ಮದ್ಯಕ್ಕೆ ಹೆಚ್ಚಿದ ಬೇಡಿಕೆ; ತನ್ನದೇ ವೈನ್‌ ಸ್ಟೋರ್‌ ಬೀಗ ಒಡೆದು ಪೊಲೀಸರ ಅತಿಥಿಯಾದ ಮಾಲೀಕ

ವೈನ್ಸ್‌ ಸ್ಟೋರ್‌ ಬೀಗ ಒಡೆಯಲು ಮುಂದಾದ ಆರೋಪದ ಮೇಲೆ ರಾಜು ವೈನ್ಸ್‌ ಮಾಲೀಕ ರಾಜು, ಆತನ ಮಗ ಮತ್ತು ಕ್ಯಾಷಿಯರ್‌ ಸೇರಿ ಒಟ್ಟು ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

news18-kannada
Updated:April 23, 2020, 8:40 AM IST
ಮದ್ಯಕ್ಕೆ ಹೆಚ್ಚಿದ ಬೇಡಿಕೆ; ತನ್ನದೇ ವೈನ್‌ ಸ್ಟೋರ್‌ ಬೀಗ ಒಡೆದು ಪೊಲೀಸರ ಅತಿಥಿಯಾದ ಮಾಲೀಕ
ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿರುವ ಪೊಲೀಸರು.
  • Share this:
ಮೈಸೂರು (ಏಪ್ರಿಲ್ 23); ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಕಳೆದ ಒಂದು ತಿಂಗಳಿನಿಂದ ನಿಷೇಧ ಹೇರಲಾಗಿದೆ. ಹೀಗಾಗಿ ಮದ್ಯಕ್ಕೆ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಪರಿಣಾಮ ತನ್ನದೇ ವೈನ್‌ಸ್ಟೋರ್‌ ಬೀಗ ಒಡೆಯಲು ಮುಂದಾದ ಮಾಲೀಕ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಮೈಸೂರಿನ ಕೆ.ಆರ್ ನಗರದ ಸಾಲಿಗ್ರಾಮದಲ್ಲಿ ನಡೆದಿದೆ.

ವೈನ್ಸ್‌ ಸ್ಟೋರ್‌ ಬೀಗ ಒಡೆಯಲು ಮುಂದಾದ ಆರೋಪದ ಮೇಲೆ ರಾಜು ವೈನ್ಸ್‌ ಮಾಲೀಕ ರಾಜು, ಆತನ ಮಗ ಮತ್ತು ಕ್ಯಾಷಿಯರ್‌ ಸೇರಿ ಒಟ್ಟು ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜು ಮತ್ತು ಇತರರು ವೈನ್ಸ್‌ ಸ್ಟೋರ್‌ನಿಂದ ಮದ್ಯವನ್ನು ಅಕ್ರಮವಾಗಿ ಬೇರೆಡೆ ಸಾಗಿಸಿ ಅದನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ನಿಖರ ಮಾಹಿತಿ ತಿಳಿದ ಕೆ.ಆರ್ ನಗರ ಇನ್ಸಪೆಕ್ಟರ್ ರಾಜು ದಿಢೀರ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ವೈನ್ ಸ್ಟೋರ್‌ನಿಂದ ಸಾಗಿಸುತ್ತಿದ್ದ ಮೂರು ಬಾಕ್ಸ್ ಮದ್ಯ ವಶಕ್ಕೆ ಪಡೆಯಲಾಗಿದೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪಾದರಾಯನಪುರ ಗಲಭೆ ಪ್ರಕರಣ; ಐದು ದಿನ ಕಳೆದರೂ ಪತ್ತೆಯಾಗದ ಪ್ರಮುಖ ಆರೋಪಿ ಇರ್ಫಾನ್
First published: April 23, 2020, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading