ಹಾಸನ: ಭಾರತವನ್ನು ತಲ್ಲಣಗೊಳಿಸಿರುವ ಮಾರಕ ಕೊರೋನಾ ಸೋಂಕು ಮುಂದಿನ ಮೂರು ತಿಂಗಳಲ್ಲಿ ತೊಲಗುತ್ತದೆ ಎಂದು ಹಾಸನದ ದೇವಿರಮ್ಮ ದೇವಿ ಪ್ರಸಾದ ನೀಡಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಗರೆ ಗ್ರಾಮದಲ್ಲಿರುವ ದೇವಿರಮ್ಮ ಈ ಭಾಗದ ಶಕ್ತಿಶಾಲಿ ದೇವಿಗಳಲ್ಲಿ ಒಂದು. ಹಗರೆ ಸುತ್ತಮುತ್ತ ಗ್ರಾಮದವರ ಆರಾಧ್ಯ ದೈವ ದೇವೀರಮ್ಮನ ಬಳಿ ಭಕ್ತರು ಮೊರೆ ಹೋಗಿ, ಮಾರಕ ಕೊರೋನಾ ಸೋಂಕು ಹೋಗುತ್ತದೆಯೋ? ಇಲ್ಲವೋ? ಎಂದು ತಿಳಿಸುವಂತೆ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಪ್ರತಿ ದಿನದಂತೆ ದೇವಿಗೆ ಪೂಜೆ ಸಲ್ಲಿಸಿ, ಪ್ರಸಾದ ಕೇಳಿದ್ದಾರೆ. ಈ ವೇಳೆ ದೇವಿಯೂ ಬಲಕ್ಕೆ ಹೂವು ನೀಡುವ ಮೂಲಕ ಭಕ್ತರ ಕಳವಳ ದೂರ ಮಾಡಿದ್ದಾಳೆ. ಅಲ್ಲದೇ, ಇನ್ನು ಮೂರು ತಿಂಗಳಲ್ಲಿ ಈ ಸೋಂಕು ತೊಲಗಲಿದೆ ಎಂಬ ಸೂಚನೆಯನ್ನು ಸಹ ದೇವಿ ನೀಡಿದ್ದಾಳೆ.
ಕಳೆದ ಭಾರಿ ವಿಧಾನ ಸಭೆ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದ ಲಿಂಗೇಶ್ ಮತ್ತು ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಜಯಗಳಿಸುತ್ತಾರೆ ಎಂದು ದೇವಿರಮ್ಮ ದೇವಿ ಪ್ರಸಾದ ನೀಡಿದ್ದಳು. ಅದರಂತೆ ಇವರಿಬ್ಬರು ಚುನಾವಣೆಯಲ್ಲಿ ಜಯಗಳಿಸಿದ್ದರು.
ಇದನ್ನು ಓದಿ: ಏಪ್ರಿಲ್ 20ರ ಬಳಿಕ ಲಾಕ್ಡೌನ್ನಿಂದ ಯಾವ್ಯಾವುದಕ್ಕೆ ವಿನಾಯಿತಿ ಸಿಗಬಹುದು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ