ಸಿವಿಲ್​ ಪೊಲೀಸ್ ವಾರ್ಡನ್ ಆದ್ರು ಪುಟ್ಟಗೌರಿ: ರಂಜನಿ ರಾಘವನ್ ಈಗ ಕೊರೋನಾ ವಾರಿಯರ್!

ಸಿವಿಲ್ ಪೊಲೀಸ್ ವಾರ್ಡನ್ ಆಗಲು ಸ್ಯಾಂಲ್​ವುಡ್​ ಸುಂದರಿ, ಕಿರುತೆರೆ ನಟಿ ರಂಜನಿ ರಾಘವನ್ ಕೂಡ ಉತ್ಸಾಹ ತೋರಿದ್ದಾರೆ. ಆನ್​ಲೈನ್​ಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಈಗಾಗಲೇ ಕೆಲಸಕ್ಕೂ ಇಳಿದಿದ್ದಾರೆ. ಹೌದು, ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ರಾಜ್ಯಾದ್ಯಂತ ಮನೆಮಾತಾದ ಚೆಲುವೆ ರಂಜನಿ ರಾಘವನ್. ನಂತರ ರಾಜಹಂಸ, ಟಕ್ಕರ್, ಸತ್ಯಂ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್​ವುಡ್​ನಲ್ಲೂ ಸುದ್ದಿಯಾಗಿದ್ದಾರೆ.

news18-kannada
Updated:July 16, 2020, 5:21 PM IST
ಸಿವಿಲ್​ ಪೊಲೀಸ್ ವಾರ್ಡನ್ ಆದ್ರು ಪುಟ್ಟಗೌರಿ: ರಂಜನಿ ರಾಘವನ್ ಈಗ ಕೊರೋನಾ ವಾರಿಯರ್!
ರಂಜನಿ ರಾಘವನ್​
  • Share this:
ದಿನೇ ದಿನೇ ಕೊವಿಡ್ 19 ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿಯೇ ಕೊರೊನಾ ವಿರುದ್ಧದ ಎರಡನೇ ಸುತ್ತಿನ ಹೋರಾಟ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಕಂಪ್ಲೀಟ್ ಸೀಲ್ಡೌನ್ ಮಾಡಿದೆ.

ಆದರೆ ನಗರದಾದ್ಯಂತ ನೂರಾರು ಪೊಲೀಸ್ ಸಿಬ್ಬಂದಿಗೇ ಕೊರೊನಾ ಸೋಂಕು ತಗುಲಿದ್ದು, ಹಲವಾರು ಪೊಲೀಸ್ ಠಾಣೆಗಳೂ ಸಹ ಸೀಲ್​ಡೌನ್ ಆಗಿವೆ. ಹೀಗಾಗಿಯೇ ನಗರದಾದ್ಯಂತ ಕಾನೂನು ಸುವ್ಯವಸ್ಥೆಯ ಜತೆಗೆ ಲಾಕ್​​ಡೌನ್ ಅನ್ನೂ ಕಟ್ಟುನಿಟ್ಟಾಗಿ ಪಾಲಿಸುವುದು ನಗರ ಪೊಲೀಸರಿಗೆ ಕಷ್ಟಸಾಧ್ಯ. ಇದೇ ನಿಟ್ಟಿನಲ್ಲಿ ಲಾಕ್​​ಡೌನ್​ಗೂ ಮುನ್ನವೇ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಸ್ವಯಂಸೇವಕರಾಗಲು ಆಸಕ್ತ ಯುವಕ ಯುವತಿಯರಿಗೆ ಮುಂದಾಗಲು ಕರೆ ನೀಡಿದ್ದರು.

ಸಿವಿಲ್ ಪೊಲೀಸ್ ವಾರ್ಡನ್​ಗಳಾಗಿ ತಮ್ಮ ತಮ್ಮ ಏರಿಯಾಗಳಲ್ಲಿ ಲಾಕ್​​ಡೌನ್ ಹಾಗೂ ಸೀಲ್​ಡೌನ್​ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಹಕರಿಸುವಂತೆ ಮನವಿ ಮಾಡಿದ್ದರು. ಆಗ ಕೇವಲ ಎರಡೇ ದಿನಗಳಲ್ಲಿ ಬರೋಬ್ಬರಿ 10 ಸಾವಿರ ಮಂದಿ ಯುವ, ಯುವತಿಯರು ಸ್ವಯಂಸೇವಕರಾಗಲು ಅರ್ಜಿ ಸಲ್ಲಿಸಿದ್ದರು. ಕಾಲೇಜು ವಿದ್ಯಾರ್ಥಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ಇದ್ದರು.

ಇದನ್ನೂ ಓದಿ: ಹೊಸ ಲುಕ್​ನಲ್ಲಿ ಮಹೇಶ್​ ಬಾಬು: ಸಾಮಾಜಿಕ ಜಾಲತಾಣದಲ್ಲಿ ಡಿಪಿ ಬದಲಿಸಿದ ಪ್ರಿನ್ಸ್​

ವಿಶೇಷ ಅಂದರೆ ಹೀಗೆ ಸಿವಿಲ್ ಪೊಲೀಸ್ ವಾರ್ಡನ್ ಆಗಲು ಸ್ಯಾಂಲ್​ವುಡ್​ ಸುಂದರಿ, ಕಿರುತೆರೆ ನಟಿ ರಂಜನಿ ರಾಘವನ್ ಕೂಡ ಉತ್ಸಾಹ ತೋರಿದ್ದಾರೆ. ಆನ್​ಲೈನ್​ಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಈಗಾಗಲೇ ಕೆಲಸಕ್ಕೂ ಇಳಿದಿದ್ದಾರೆ. ಹೌದು, ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ರಾಜ್ಯಾದ್ಯಂತ ಮನೆಮಾತಾದ ಚೆಲುವೆ ರಂಜನಿ ರಾಘವನ್. ನಂತರ ರಾಜಹಂಸ, ಟಕ್ಕರ್, ಸತ್ಯಂ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್​ವುಡ್​ನಲ್ಲೂ ಸುದ್ದಿಯಾಗಿದ್ದಾರೆ.
View this post on Instagram

Hello all! We all know that COVID cases are rapidly increasing in Bengaluru. It has been a very difficult phase for everyone including the police department. Bengaluru Police has invited residents to volunteer for Civil Police Warden to combat COVID. And I am also serving as a Civil Police Warden. I would suggest youths who are physically fit and willing to volunteer to apply for the same ASAP. log on to http://bcp.gov.in 😊 I’ll try to update more about this. Stay safe ❤️ ನಮಸ್ಕಾರ. ನಿಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕೋವಿಡ್ ಕೇಸಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಕರೋನಾ ನಿಯಂತ್ರಣ ಹಾಗೂ ಕರೋನಾ ನಿಯಮಗಳನ್ನು ಜಾರಿಗೊಳಿಸುವುದು ಸರಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೂ ಅತಿ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸದ್ಯ ಪೊಲೀಸರಿಗೆ ಜನರ ಸೇವೆಯ ಅವಶ್ಯಕತೆ ಇದ್ದು, ಬೆಂಗಳೂರಿನ ನಿವಾಸಿಗಳನ್ನು ಸಿವಿಲ್ ಪೊಲೀಸ್ ವಾರ್ಡನ್ ಆಗಿ ಸೇವೆಮಾಡುವಂತೆ ಕರೆ ನೀಡಿದ್ದಾರೆ. ನಾನು ಕೂಡ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೆ, ಸದೃಢ ಹಾಗೂ ಸೇವಾ ಮನಸ್ಸಿನ ಯುವಜನತೆಯನ್ನು ಸ್ವಯಂಸೇವಕರಾಗಿ ಈ ಕಾರ್ಯದಲ್ಲಿ ಸೇರುವಂತೆ ಸೂಚಿಸುತ್ತೇನೆ. 😊 @bhaskarrao @bengalurucitypolice #bangalorecitypolice #civilpolicewarden #covidwarriors


A post shared by ರಂಜನಿ ರಾಘವನ್ (@ranjani.raghavan) on


ಸದ್ಯ ರಂಜನಿ ಕನ್ನಡತಿ ಎಂಬ ಧಾರಾವಾಹಿಯಲ್ಲಿ ಕನ್ನಡ ಶಿಕ್ಷಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಒಂದು ವಾರ ಸಂಫೂರ್ಣ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ಸೀರಿಯಲ್​ಗಳ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿದೆ. ಹೀಗಾಗಿಯೇ ಮನೆಯಲ್ಲಿ ಕೂರುವ ಬದಲು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನಾದರೂ ಮಾಡಲು ಮನಸ್ಸು ಮಾಡಿರುವ ರಂಜನಿ ಈಗ ವಿದ್ಯಾರಣ್ಯಪುರದಲ್ಲಿ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದಾರೆ.


ನಿಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕೋವಿಡ್ ಪ್ರರಣಗಳು ದಿನೇ ದಿನೇ  ಹೆಚ್ಚುತ್ತಿವೆ. ಹಾಗಾಗಿ ಕರೋನಾ ನಿಯಂತ್ರಣ ಹಾಗೂ ಕೊರೋನಾ  ನಿಯಮಗಳನ್ನು  ಜಾರಿಗೊಳಿಸುವುದು ಸರ್ಕಾರಕ್ಕೆ ಹಾಗೂ  ಪೊಲೀಸ್  ಇಲಾಖೆಗೂ  ದೊಡ್ಡ  ಸವಾಲಾಗಿದೆ.  ಈ ನಿಟ್ಟಿನಲ್ಲಿ ಸದ್ಯ ಪೊಲೀಸರಿಗೆ ಜನರ ಸೇವೆಯ ಅವಶ್ಯಕತೆ ಇದ್ದು, ಬೆಂಗಳೂರಿನ ನಿವಾಸಿಗಳನ್ನು ಸಿವಿಲ್ ಪೊಲೀಸ್ ವಾರ್ಡನ್ ಆಗಿ ಸೇವೆ ಮಾಡುವಂತೆ  ಕರೆ  ನೀಡಿದ್ದಾರೆ.  ನಾನು  ಕೂಡ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೆ, ಸದೃಢ ಹಾಗೂ ಸೇವಾ ಮನಸ್ಸಿನ ಯುವಜನತೆಯನ್ನು ಸ್ವಯಂಸೇವಕರಾಗಿ ಈ ಕಾರ್ಯಕ್ಕೆ ಜೊತೆಯಾಗಿ ಎಂದೂ ರಂಜನಿ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗಾಗಿ ರೆಮೊ ಹಾಡಿರುವ ಸಖತ್ ಹಾಡು ಇಲ್ಲಿದೆ..!
Published by: Anitha E
First published: July 16, 2020, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading