Air India: ವಿಮಾನ ಸೇವೆ ಆರಂಭಿಸಿದ ಏರ್ ಇಂಡಿಯಾ; ಮೇ 14ರವರೆಗಿನ ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಆರಂಭ
Air India Opens Bookings: ದೇಶದ ಒಳಗೆ ಮಾತ್ರ ವಿಮಾನ ಸೇವೆ ಲಭ್ಯವಾಗಲಿದ್ದು,ಅರ್ಹ ಪ್ರಯಾಣಿಕರಿಗೆ ನಾಳೆಯಿಂದ ಮೇ 14ರವರೆಗಿನ ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಸಹ ಆರಂಭವಾಗಿದೆ.
news18-kannada Updated:May 7, 2020, 9:01 AM IST

ಸಾಂದರ್ಭಿಕ ಚಿತ್ರ
- News18 Kannada
- Last Updated: May 7, 2020, 9:01 AM IST
ನವ ದೆಹಲಿ (ಮೇ 07); ಕೊರೋನಾ ಸಂಕಷ್ಟ ಮತ್ತು ಲಾಕ್ಡೌನ್ ಪರಿಣಾಮದಿಂದಾಗಿ ಕಳೆದ ಎರಡು ತಿಂಗಳಿನಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಏರ್ ಇಂಡಿಯಾ ನಾಳೆಯಿಂದ ದೇಶೀಯ ವಿಮಾನ ಹಾರಾಟ ಸೇವೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ದೇಶದ ಒಳಗೆ ಮಾತ್ರ ವಿಮಾನ ಸೇವೆ ಲಭ್ಯವಾಗಲಿದ್ದು,ಅರ್ಹ ಪ್ರಯಾಣಿಕರಿಗೆ ನಾಳೆಯಿಂದ ಮೇ 14ರವರೆಗಿನ ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಸಹ ಆರಂಭವಾಗಿದೆ.
ಆದರೆ, ಎಲ್ಲರಿಗೂ ಟಿಕೆಟ್ ಲಭ್ಯವಾಗುವುದಿಲ್ಲ. ಬದಲಾಗಿ ಗೃಹ ಇಲಾಖೆ ಮಾರ್ಗಸೂಚಿಯಡಿ ಅರ್ಹತೆ ಇದ್ದವರಿಗೆ ಮಾತ್ರ ಟಿಕೆಟ್ ಲಭ್ಯವಾಗಲಿದೆ. ಅಂದರೆ ಟಿಕೆಟ್ ಅಗತ್ಯ ಇದ್ದವರು ಪರೀಕ್ಷೆಗೊಳಪಟ್ಟು ಕೊರೋನಾ ನೆಗೆಟಿವ್ ಇರುವುದು ಕಡ್ಡಾಯ ಎನ್ನಲಾಗುತ್ತಿದೆ. ವಲಸಿಗರು, ಯಾತ್ರಾರ್ಥಿಗಳು ಮತ್ತು ವಿದ್ಯಾರ್ಥಿಗಳು ಇದರ ಅನುಕೂಲ ಪಡೆದುಕೊಳ್ಳಬಹುದು ಎಂದು ನಾಗರೀಕ ವಿಮಾನಯಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : Buddha Purnima 2020: ಇಂದು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ