Coronavirus; ಓಣಂ ಹಬ್ಬದ ಬಳಿಕ ಕೇರಳದಲ್ಲಿ ಹೆಚ್ಚಿದ ಕೋವಿಡ್; ಒಂದೇ ದಿನ 30 ಸಾವಿರ ಪ್ರಕರಣಗಳು ದಾಖಲು

ಪಕ್ಕದ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅತಿಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ರಾಜ್ಯಕ್ಕೆ ಸಹ ಆತಂಕ ಎದುರಾಗಿದೆ. ಕೇರಳ ಗಡಿ ಭಾಗ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವವರಿಂದ ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ಈಗ ವಿಧಿಸಿರುವ ನಿಯಮಗಳ ಜೊತೆಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೇರಳದಲ್ಲಿ (Kerala) ಕೊರೋನಾ ನಿಯಂತ್ರಣಕ್ಕೆ ಬಂತು ಎನ್ನುವಷ್ಟರಲ್ಲಿ ಮತ್ತೆ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ತೋರಿದೆ. ಅಲ್ಲಿನ ಪ್ರಸಿದ್ಧ ಓಣಂ (Onam)  ಹಬ್ಬ ಮುಗಿದ ಎರಡು ದಿನಗಳ ಬಳಿಕ ಒಂದೇ ದಿನದಲ್ಲಿ 31,445 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ ಕೆಲವು ತಿಂಗಳುಗಳಲ್ಲಿ ದಾಖಲಾದ ಅತ್ಯಧಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಇದಾಗಿದೆ. ಕಳೆದ 24 ಗಂಟೆಯಲ್ಲಿ 215 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1,65,273 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಇವುಗಳಲ್ಲಿ ಒಟ್ಟು 31,445 ಜನರಲ್ಲಿ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಇದರೊಂದಿಗೆ ಕೇರಳದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ. 19.3 ಕ್ಕೆ ಏರಿಕೆ ಆಗಿದೆ. ಕೇರಳದಲ್ಲಿ ಕೊರೋನಾ ಹೆಮ್ಮಾರಿಯಿಂದ ಒಟ್ಟು 19,972 ಜನರು ಬಲಿಯಾಗಿದ್ದಾರೆ. 20,271 ಜನರು ಈವರೆಗೆ ಚೇತರಿಸಿಕೊಂಡಿದ್ದಾರೆ.

    ಆಗಸ್ಟ್ 23 ರಂದು ಓಣಂ ದಿನದಂದು, ಕೇರಳದಲ್ಲಿ 17,106 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದವು ಮತ್ತು 83 ಜನರು ಸಾವನ್ನಪ್ಪಿದ್ದರು. ಹಬ್ಬದ ಮುನ್ನ ರಾಜ್ಯದ ವಿವಿಧ ಭಾಗಗಳಿಂದ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡು ಬಂದಿತ್ತು. ಆ ಸಮಯದಲ್ಲಿ ರಾಜ್ಯದ ಪರೀಕ್ಷಾ ಪಾಸಿಟಿವಿಟಿ ದರ ಶೇಕಡಾ 17.73 ರಷ್ಟಿತ್ತು. ಮಂಗಳವಾರ, ಪರೀಕ್ಷಾ ಪಾಸಿಟಿವಿಟಿ ದರವು ಶೇ. 18.04 ಕ್ಕೆ ಜಿಗಿದಿದೆ. ಇದು ಇತ್ತೀಚಿನ ವಾರಗಳಲ್ಲಿ ಅತ್ಯಧಿಕವಾಗಿದೆ.


    ಓಣಂ ಹಬ್ಬಕ್ಕೆ ಮುಂಚೆ, ಮಾರುಕಟ್ಟೆಗಳು ಜನರಿಂದ ತುಂಬಿದ್ದವು ಮತ್ತು ಕೋವಿಡ್ -19 ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯು ಅನೇಕ ಘಟನೆಗಳಲ್ಲಿ ವರದಿಯಾಗಿತ್ತು.

    ಕಳೆದ ವರ್ಷ ಕೋವಿಡ್ ನಿರ್ವಹಣೆಗೆ ದೇಶದಲ್ಲೇ ಮಾದರಿ ರಾಜ್ಯ ವೆಂದು ಕರೆಸಿಕೊಳ್ಳುತ್ತಿದ್ದ ಕೇರಳ, ಎರಡನೇ ತರಂಗದ ಸಮಯದಲ್ಲಿ ಮತ್ತು ನಂತರ ಕೊರೋನಾ ವೈರಸ್ ಪ್ರಕರಣಗಳ ಏರಿಕೆಯ ತೀವ್ರತೆ ಎದುರಿಸುತ್ತಿದೆ. ಕಳೆದ ವರ್ಷದ ಓಣಂ ಸಮಯದಲ್ಲೂ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಸಾಂಕ್ರಾಮಿಕ ರೋಗದ ವಿರುದ್ಧ ಕೇರಳದ ಸತತ ಹೋರಾಟ ಹಬ್ಬದ ವೇಳೆಗೆ ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಈ ವರ್ಷದ ಓಣಂ ನಂತರ ಪ್ರಕರಣಗಳ ಗ್ರಾಫ್ ಅನ್ನು ನೋಡುವುದು ಸಹ ಇದೇ ರೀತಿಯ ಹೆಚ್ಚಳವನ್ನು ಸೂಚಿಸುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಇದು ತುಂಬಾ ಮಾರಕವಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

    ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯ ಕುಸಿತ

    ಕರ್ನಾಟಕ ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ರಾಜ್ಯದಲ್ಲಿ ಇಂದು 1224 ಸಾವಿರ ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಕಳೆದ 24 ಗಂಟೆಯಲ್ಲಿ 22 ಜನ ಕೊರೋನಾಗೆ ಬಲಿಯಾಗಿದ್ದಾರೆ. 1668 ಮಂದಿ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು 309 ಕೇಸ್ ಪತ್ತೆಯಾಗಿದ್ದು, ರಾಜಧಾನಿಯಲ್ಲಿ 1 ಸಾವು ದಾಖಲಾಗಿದೆ. ರಾಜ್ಯದಲ್ಲಿ ಕೊರೋನಾ  ಇಂದು ಪಾಸಿಟಿವಿಟ್ ದರ ಶೇ.  0.62 ರಷ್ಟಿದೆ. ಸಾವಿನ ಪ್ರಮಾಣ ಶೇ. 1.79 ರಷ್ಟಿದೆ.

    ಇದನ್ನು ಓದಿ: Sri lanka; ಕೋವಾಕ್ಸಿನ್ ಲಸಿಕೆ ಪಡೆದವರೂ ಈಗ ಶ್ರೀಲಂಕಾಗೆ ಹೋಗಬಹುದು; ಕ್ವಾರಂಟೈನ್ ಸಹ ಇಲ್ಲ!

    ಪಕ್ಕದ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಅತಿಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ರಾಜ್ಯಕ್ಕೆ ಸಹ ಆತಂಕ ಎದುರಾಗಿದೆ. ಕೇರಳ ಗಡಿ ಭಾಗ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವವರಿಂದ ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ಈಗ ವಿಧಿಸಿರುವ ನಿಯಮಗಳ ಜೊತೆಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

      
    Published by:HR Ramesh
    First published: