ಭಾರತದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು; ಶಾಲೆ ತೆರೆಯಬಹುದು ಎಂದ ಏಮ್ಸ್​ ಮುಖ್ಯಸ್ಥ

ಮಾಸ್ಕ್​ ಧರಿಸಿ, ಸಾಮಾಜಿಕ ಅಂತರದ ಜೊತೆ ಕೋವಿಡ್ ನಿಯಮಾವಳಿ ಪಾಲಿಸುವ ಮೂಲಕ ಮತ್ತೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು. ದೀರ್ಘಕಾಲದವರೆಗೆ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋವಿಡ್​ ನಿಂದಾಗಿ ಕಳೆದೊಂದುವರೆ ವರ್ಷದಿಂದ ಶಾಲೆಗಳು ಬಂದ್​ ಆಗಿದ್ದು, ಆನ್​ಲೈನ್​ ಕಲಿಕೆ ಮೂಲಕವೇ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯುತ್ತಿದೆ. ಕೋವಿಡ್​ ರೂಪಾಂತರಗಳಿಂದ ಬೆದರಿದ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ದೊಡ್ಡವರಿಗೆ ಈಗಾಗಲೇ ಲಸಿಕೆ ಸಿಕ್ಕಿದ್ದು, ಮಕ್ಕಳ ಲಸಿಕೆಗಳು ಪ್ರಯೋಗ ಹಂತದಲ್ಲಿದ್ದು, ಇನ್ನೇನು ಮುಂದಿನ ತಿಂಗಳ ಅಂತ್ಯದಲ್ಲಿ ಸಿಗಬಹುದು ಎಂದು ಈಗಾಗಲೇ ಕೇಂದ್ರ ಸರ್ಕಾರ ತಿಳಿಸಿದೆ. ಮೂರನೇ ಅಲೆ ಸೋಂಕು ಮಕ್ಕಳನ್ನು ಹೆಚ್ಚು ಬಾಧಿಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಈ ವರ್ಷ ಕೂಡ ಮಕ್ಕಳು ಮನೆಯಿಂದಲೇ ಕಲಿಕೆ ಮುಂದುವರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಮಾತನಾಡಿರುವ ಏಮ್ಸ್​ ಮುಖ್ಯಸ್ಥರು, ಶಾಲೆಗಳನ್ನು ತೆರೆಯಲು ಇದು ಸಕಾಲ ಎಂದು ಅನುಮತಿ ನೀಡಿದ್ದಾರೆ.

  ಈ ಕುರಿತು ಮಾತನಾಡಿರುವ ಏಮ್ಸ್​ ಮುಖ್ಯಸ್ಥ ಡಾ ರಂದೀಪ್​ ಗುಲೇರಿಯಾ, ಭಾರತದ ಮಕ್ಕಳಲ್ಲಿ ಸೋಂಕಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಈ ಹಿನ್ನಲೆ ಸೋಂಕು ಕಡಿಮೆ ಇರುವ ಕಡೆ ಶಾಲೆ ತೆರೆಯ ಬಹುದು ಎಂದು ತಿಳಿಸಿದ್ದಾರೆ.  ಇಂಡಿಯಾ ಟುಡೇಯೊಂದಿಗೆ ಮಾತನಾಡಿರುವ ಅವರು, ಕಡಿಮೆ ಸೋಂಕಿನ ಪ್ರಕರಣ ಇರುವ ಸ್ಥಳಗಳಲ್ಲಿ ಶಾಲೆಗಳನ್ನು ತೆರೆಯುವಂತೆ ನಾನು ಶಿಫಾರಸ್ಸು ಮಾಡುತ್ತೇನೆ ಎಂದಿದ್ದಾರೆ. ಶೇ 5ಕ್ಕಿಂತ ಸೋಂಕಿನ ಪ್ರಮಾಣ ಕಡಿಮೆ ಇದ್ದ ಕಡೆ ಶಾಲೆಗಳನ್ನು ತೆರೆಯಲು ಸಿದ್ದತೆ ನಡೆಸಬಹುದು ಎಂದಿದ್ದಾರೆ.

  ಕೋವಿಡ್​ 19 ಟಾಸ್ಕ್​ ಫೋರ್ಸ್​ ಮತ್ತು ಖ್ಯಾತ ಶ್ವಾಸಕೋಶ ತಜ್ಞರುಗಳು ಕೂಡ ಸೋಂಕು ಹರಡುತ್ತಿದೆ ಎಂದು ಮನಗಂಡ  ತಕ್ಷಣಕ್ಕೆ ಶಾಲೆ ಮುಚ್ಚಬಹುದು. ಆದರೆ, ಶಾಲೆಗಳನ್ನು ಪರ್ಯಾಯ ದಿನಗಳಲ್ಲಿ ತೆರೆಯುವ ಕುರಿತು ಚಿಂತಿಸಬೇಕು. ಅಲ್ಲದೇ ಸ್ಥಗಿತಗೊಂಡಿರುವ ಶಾಲೆಗಳನ್ನು ಪುನಾರಂಭ ಮಾಡುವ ಮಾರ್ಗ ಹುಡುಕಬೇಕು ಎಂದಿದ್ದಾರೆ

  ಶಾಲೆ ಎಂಬುದು ಮಕ್ಕಳ ಒಟ್ಟಾರೆ ಬೆಳವಣಿಗೆ ವಿಚಾರದಲ್ಲಿ ಬಹು ಮಹತ್ವದ ಅಂಶವಾಗಿದೆ. ಹೀಗಾಗಿ ಈ ಕಾರಣದಿಂದಲೂ ನಾವು ಗಮನಿಸಬೇಕು ಎಂದಿದ್ದಾರೆ
  ಭಾರತದಲ್ಲಿ ಮಕ್ಕಳು ವೈರಸ್​ಗೆ ಹೆಚ್ಚಾಗಿ ತೆರೆದು ಕೊಳ್ಳುತ್ತಾರೆ. ಇದರಿಂದ ಅನೇಕ ಮಕ್ಕಳಲ್ಲಿ ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ.

  ಇದನ್ನು ಓದಿ: SSLC ಪರೀಕ್ಷೆಯಲ್ಲಿ ಅನುತ್ತೀರ್ಣವಾಗುತ್ತೇನೆಂಬ ಭಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

  ಏಮ್ಸ್ ಮತ್ತು ಡಬ್ಲ್ಯುಎಚ್‌ಒ ನಡೆಸಿದ ಸಮೀಕ್ಷೆಯಲ್ಲಿ ಮಕ್ಕಳಲ್ಲಿ SARS-CoV-2 ಸಿರೊ-ಪಾಸಿಟಿವಿಟಿ ದರವು ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚಿದೆ. ಇದೇ ಕಾರಣ ಮೂರನೇ ಅಲೆ ಸೋಂಕು ದೊಡ್ಡವರಿಗಿಂತ ಹೆಚ್ಚಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

  ಮಾಸ್ಕ್​ ಧರಿಸಿ, ಸಾಮಾಜಿಕ ಅಂತರದ ಜೊತೆ ಕೋವಿಡ್ ನಿಯಮಾವಳಿ ಪಾಲಿಸುವ ಮೂಲಕ ಮತ್ತೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು. ದೀರ್ಘಕಾಲದವರೆಗೆ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದ್ದಾರೆ.

  ಮಕ್ಕಳಿಗೆ ಕೋವಿಡ್ -19 ಲಸಿಕೆಗಳನ್ನು ಈ ವರ್ಷದ ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ ಲಭ್ಯವಾಗಲಿದೆ. ಮಕ್ಕಳಿಗಾಗಿ ಕೋವಾಕ್ಸಿನ್‌ನ ಕ್ಲಿನಿಕಲ್ ಪ್ರಯೋಗಗಳ ಉತ್ತಮವಾಗಿದೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: