HOME » NEWS » Coronavirus-latest-news » AIIMS DIRECTOR SUGGEST GO FOR X RAY FIRST AVOID CT SCANS IN MILD COVID CASES SESR

ಸೋಂಕಿನ ಸಾಧಾರಣ ಲಕ್ಷಣಗಳಿದ್ದರೆ ಸಿಟಿ ಸ್ಕ್ಯಾನ್​ ಬದಲು ಎಕ್ಸರೇಗೆ ಒಳಗೊಳ್ಳಿ; ಏಮ್ಸ್​ ವೈದ್ಯರ ಸಲಹೆ

ಕೋವಿಡ್​ನ ಸಾಧಾರಣ ಲಕ್ಷಣ ಕಂಡು ಬಂದರೆ ಅನಗತ್ಯವಾಗಿ ಸಿಟಿ ಸ್ಕ್ಯಾನ್​ಗೆ ಹೋಗುವುದನ್ನು ತಪ್ಪಿಸಿ ಎಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ ರಂದೀಪ್​ ಗುಲೆರಿಯಾ ತಿಳಿಸಿದ್ದಾರೆ.

news18-kannada
Updated:May 3, 2021, 8:05 PM IST
ಸೋಂಕಿನ ಸಾಧಾರಣ ಲಕ್ಷಣಗಳಿದ್ದರೆ ಸಿಟಿ ಸ್ಕ್ಯಾನ್​ ಬದಲು ಎಕ್ಸರೇಗೆ ಒಳಗೊಳ್ಳಿ; ಏಮ್ಸ್​ ವೈದ್ಯರ ಸಲಹೆ
ಕೋವಿಡ್-19
  • Share this:
ಕೋವಿಡ್​ ಎರಡನೇ ಅಲೆಯಲ್ಲಿ ಬಹುತೇಕ ಸೋಂಕಿತರಿಗೆ ಲಕ್ಷಣಗಳೇ ಗೋಚರಿಸುತ್ತಿಲ್ಲ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಅನೇಕ ಮಂದಿ ಕಡೆಗೆ ಉಸಿರಾಟ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದಕ್ಕೆ ಮತ್ತೊಂದ ಕಾರಣ ಸೋಂಕಿತರ ಲಕ್ಷಣ ಆರ್​ಟಿಪಿಸಿಆರ್​ ಪರೀಕ್ಷೆಯಲ್ಲಿ ದೃಢಗೊಳ್ಳದಿರುವುದು. ಇದೇ ಹಿನ್ನಲೆ ಅನೇಕರ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್​ ಬರುತ್ತಿದೆ. ಇದರಿಂದಾಗಿ ಸೋಂಕಿತರು ಕಂಗಲಾಗುವಂತೆ ಆಗಿದೆ. ಲಕ್ಷಣ ರಹಿತ ಸೋಂಕಿತರಿಂದಾಗಿ ಅನೇಕ ಜನರಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ಸೋಂಕಿ ಲಕ್ಷಣ ಇದ್ದು ನಿಮ್ಮ ಪರೀಕ್ಷೆಯಲ್ಲಿ ನೆಗೆಟಿವ್​ ಬಂದರೆ ಸಿಟಿ ಸ್ಕ್ಯಾನ್​ಗೆ ಮಾಡಿಸುವಂತೆ ಅನೇಕರು ಸಲಹೆ ನೀಡುತ್ತಿದ್ದಾರೆ. ಈ ಕುರಿತು ಇಂದು ಮಾತನಾಡಿರುವ ಏಮ್ಸ್​ ವೈದ್ಯರು, ಸಿಟಿ ಸ್ಕಾನ್​ಗಿಂತ ಎಕ್ಸ್​ರೇಗೆ ಸೋಂಕಿತರು ಒಳಗಾಗುವುದು ಉತ್ತಮ ಎಂದಿದ್ದಾರೆ.

ಕೋವಿಡ್​ನ ಸಾಧಾರಣ ಲಕ್ಷಣ ಕಂಡು ಬಂದರೆ ಅನಗತ್ಯವಾಗಿ ಸಿಟಿ ಸ್ಕ್ಯಾನ್​ಗೆ ಹೋಗುವುದನ್ನು ತಪ್ಪಿಸಿ ಎಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ ರಂದೀಪ್​ ಗುಲೆರಿಯಾ ತಿಳಿಸಿದ್ದಾರೆ. ಸಿಟಿ ಸ್ಕ್ಯಾನ್​ನಲ್ಲಿ ಕೆಲವು ಪ್ಯಾಚಸ್​ಗಳು ಕಂಡು ಬರುತ್ತವೆ. ಇವು ಯಾವುದೇ ಲಕ್ಷಣ ಇಲ್ಲದೇ ಗುಣಮುಖವಾಗುತ್ತದೆ ಎಂದಿದ್ದಾರೆ

ಇದನ್ನು ಓದಿ: ಕೋವಿಡ್​ಗೆ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅಣ್ಣ ಬಲಿ

ಶೇಕಡಾ 30 ರಿಂದ 40 ರಷ್ಟು ಜನರಿಗೆ ಲಕ್ಷಣ ರಹಿತ ಕೋವಿಡ್​ ಇದೆ ಎಂಬುದು ಸಿಟಿ ಸ್ಕ್ಯಾನ್​ನಲ್ಲಿ ದೃಢಪಟ್ಟಿದೆ ಎಂದು ಅಧ್ಯಯನ ತಿಳಿಸಿದೆ. ಆದರೆ, ಇವರಲ್ಲಿ ಅನೇಕ ಪ್ಯಾಚಸ್​ಗಳು ಯಾವುದೇ ಚಿಕಿತ್ಸೆಯಿಲ್ಲದೇ ವಾಸಿಯಾಗಿದೆ ಎಂದರು.
ಒಂದು ಸಿಟಿ ಸ್ಕ್ಯಾನ್​ 300 ರಿಂದ 400 ಎಕ್ಸರೆಗೆ ಸಮನಾಗಿರುತ್ತದೆ. ವಿಕಿರಣಗಳು ಎದೆ ಭಾಗ ಹೊಕ್ಕುವುದರಿಂದ ಕ್ಯಾನ್ಸರ್​ ಬರುವ ಸಂಭವ ಹೆಚ್ಚು. ಈ ಹಿನ್ನಲೆ ಅನಗತ್ಯವಾಗಿ ಸಿಟಿ ಸ್ಕ್ಯಾನ್​ಗೆ ಒಳಗಾಗಬೇಡಿ ಎಂದು ಸಲಹೆ ನೀಡಿದರು

ಇನ್ನು ಸೋಂಕಿನ ಬಗ್ಗೆ ಅನುಮಾನವಿದ್ದರೆ ಎಕ್ಸ್​ ರೇಗೆ ಮೊದಲು ಒಳಗೊಳ್ಳಿ. ಅಗತ್ಯವಿದ್ದಲ್ಲಿ ವೈದ್ಯರೇ ಸಿಟಿ ಸ್ಕ್ಯಾನ್​ಗೆ ಒಳಗಾಗುವ ಸಲಹೆ ನೀಡುತ್ತಾರೆ. ಸೋಂಕಿನ ಸಾಧಾರಣ ಲಕ್ಷಣಗಳಿರುವವರು ಸಿಪಿಸಿ ಅಥವಾ ಎಲ್​ಡಿಎಚ್​ಗೆ ಒಳಗಾಗುವುದರಿಂದ ಹೆಚ್ಚು ಆತಂಕ ಸೃಷ್ಟಿಸುತ್ತದೆ. ಸಲಹೆ ಪಡೆದು ಸಿಟಿ ಸ್ಕ್ಯಾನ್​ಗೆ ಒಳಗಾಗಿ ಇಲ್ಲವಾದಲ್ಲಿ ಇದು ಹೆಚ್ಚು ಹಾನಿಕಾರಕವಾಗಲಿದೆ ಎಂದು ಇದೇ ವೇಳೆ ಎಚ್ಚರಿಸಿದರು.

ಸಾಧಾರಣ ಲಕ್ಷಣವಿದ್ದರೆ ಯಾವುದೇ ಕಾರಣಕ್ಕೂ ಹೆಚ್ಚು ಸ್ಟಿರೀಯಡ್​ ಯುಕ್ತ ಔಷಧಿ ಸೇವಿಸಬೇಡಿ. ಇದು ಮತ್ತಷ್ಟು ಹೆಚ್ಚಿನ ಗಂಭೀರ ಆರೋಗ್ಯ ಸ್ಥಿತಿಗೆ ಕಾರಣವಾಗುತ್ತದೆ ಎಂದರು
Published by: Seema R
First published: May 3, 2021, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories