HOME » NEWS » Coronavirus-latest-news » AGED WOMAN DROPPED AT STRANGERS PLACE BY AMBULANCE IN UNITED KINGDOM AFTER COVID 19 TREATMENT STG SCT

ಕೋವಿಡ್-19 ಚಿಕಿತ್ಸೆ ಬಳಿಕ ಅಜ್ಜಿಯನ್ನು ಯಾರದ್ದೋ ಮನೆಗೆ ಬಿಟ್ಟು ಬಂದ ಆ್ಯಂಬುಲೆನ್ಸ್!

ಯುನೈಟೆಡ್‌ ಕಿಂಗ್‌ಡಮ್‌ನ ಆ್ಯಂಬುಲೆನ್ಸ್‌ ಸಿಬ್ಬಂದಿ ನಿರ್ಲಕ್ಷ್ಯದಿಂದ 89 ವರ್ಷದ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ನಂತರ ಅಪರಿಚಿತರ ಮನೆಯಲ್ಲಿ ಡ್ರಾಪ್‌ ಮಾಡಿದ್ದಾರೆ.

news18-kannada
Updated:April 23, 2021, 2:11 PM IST
ಕೋವಿಡ್-19 ಚಿಕಿತ್ಸೆ ಬಳಿಕ ಅಜ್ಜಿಯನ್ನು ಯಾರದ್ದೋ ಮನೆಗೆ ಬಿಟ್ಟು ಬಂದ ಆ್ಯಂಬುಲೆನ್ಸ್!
ಆ್ಯಂಬುಲೆನ್ಸ್​
  • Share this:
ನಮ್ಮ ರಾಜ್ಯದಲ್ಲಿ ಹಾಗೂ ನಮ್ಮ ದೇಶದಲ್ಲಿ ಕೋವಿಡ್‌ ವರದಿಯಲ್ಲಿ ಎಡವಟ್ಟು, ದೋಷ ನಡೆದಿರುವ ಬಗ್ಗೆ ಮುಂತಾದ ವರದಿಗಳನ್ನು ನೋಡಿರುತ್ತೀರಾ. ಇಲ್ಲವೇ ಕೇಳಿರುತ್ತೀರಾ... ಆದರೆ, ಕೋವಿಡ್ - 19 ಚಿಕಿತ್ಸೆ ನೀಡಿದ ನಂತರ ಹಿರಿಯ ಮಹಿಳೆಯನ್ನು ಆ್ಯಂಬುಲೆನ್ಸ್‌ನಲ್ಲಿ ಅಪರಿಚಿತರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿರುವ ಘಟನೆ ಯುಕೆಯಲ್ಲಿ ನಡೆದಿದೆ. ಹೌದು, ಯುನೈಟೆಡ್‌ ಕಿಂಗ್‌ಡಮ್‌ನ ಆ್ಯಂಬುಲೆನ್ಸ್‌ ಸಿಬ್ಬಂದಿ ನಿರ್ಲಕ್ಷ್ಯದಿಂದ 89 ವರ್ಷದ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ನಂತರ ಅಪರಿಚಿತರ ಮನೆಯಲ್ಲಿ ಡ್ರಾಪ್‌ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಯುನೈಟೆಡ್‌ ಕಿಂಗ್‌ಡಮ್‌ನ ಎಲಿಜಬೆತ್ ಮಹೋನಿ 10 ವಾರಗಳ ಕಾಲ ಸೌತ್ ವೇಲ್ಸ್‌ನ ಪೊಂಟಿಪೂಲ್‌ನ ಕೌಂಟಿ ಆಸ್ಪತ್ರೆಯಲ್ಲಿ ಕೋವಿಡ್ -19 ವೈರಸ್‌ ವಿರುದ್ಧ ಹೋರಾಡುತ್ತಿದ್ದರು. ನಂತರ ಕೋವಿಡ್‌ ವಿರುದ್ಧದ ಯುದ್ಧ ಗೆದ್ದ ನಂತರ 89 ವರ್ಷದ ಅಜ್ಜಿ ಡಿಸ್ಚಾರ್ಜ್ ಆಗಿದ್ದರು. ಆದರೆ ಆ್ಯಂಬುಲೆನ್ಸ್ ಸೇವೆಯಲ್ಲಿ ಮಾನವ ದೋಷದಿಂದ ಉಂಟಾದ ತೊಂದರೆಯಿಂದ ಆಕೆ ತಪ್ಪಿಸಿಕೊಳ್ಳಲಿಲ್ಲ.

ಇನ್ನೊಂದೆಡೆ, ಅಜ್ಜಿ ತಮ್ಮ ಮನೆಗೆ ಬರುವವರೆಗೆ ದಿನಗಟ್ಟಲೆ ಕಾಯುತ್ತಿದ್ದ ಆಕೆಯ ಕುಟುಂಬ ಸದಸ್ಯರು, ಡಿಸ್ಚಾರ್ಜ್ ಆದ ಬಳಿಕ ಆಸ್ಪತ್ರೆಯವರು ಹೇಳಿದ ನಿಗದಿತ ಸಮಯಕ್ಕೆ ಸರಿಯಾಗಿ ಆಕೆ ಬರದಿದ್ದಾಗ ಮನೆಯವರು ಕಳವಳಗೊಳ್ಳಲು ಪ್ರಾರಂಭಿಸಿದರು ಎಂದು ವೇಲ್ಸ್ ಆನ್‌ಲೈನ್ ವರದಿ ಮಾಡಿದೆ. ಕೆಲವು ಗಂಟೆಗಳ ನಂತರ, ವೆಲ್ಷ್ ಆಂಬ್ಯುಲೆನ್ಸ್ ಸೇವೆ ಅಜ್ಜಿಯನ್ನು ನ್ಯೂಪೋರ್ಟ್‌ನಲ್ಲಿ ಅಂದರೆ ಅವರ ಮನೆಗಿಂತ 8 ಮೈಲಿಗಿಂತ ಹೆಚ್ಚು ದೂರದಲ್ಲಿರುವ ವಿಳಾಸಕ್ಕೆ ಕರೆದೊಯ್ದು, ಎಲಿಜಬೆತ್ ಅವರನ್ನು ಅಪರಿಚಿತರ ಹಾಸಿಗೆಯಲ್ಲಿ ಮಲಗಿಸಿರುವುದು ಕುಟುಂಬ ಸದಸ್ಯರಿಗೆ ಗೊತ್ತಾಗಿದೆ.

ಈ ಸಂಬಂಧ "ಪ್ರಾರಂಭದಿಂದ ಮುಗಿಸುವವರೆಗೆ ಇಡೀ ವಿಷಯವು ದೋಷಗಳ ಪಟ್ಟಿ" ಎಂದು ಎಲಿಜಬೆತ್ ಮಹೋನಿಯ ಪುತ್ರ ಬ್ರಯನ್ ಹೇಳಿಕೊಂಡಿದ್ದಾರೆ. ಮಾರ್ಚ್ 12 ರಂದು ಸ್ಥಳೀಯ ಸಮಯ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಹೋನಿ ಮನೆಗೆ ಬರುತ್ತಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಲು ಆಸ್ಪತ್ರೆಯವರು ಕರೆ ಮಾಡಿದ್ದರು ಎಂದು ಅವರು ಸುದ್ದಿವಾಹಿನಿಗೆ ತಿಳಿಸಿದರು. ಆದರೆ ಸಮಯ 2 ಗಂಟೆಯಾದರೂ ಎಲಿಜಬೆತ್‌ ಮನೆಗೆ ಬರಲಿಲ್ಲ. ಬ್ರಿಯಾನ್ ನಂತರ ಆಸ್ಪತ್ರೆಗೆ ಕರೆ ಮಾಡಿದಾಗ, ಅವರು "ಸ್ವಲ್ಪ ಸಮಸ್ಯೆ ಇದೆ". ಮಹೋನಿ ಸ್ವಲ್ಪ ಸಮಯ ಮೊದಲು ಪಾರ್ಶ್ವವಾಯುವಿಗೆ ಒಳಗಾಗಿದ್ದಾಗಿ ತಿಳಿಸಿದರು ಎಂದು ಬ್ರಯನ್ ಹೇಳಿದರು.

ಆದ್ದರಿಂದ, ಕುಟುಂಬದ ಮನಸ್ಸಿಗೆ ಬಂದ ಮೊದಲ ಆಲೋಚನೆ ಅಜ್ಜಿಗೆ ಏನಾದರೂ ಕೆಟ್ಟದಾಗಿದೆಯೇ ಎಂದು. ಆದರೆ, ಸುಮಾರು 3 ಗಂಟೆಗಳ ನಂತರ, ಆಸ್ಪತ್ರೆಯಿಂದ ಮತ್ತೊಂದು ಕರೆ ಬಂತೆಂದು ಬ್ರಯನ್ ಹೇಳಿದ್ದು, ಮತ್ತು ಅವರ ತಾಯಿಯನ್ನು ನ್ಯೂಪೋರ್ಟ್‌ನ ಮನೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಲಾಯಿತು, “ಆದರೆ ವಿವರಗಳು ನಿಜವಾಗಿಯೂ ಸ್ಪಷ್ಟವಾಗಿರಲಿಲ್ಲ” ಎಂದು ಅವರು ಹೇಳಿದರು.
Youtube Video

ಇನ್ನು, ಈ ಘಟನೆ ಸಂಬಂಧ ಕುಟುಂಬಕ್ಕೆ ಕ್ಷಮೆಯಾಚಿಸಲಾಗಿದೆ ಎಂದು ಆ್ಯಂಬುಲೆನ್ಸ್ ಸರ್ವೀಸ್‌ ತಿಳಿಸಿದೆ. ಆದರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಅಧಿಕೃತ ವಿವರಣೆಯನ್ನು ಇನ್ನೂ ಪಡೆದಿಲ್ಲ ಎಂದು ಬ್ರಯನ್ ಮಿರರ್‌ಗೆ ತಿಳಿಸಿದರು. ಅಲ್ಲದೆ, ತಿಳಿದಿಲ್ಲದ ಸ್ಥಳಕ್ಕೆ ಹೋಗಿದ್ದರಿಂದ ಮತ್ತು ಕೋವಿಡ್ -19 ರಿಂದ ಆಗತಾನೇ ಚೇತರಿಸಿಕೊಂಡಿದ್ದರಿಂದ ಮಹಿಳೆಯನ್ನು ತಪಾಸಣೆಗಾಗಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಬ್ರಯನ್ ಹೇಳಿದರು.
Published by: Sushma Chakre
First published: April 23, 2021, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories