ನವದೆಹಲಿ (ಜ. 8): ಇಂಗ್ಲೆಂಡ್ನಿಂದ ವಿಶ್ವಾದ್ಯಂತ ಮತ್ತೆ ಹರಡುತ್ತಿರುವ ರೂಪಾಂತರಿ ಕೊರೋನಾ ವೈರಸ್ ಆತಂಕ ಸೃಷ್ಟಿಸಿದೆ. ವೇಗವಾಗಿ ಹರಡುವ ಈ ಅಪಾಯಕಾರಿ ವೈರಸ್ ನಿಯಂತ್ರಿಸಲು ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇಂಗ್ಲೆಂಡ್ ವಿಮಾನಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇಂಗ್ಲೆಂಡ್ನಲ್ಲಿ ಮ್ಯೂಟಂಟ್ ಕೊರೋನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಸಂಚಾರದ ಮೇಲೆ ನಿನ್ನೆಯವರೆಗೆ ನಿರ್ಬಂಧ ವಿಧಿಸಲಾಗಿತ್ತು. ಇಂದಿನಿಂದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಇಂದು ಮುಂಜಾನೆ ಬ್ರಿಟನ್ನಿಂದ ದೆಹಲಿಗೆ ವಿಮಾನ ಬಂದಿಳಿದಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ರೂಪಾಂತರಿ ಕೊರೋನಾ ಕೇಸ್ಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಂದು ಇಂಗ್ಲೆಂಡ್ನಿಂದ 256 ಪ್ರಯಾಣಿಕರನ್ನು ಹೊತ್ತು ತಂದ ಏರ್ ಇಂಡಿಯಾ ವಿಮಾನ ದೆಹಲಿಗೆ ತಲುಪಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.
ಲಂಡನ್ನ ಹೀಥ್ರೋ ವಿಮಾನ ನಿಲ್ದಾಣದಿಂದ ಇಂದಿರಾಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ 256 ಪ್ರಯಾಣಿಕರಿದ್ದರು. ಇಂಗ್ಲೆಂಡ್ನಲ್ಲಿ ರೂಪಾಂತರಿ ಕೊರೋನಾ ಕೇಸ್ಗಳು ವ್ಯಾಪಕವಾಗಿ ಹರಡತೊಡಗಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಡಿ. 23ರಿಂದ ಇಂಗ್ಲೆಂಡ್-ಭಾರತ ನಡುವಿನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
Centre has decided to lift the ban and start UK flights.
In view of extremely serious COVID situation in UK, I wud urge central govt to extend the ban till 31 Jan
— Arvind Kejriwal (@ArvindKejriwal) January 7, 2021
ಭಾರತದಲ್ಲಿ ಒಂದು ವಾರದಲ್ಲೇ 73 ರೂಪಾಂತರಿ ಕೊರೋನಾ ವೈರಸ್ ಕೇಸುಗಳು ಪತ್ತೆಯಾಗಿವೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ, ಪ್ರತಿ ವಾರ 30 ವಿಮಾನಗಳು ಇಂಗ್ಲೆಂಡ್- ಭಾರತದ ನಡುವೆ ಸಂಚರಿಸಲಿವೆ. ಜನವರಿ 23ರವರೆಗೂ ಇದೇ ವೇಳಾಪಟ್ಟಿ ಮುಂದುವರೆಯಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ