ನವದೆಹಲಿ (ಮೇ 31): ಕೊರೋನಾ ವೈರಸ್ ಈಗ ಭೀಕರವಾಗಿ ಕಾಡುತ್ತಿದೆ. ಸಾಮಾನ್ಯರು, ಶ್ರೀಮಂತರು ಎಂದು ನೋಡದೆ ಎಲ್ಲರ ಜೀವ ಹಿಂಡುತ್ತಿದೆ. ಅಚ್ಚರಿ ವಿಚಾರ ಎಂದರೆ, ದೆಹಲಿಯಿಂದ ಮಾಸ್ಕೋ ಹೊರಟಿದ್ದ ವಿಮಾನದಲ್ಲಿರುವ ಪೈಲಟ್ಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ, ವಿಮಾನವನ್ನು ಅರ್ಧದಿಂದ ಕರೆತರಲಾಗಿದೆ.
ಆಗಿದ್ದಿಷ್ಟೆ. ವಂದೇ ಭಾರತ್ ಯೋಜನೆ ಅಡಿಯಲ್ಲಿ ನಾನಾ ರಾಷ್ಟ್ರಗಳಿಗೆ ಭಾರತ ವಿಮಾನಗಳನ್ನು ಕಳುಹಿಸುತ್ತಿದೆ. ಈ ಮೂಲಕ ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದೆ. ಹೀಗೆ ಮಾಸ್ಕೋದಲ್ಲಿರುವ ಸಿಲುಕಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ವಿಮಾನ ದೆಹಲಿಯಿಂದ ಹೊರಟಿತ್ತು. ಉಜ್ಬೇಕಿಸ್ತಾನ್ ಬಳಿ ತೆರಳುವಾಗ ಓರ್ವ ಪೈಲಟ್ಗೆ ಕೊರೋನಾ ಪಾಸಿಟಿವ್ ಇರುವ ವಿಚಾರ ಗೊತ್ತಾಗಿದೆ.
ಹೀಗಾಗಿ, ನಿಯಮದ ಪ್ರಕಾರ ತಕ್ಷಣ ವಾಪಾಸು ಬರುವಂತೆ ಪೈಲಟ್ಗೆ ಸೂಚಿಸಲಾಗಿತ್ತು. ಹೀಗಾಗಿ, ಬೇರೆ ದಾರಿ ಕಾಣದೆ ಪೈಲಟ್ ವಿಮಾನವನ್ನು ಭಾರತಕ್ಕೆ ಹಿಂದಿರುಗಿಸಿದ್ದ.
ಇದನ್ನೂ ಓದಿ: ಶಾಕಿಂಗ್ ವಿಡಿಯೋ; ಕೊರೋನಾ ಶಂಕಿತರ ಸ್ಯಾಂಪಲ್ ಕಿಟ್ನೊಂದಿಗೆ ಮಂಗಗಳು ಪರಾರಿ!
ವಿಮಾನ ಹೊರಡುವುದಕ್ಕೂ ಎರಡು ದಿನ ಮೊದಲು ಎಲ್ಲ ಪೈಲಟ್ಗಳ ರಕ್ತ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಓರ್ವ ಪೈಲಟ್ ಹೊರತುಪಡಿಸಿ ಉಳಿದ ಎಲ್ಲರದ್ದೂ ವರದಿ ನೆಗೆಟಿವ್ ಬಂದಿತ್ತು. ಅಚ್ಚರಿ ವಿಚಾರ ಏನೆಂದರೆ, ಪಾಸಿಟಿವ್ ವರದಿ ಬಂದ ವ್ಯಕ್ತಿಯದ್ದು ನೆಗೆಟಿವ್ ಎಂದೇ ಓದಲಾಗಿತ್ತು. ಈ ತಪ್ಪಿನಿಂದಾಗಿ ಈ ರೀತಿ ಆಗಿತ್ತು. ನಂತರ ಮಾಸ್ಕೋಗೆ ಭಾರತದಿಂದ ಮತ್ತೊಂದು ವಿಮಾನ ಕಳುಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ