇಂಡಿಯಾ; ಬುಕ್ಕಿಂಗ್ ಆರಂಭ
ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳಿಗಾಗಿ ಕ್ರಮವಾಗಿ ಮೇ 4 ಮತ್ತು ಜೂನ್ 1 ರಂದು ವಿಮಾನಗಳ ಬುಕಿಂಗ್ ಪ್ರಾರಂಭವನ್ನು ಘೋಷಿಸಲು ಏರ್ ಇಂಡಿಯಾ ಈಗ ಮುಂದಾಗಿದೆ
news18-kannada Updated:April 19, 2020, 7:30 AM IST

ಸಾಂದರ್ಭಿಕ ಚಿತ್ರ
- News18 Kannada
- Last Updated: April 19, 2020, 7:30 AM IST
ದೆಹಲಿ(ಏ.19) ಕೊರೋನಾ ಹರಡುವ ಭೀತಿ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್ಡೌನ್ ಆದೇಶ ನೀಡಲಾಗಿದ್ದು, ರಾಷ್ಟ್ರದ ಎಲ್ಲಾ ವಲಯಗಳ ವಿಮಾನ ಹಾರಾಟ ಬಂದ್ ಮಾಡಲಾಗಿದೆ. ಮೇ 3 ವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು, ಮೇ 4 ರಿಂದ ಏರ್ ಇಂಡಿಯಾ ಬುಕ್ಕಿಂಗ್ ಆರಂಭಿಸಲಾಗುವುದು ಎಂದು ಏರ್ ಇಂಡಿಯಾ ತಿಳಿಸಿದೆ. ಅಲ್ಲದೆ ಜೂನ್ 1 ನಂತರ ಅಂತರಾಷ್ಟ್ರೀಯ ವಿಮಾನಗಳ ಬುಕ್ಕಿಂಗ್ ಆರಂಭಿಸಲಾಗುವುದು. ಆಯ್ದ ದೇಶೀಯ ಮಾರ್ಗಗಳಾದ ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ ಮತ್ತು ಬೆಂಗಳೂರಿನ ಪ್ರಮುಖ ಮೆಟ್ರೋ ನಗರಗಳು ಸೇರಿವೆ.
ಪ್ರಧಾನಿ ನರೇಂದ್ರ ಮೋದಿ ಯವರು ಈ ಹಿಂದೆ ಮಾರ್ಚ್ 25 ರಿಂದ ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದರು. ಲಾಕ್ಡೌನ್ನ ಕೊನೆಯ ದಿನವಾದ ಏಪ್ರಿಲ್ 14 ರವರೆಗೆ ಎಲ್ಲಾ ವಿಮಾನಗಳನ್ನು ಹಾರಿಸುವುದನ್ನು ನಿಲ್ಲಿಸಲಾಯಿತು. ನಂತರ ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲಾಯಿತು. ಆದ್ದರಿಂದ ವಿಮಾನ ಹಾರಾಟವನ್ನು ನಿಷೇಧವನ್ನು ವಿಸ್ತರಿಸಲಾಯಿತು. ಲಾಕ್ಡೌನ್ ಹೊರತಾಗಿಯೂ, ಏರ್ ಇಂಡಿಯಾವನ್ನು ಹೊರತುಪಡಿಸಿ, ಅನೇಕ ದೇಶೀಯ ವಿಮಾನಗಳು ಏಪ್ರಿಲ್ 14 ರ ಪ್ರಯಾಣದ ದಿನಾಂಕದಂದು ಸ್ವೀಕೃತ ಬುಕಿಂಗ್ ಅನ್ನು ಪ್ರಾರಂಭಿಸಿದ್ದವು,
ಇದನ್ನೂ ಓದಿ : ಮಧ್ಯಪ್ರದೇಶದಲ್ಲಿ ಪೌರ ಕಾರ್ಮಿಕರ ಮೇಲೆ ಕೊಡಲಿಯಿಂದ ಹಲ್ಲೆ ; ನಾಲ್ವರ ಬಂಧನ
ನಂತರ ಏಪ್ರಿಲ್ ಅಂತ್ಯದವರೆಗೆ ಯಾವುದೇ ಬುಕಿಂಗ್ ತೆಗೆದುಕೊಳ್ಳದಿರಲು ನಿರ್ಧರಿಸಿತು. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳಿಗಾಗಿ ಕ್ರಮವಾಗಿ ಮೇ 4 ಮತ್ತು ಜೂನ್ 1 ರಂದು ವಿಮಾನಗಳ ಬುಕಿಂಗ್ ಪ್ರಾರಂಭವನ್ನು ಘೋಷಿಸಲು ಏರ್ ಇಂಡಿಯಾ ಈಗ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಯವರು ಈ ಹಿಂದೆ ಮಾರ್ಚ್ 25 ರಿಂದ ದೇಶದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದರು. ಲಾಕ್ಡೌನ್ನ ಕೊನೆಯ ದಿನವಾದ ಏಪ್ರಿಲ್ 14 ರವರೆಗೆ ಎಲ್ಲಾ ವಿಮಾನಗಳನ್ನು ಹಾರಿಸುವುದನ್ನು ನಿಲ್ಲಿಸಲಾಯಿತು. ನಂತರ ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲಾಯಿತು. ಆದ್ದರಿಂದ ವಿಮಾನ ಹಾರಾಟವನ್ನು ನಿಷೇಧವನ್ನು ವಿಸ್ತರಿಸಲಾಯಿತು.
ಇದನ್ನೂ ಓದಿ : ಮಧ್ಯಪ್ರದೇಶದಲ್ಲಿ ಪೌರ ಕಾರ್ಮಿಕರ ಮೇಲೆ ಕೊಡಲಿಯಿಂದ ಹಲ್ಲೆ ; ನಾಲ್ವರ ಬಂಧನ
ನಂತರ ಏಪ್ರಿಲ್ ಅಂತ್ಯದವರೆಗೆ ಯಾವುದೇ ಬುಕಿಂಗ್ ತೆಗೆದುಕೊಳ್ಳದಿರಲು ನಿರ್ಧರಿಸಿತು. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಗಳಿಗಾಗಿ ಕ್ರಮವಾಗಿ ಮೇ 4 ಮತ್ತು ಜೂನ್ 1 ರಂದು ವಿಮಾನಗಳ ಬುಕಿಂಗ್ ಪ್ರಾರಂಭವನ್ನು ಘೋಷಿಸಲು ಏರ್ ಇಂಡಿಯಾ ಈಗ ಮುಂದಾಗಿದೆ.