ಕೊರೋನಾದಿಂದಾಗಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಿ ಇಂದಿಗೆ ಬರೋಬ್ಬರಿ 10 ದಿನ. ಜನ ಸಾಮಾನ್ಯರು ಮನೆಗಳಿಂದ ಹೊರ ಬಾರದೆ ವೈರಸ್ನಿಂದ ಸೋಂಕು ಹರಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಹೀಗಿರುವಾಗಲೇ ಮಿತಿಮೀರಿದ ವೇಗದಲ್ಲಿ ಕಾರು ಡ್ರೈವ್ ಮಾಡಿ ಸೆಲ್ಫ್ ಆಕ್ಸಿಡೆಂಟ್ ಮಾಡಿಕೊಂಡಿರುವ ಘಟನೆ ನಡೆದಿದೆ. ಅಪಘಾತವಾದ ಕಾರಿನಲ್ಲಿ ಸ್ಯಾಂಡಲ್ವುಡ್ ನಟಿ ಸಹ ಇದ್ದರು.
ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, ಈ ಅಪಘಾತ ನಡೆದಾಗ ಕಾರಿನಲ್ಲಿ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಸಹ ಇದ್ದರಂತೆ. ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ಗೆ ಕಾರು ಡಿಕ್ಕಿ ಹೊಡೆದು ಸೆಲ್ಫ್ ಆಕ್ಸಿಡೆಂಟ್ ಆಗಿದೆ.
![]()
ಶರ್ಮಿಳಾ ಮಾಂಡ್ರೆ
ನಟಿ ಶರ್ಮಿಳಾ ಮಾಂಡ್ರೆ ತಮ್ಮ ಸ್ನೇಹಿತ ಲೋಕೇಶ್ ಎಂಬವರ ಜತೆ ಕಾರಿನಲ್ಲಿದ್ದರಂತೆ. ಆದರೆ ಅಪಘಾತವಾದಾಗ ಯಾರು ಕಾರು ಚಾಲನೆ ಮಾಡುತ್ತಿದ್ದರು ಎನ್ನುವುದು ಮಾತ್ರ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಇದನ್ನೂ ಓದಿ: HBD Shivraj: ಹಳ್ಳಿ ಸ್ಟೈಲ್ನಲ್ಲಿ ರಾಗಿ ಮುದ್ದೆ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಸ್ಯಾಂಡಲ್ವುಡ್ ನಟ..!
ಆನ್ಲೈನ್ನಲ್ಲಿ ಅಗತ್ಯ ಸೇವೆಗಳ ಪಾಸ್ ಪಡೆದು ಇವರು ಬೆಳಗಿನ ಜಾವ ಕಾರು ತೆಗೆದುಕೊಂಡು ರಸ್ತೆಗಿಳಿದಿದ್ದಾರೆ ಎನ್ನಲಾಗುತ್ತಿದೆ. ಅತಿ ವೇಗವಾಗಿ ಕಾರು ಓಡಿಸುತ್ತಿದ್ದು, ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಅನುಮಾನಿಸುತ್ತಿದ್ದಾರೆ.
ಅಪಘಾತದ ನಂತರ ಗಾಯಗಳಾಗಿ ಶರ್ಮಿಳಾ ಹಾಗೂ ಲೋಕೇಶ್ ಫೋರ್ಟಿಸ್ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾರೆ. ಅಪಘಾತದಲ್ಲಿ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆಯಂತೆ.
ಇದನ್ನೂ ಓದಿ: Lock Down: ಲಾಕ್ಡೌನ್ನಲ್ಲಿ ಗಂಡ-ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ ಈ ಖ್ಯಾತ ನಟಿ..!
ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರೆಳಿದ ಶರ್ಮಿಳಾ ಹಾಗೂ ಲೋಕೇಶ್ ಜೆಪಿ ನಗರದಲ್ಲಿ ಅಪಘಾತ ಆಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ . ಅಪಘಾತ ನಡೆದು ಸುಮಾರು ಅರ್ಧ ಗಂಟೆಯ ಬಳಿಕ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಾರಿನ ಬಳಿ ಇದ್ದ ಓರ್ವ ಯುವಕ ತಾನೇ ಅಪಘಾತ ಮಾಡಿರುವುದಾಗಿ ಹೇಳಿದ್ದಾನೆ.
ಅಪಘಾತಕ್ಕೀಡಾಗಿರುವ ಜಾಗ್ವಾರ್ ಕಾರು ಜಾನ್ ಥಾಮಸ್ ಎಂಬುವರ ಹೆಸರಲ್ಲಿದೆ. ಕಾರಿನ ಪರಿಶೀಲನೆ ಬಳಿಕ ನಟಿ ಕಾರಿನಲ್ಲಿ ಪ್ರಯಾಣಿಸಿದ್ದು ಬೆಳಕಿಗೆ ಬಂದಿದೆ. ಡ್ರಿಂಕ್ ಆ್ಯಂಡ್ ಡ್ರೈವ್ ಮಾಡಿದ್ದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ ಪೊಲೀಸರು.
Urvashi Rautela: ಸಖತ್ ಹಾಟಾಗಿ ಬ್ಯಾಕ್ಲೆಸ್ ಪೋಸ್ ಕೊಟ್ಟ ಐರಾವತ ಬೆಡಗಿ ಊರ್ವಶಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ