ಕೊರೋನಾ ಎಫೆಕ್ಟ್‌; ಮದ್ಯದ ಅಂಗಡಿ ತೆರೆಯದ ಸರ್ಕಾರ, ಕಳ್ಳಬಟ್ಟಿ ಇಳಿಸಲು ಮುಂದಾದ ಜನ!

ನಿಖರ ಮಾಹಿತಿ ತಿಳಿದ ಪೊಲೀಸರು ಇಂದು ತಾಂಡಾದ ಹೊರವಲಯದಲ್ಲಿ ಸಂಗ್ರಹಿಸಿದ್ದ ಕಳ್ಳಭಟ್ಟಿ ಸಾರಾಯಿಯನ್ನು ನಾಶ ಮಾಡಿದ್ದಾರೆ. ಅಂದಾಜು 2ಲಕ್ಷ ಮೌಲ್ಯದ ಕಳ್ಳಭಟ್ಟಿ ಸಾರಾಯಿಯನ್ನು ನಾಶ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಳ್ಳಬಟ್ಟಿಯನ್ನು ವಶಪಡಿಸಿಕೊಂಡಿರುವ ಪೊಲೀಸರು.

ಕಳ್ಳಬಟ್ಟಿಯನ್ನು ವಶಪಡಿಸಿಕೊಂಡಿರುವ ಪೊಲೀಸರು.

 • Share this:
  ಬಾಗಲಕೋಟೆ (ಏಪ್ರಿಲ್ 19); ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆಯಲು ಮುಂದಾಗದ ಪರಿಣಾಮ ಜನರೇ ಕಳ್ಳಬಟ್ಟಿ ಇಳಿಸಲು ಮುಂದಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡದಲ್ಲಿ ನಡೆದಿದೆ.

  ಕೊರೋನಾ ಹರಡುವುದನ್ನು ತಡೆಯುವ ಸಲುವಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಾಗಿ ಮದ್ಯ ಮಾರಾಟಕ್ಕೂ ತಡೆ ಒಡ್ಡಲಾಗಿದೆ. ಪರಿಣಾಮ ಮದ್ಯಕ್ಕೆ ಭಾರೀ ಬೇಡಿಕೆ ಶುರುವಾಗಿದ್ದು, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹಾನಾಪೂರ ಎಸ್ ಪಿ ತಾಂಡಾದಲ್ಲಿ ಕಳ್ಳಬಟ್ಟಿ ದಂಧೆ ಜೋರಾಗಿಯೇ ನಡೆಯುತ್ತಿದೆ.

  ನಿಖರ ಮಾಹಿತಿ ತಿಳಿದ ಪೊಲೀಸರು ಇಂದು ತಾಂಡಾದ ಹೊರವಲಯದಲ್ಲಿ ಸಂಗ್ರಹಿಸಿದ್ದ ಕಳ್ಳಭಟ್ಟಿ ಸಾರಾಯಿಯನ್ನು ನಾಶ ಮಾಡಿದ್ದಾರೆ. ಅಂದಾಜು 2ಲಕ್ಷ ಮೌಲ್ಯದ ಕಳ್ಳಭಟ್ಟಿ ಸಾರಾಯಿಯನ್ನು ನಾಶ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

  (ವರದಿ - ರಾಚಪ್ಪ ಬನ್ನಿದಿನ್ನಿ)

   

  ಇದನ್ನೂ ಓದಿ : ಪಾದರಾಯನಪುರ ಹೆಸರಿಗಷ್ಟೇ ಹಾಟ್ ಸ್ಫಾಟ್ ಏರಿಯಾ; ಯಾವುದಕ್ಕೂ ಕ್ಯಾರೇ ಅನ್ನದ ಜನ
  First published: