HOME » NEWS » Coronavirus-latest-news » AFTER RANGOLI CHANDEL WHY TWITTERATI WANT BABITA PHOGATS ACCOUNT TO BE SUSPENDED SNVS

ದ್ವೇಷ ಪ್ರಚೋದನೆ ಆರೋಪ: ಕಂಗನಾ ಸೋದರಿ ಬಳಿಕ ಟ್ವೀಟಿಗರಿಗೆ ಬಬಿತಾ ಪೋಗಟ್ ಟಾರ್ಗೆಟ್

ನಿನ್ನೆ ರಂಗೋಲಿ ಚಾಂಡೆಲ್ ಟ್ವಿಟ್ಟರ್ ಅಕೌಂಟ್ ಡಿಲೀಟ್ ಆದ ಬೆನ್ನಲ್ಲೇ ಇವತ್ತು ಬಬಿತಾ ಫೋಗಟ್ ಖಾತೆ ಬಂದ್ ಮಾಡಿ ಎಂಬುದು ಟ್ರೆಂಡ್ ಆಗುತ್ತಿದೆ.

news18-kannada
Updated:April 17, 2020, 12:58 PM IST
ದ್ವೇಷ ಪ್ರಚೋದನೆ ಆರೋಪ: ಕಂಗನಾ ಸೋದರಿ ಬಳಿಕ ಟ್ವೀಟಿಗರಿಗೆ ಬಬಿತಾ ಪೋಗಟ್ ಟಾರ್ಗೆಟ್
ಬಬಿತಾ ಫೋಗಟ್
  • Share this:
ನವದೆಹಲಿ(ಏ. 17): ಕೊರೋನಾ ವೈರಸ್ ಸಂಕಷ್ಟದ ಸಂದರ್ಭದಲ್ಲೂ ಎಲ್ಲದಕ್ಕೂ ಕೋಮುಬಣ್ಣ ಬಳಿಯುವ ಪ್ರವೃತ್ತಿಯನ್ನು ಹಲವರು ಇನ್ನೂ ಬಿಟ್ಟಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇದು ಹುಚ್ಚುಕುದುರೆಯಂತೆ ಓಡುತ್ತಿದೆ. ಸೂತ್ರವಿಲ್ಲದ ಗಾಳಿಪಟದಂತೆ ಜನರ ಯೋಚನೆಗಳು ಗೋತಾ ಹೊಡೆಯುತ್ತಿವೆ. ದೆಹಲಿಯಲ್ಲಿ ತಬ್ಲಿಘಿ ಜಮಾತ್ ಸಭೆ ನಡೆದು ಕೊರೋನಾ ವೈರಸ್ ಹೆಚ್ಚು ಹಬ್ಬಲು ಕಾರಣವಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಕೋಮು ಬಣ್ಣ ಸ್ಪಷ್ಟವಾಗಿ ನಮೂದಾಗಲು ಕಾರಣವಾಗುತ್ತಿದೆ. ನಿಷ್ಠುರ ಮಾತಿಗೆ ಹೆಸರಾದ ಕಂಗನಾ ರಣಾವತ್ ಅವರ ಸೋದರಿ ರಂಗೋಲಿ ಚಾಂಡೆಲ್ ಅವರು ತಬ್ಲಿಘಿ ಜಮಾತ್ ವಿಚಾರ ಹಿಡಿದು ದ್ವೇಷಪೂರಿತ ಮಾತುಗಳನ್ನಾಡಿದ್ದಾರೆಂದು ಒಂದು ವರ್ಗದ ಟ್ವೀಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಟ್ವಿಟ್ಟರ್ ಸಂಸ್ಥೆ ರಂಗೋಲಿ ಚಾಂಡೆಲ್ ಅವರ ಖಾತೆಯನ್ನೇ ತೆಗೆದುಹಾಕಿತು. ಈಗ ಟ್ವೀಟಿಗ ಸಮುದಾಯದ ಕಣ್ಣು ಖ್ಯಾತ ಕುಸ್ತಿಪಟು ಬಬಿತಾ ಪೋಗಟ್ ಮೇಲೆ ಬಿದ್ದಿದೆ.

ಬಬಿತಾ ಪೋಗಟ್ ಅವರು ಮೊನ್ನೆ ತಬ್ಲಿಘಿ ಜಮಾತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. “ಕೊರೋನಾ ವೈರಸ್ ಭಾರತದ ಎರಡನೇ ಅತಿದೊಡ್ಡ ಸಮಸ್ಯೆ ಆಗಿದೆ. ಅನಾಗರಿಕ ಜಮಾತಿಯೇ ಭಾರತದ ನಂಬರ್ ಒನ್ ಸಮಸ್ಯೆ” ಎಂದು ಟ್ವೀಟ್ ಮಾಡಿದ್ದರು.

ರಂಗೋಲಿ ಚಾಂಡೆಲ್ ಅವರ ಟ್ವಿಟ್ಟರ್ ಅಕೌಂಟ್ ಡಿಲೀಟ್ ಆಗಲು ಕಾರಣವಾಗಿದ್ದ ಟ್ವೀಟಿಗರೇ ಈಗ ಬಬಿತಾ ಪೋಗಟ್ ಅವರ ಈ ಟ್ವೀಟನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ರಿಪೋರ್ಟ್ ಮಾಡುತ್ತಿದ್ದಾರೆ.

ಹಿಂಸಾಚಾರ ಮತ್ತು ದ್ವೇಷಕ್ಕೆ ಪ್ರಚೋದನೆ ಮಾಡುವ ಟ್ವೀಟ್​ಗಳಿದ್ದ ಯಾರು ಬೇಕಾದರೂ ರಿಪೋರ್ಟ್ ಮಾಡಬಹುದು. ಈ ರೀತಿ ಟ್ವೀಟ್ ಮಾಡಿದವರ ಖಾತೆಯನ್ನೇ ತೆಗೆದುಹಾಕುವ ನೀತಿಯನ್ನು ಟ್ವಿಟ್ಟರ್ ಸಂಸ್ಥೆ ಅನುಸರಿಸುತ್ತಿದೆ.

ಇದನ್ನೂ ಓದಿ: ತಬ್ಲಿಘಿ ಜಮಾತ್‌ ಮುಖ್ಯಸ್ಥ ಮೌಲಾನಾ ಸಾದ್​​ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್​ ದಾಖಲಿಸಿದ ಇಡಿ

ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಸೋದರಿ ರಂಗೋಲಿ ಚಾಂಡೆಲ್ ಅವರು ಆ್ಯಸಿಡ್ ದೌರ್ಜನ್ಯದ ಸಂತ್ರಸ್ತೆ. ಅಕ್ಕನಂತೆ ನೇರ ನಿಷ್ಠುರ ಮಾತಿಗೆ ಹೆಸರುವಾಸಿ. ಆದರೆ, ತಬ್ಲಿಘಿ ಜಮಾತ್ ವಿಚಾರದಲ್ಲಿ ಅವರ ಪ್ರತಿಕ್ರಿಯೆ ವಿಪರೀತಕ್ಕೆ ಹೋಗಿತ್ತು. ಮುಲ್ಲಾ, ಸೆಕ್ಯೂಲರ್ ಮೀಡಿಯಾಗಳನ್ನ ಸಾಲು ಸಾಲಾಗಿ ನಿಲ್ಲಿಸಿ ಶೂಟ್ ಮಾಡಬೇಕು ಎಂದು ಉದ್ಗರಿಸಿದ್ದರು.

“ಕೊರೋನಾದಿಂದ ಒಬ್ಬ ಜಮಾತೀ ಸಾಯುತ್ತಾನೆ. ಆತನ ಕುಟುಂಬ ಸದಸ್ಯರನ್ನು ಪರೀಕ್ಷಿಸಲು ಪೊಲೀಸರು ಹೋದಾಗ ಜನರು ದಾಳಿ ಮಾಡಿ ಸಾಯಿಸುತ್ತಾರೆ… ಈ ಮುಲ್ಲಾಗಳು + ಸೆಕ್ಯೂಲರ್ ಮಾಧ್ಯಮದವರನ್ನು ಒಂದು ಸಾಲಿನಲ್ಲಿ ನಿಲ್ಲಿಸಿ ಶೂಟ್ ಮಾಡಿ ಸಾಯಿಸಬೇಕು…. ಇತಿಹಾಸಕ್ಕೆ ಮಣ್ಣುಹಾಕ… ಅವರು ನಮ್ಮ ನಾಜಿಗಳೆಂದು ಬೇಕಾದರೆ ಹೇಳಿಕೊಳ್ಳಲಿ… ನಕಲಿ ಇಮೇಜ್​ಗಿಂತ ಜೀವ ಹೆಚ್ಚು ಮುಖ್ಯ” ಎಂದು ರಂಗೋಲಿ ಚಾಂಡೆಲ್ ಟ್ವೀಟ್ ಮಾಡಿದ್ದರು.




ಟ್ವೀಟಿಗರು ವ್ಯಾಪಕವಾಗಿ ಈ ಟ್ವೀಟನ್ನು ರಿಪೋರ್ಟ್ ಮಾಡಿದ ಪರಿಣಾಮ ಟ್ವಿಟ್ಟರ್ ಸಂಸ್ಥೆ ಈಕೆಯ ಅಕೌಂಟನ್ನೇ ತೆಗೆದುಹಾಕಿತು. ಆದರೆ, ಬಬಿತಾ ಫೋಗಟ್ ಅವರು ರಂಗೋಲಿ ಚಾಂಡೆಲ್ ಅವರನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿದ್ದು ವಿಶೇಷ. ಸತ್ಯ ಮಾತಾಡಿದರೆ ಟ್ವಿಟ್ಟರ್ ಸಹಿಸುವುದಿಲ್ಲ ಎಂದು ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.

ನಿನ್ನೆ ರಂಗೋಲಿ ಚಾಂಡೆಲ್ ಟ್ವಿಟ್ಟರ್ ಅಕೌಂಟ್ ಡಿಲೀಟ್ ಆದ ಬೆನ್ನಲ್ಲೇ ಇವತ್ತು ಬಬಿತಾ ಫೋಗಟ್ ಖಾತೆ ಬಂದ್ ಮಾಡಿ (#SuspendBabitaPhogat) ಎಂಬುದು ಟ್ರೆಂಡ್ ಆಗುತ್ತಿದೆ. ಟ್ವೀಟಿಗರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಈ ಹ್ಯಾಷ್ ಟ್ಯಾಗ್ ಉಪಯೋಗಿಸಿ ವೈರಲ್ ಮಾಡಲು ಯತ್ನಿಸುತ್ತಿದ್ದಾರೆ. ಕೋಮುದ್ವೇಷ ಸೃಷ್ಟಿಸುವ ಮೆಷಿನ್ ಆದ ಈಕೆ ಭಾರತದ ಶಾಂತಿಗೆ ಮಾರಕ ಎಂಬರ್ಥದಲ್ಲಿ ಈ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Youtube Video
First published: April 17, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories