ಕೊರೋನಾ ವಿರುದ್ಧದ ಹೋರಾಟಕ್ಕೆ ನಟಿ ಅಮೂಲ್ಯ ಸಾಥ್; ಬಡವರಗೆ ಅಕ್ಕಿ- ಮಾಸ್ಕ್ ವಿತರಣೆ
ಲಾಕ್ ಡೌನ್ನಿಂದಾಗಿ ಆಹಾರ ನೀರಿಗಾಗಿ ಪರದಾಡುತ್ತಿರುವ ಬಡ ಜನರ ಕಷ್ಟಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಿನನಿತ್ಯ ಶ್ರಮಿಸುತ್ತಿದೆ. ಅದರಂತೆ ರಾಜರಾಜೇಶ್ವರಿ ನಗರದ ಬಳಿಯ ಆರೆಸ್ಸೆಸ್ ಕಚೇರಿ ಕೂಡ ಬಡ ಜನರ ನೆರವಿಗೆ ಧಾವಿಸಿ ಅವರಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ನೀಡುತ್ತಿದೆ. ಇದನ್ನು ಮನಗಂಡ ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್, ರಾಜರಾಜೇಶ್ವರಿ ನಗರದ ಆರೆಸ್ಸೆಸ್ ಕಚೇರಿಗೆ ತೆರಳಿ ಅಕ್ಕಿ ಮತ್ತು ಮಾಸ್ಕ್ ವಿತರಿಸಿದ್ದಾರೆ.
ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್, ರಾಜರಾಜೇಶ್ವರಿ ನಗರದ ಆರೆಸ್ಸೆಸ್ ಕಚೇರಿಗೆ ತೆರಳಿ ಅಕ್ಕಿ ಮತ್ತು ಮಾಸ್ಕ್ ವಿತರಿಸಿದ್ದಾರೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಸ್ಯಾಂಡಲ್ವುಡ್ನ ಅನೇಕ ನಟ-ನಟಿಯರು ಕೈಜೋಡಿಸುತ್ತಿದ್ದಾರೆ. ಲಾಕ್ ಡೌನ್ ಸಂದರ್ಭ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಜನರ ನೆರವಿಗಾಗಿ ಹಲವಾರು ನಟ-ನಟಿಯರ ಶ್ರಮಿಸುತ್ತಿದ್ದಾರೆ. ಟ್ರಸ್ಟ್ಗಳು, ಎನ್ಜಿಓಗಳು ಕೂಡ ಜನರ ಕಷ್ಟವನ್ನು ಅರಿತು ಸಹಾಯ ಮಾಡುತ್ತಿದೆ. ಅದರಂತೆ ಸ್ಯಾಂಡಲ್ವುಡ್ ನಟಿ ಅಮೂಲ್ಯ ಕೂಡ ತಮ್ಮ ಕೈಯಲ್ಲಾದಷ್ಟು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲಾಕ್ ಡೌನ್ನಿಂದಾಗಿ ಆಹಾರ ನೀರಿಗಾಗಿ ಪರದಾಡುತ್ತಿರುವ ಬಡ ಜನರ ಕಷ್ಟಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಿನನಿತ್ಯ ಶ್ರಮಿಸುತ್ತಿದೆ. ಅದರಂತೆ ರಾಜರಾಜೇಶ್ವರಿ ನಗರದ ಬಳಿಯ ಆರೆಸ್ಸೆಸ್ ಕಚೇರಿ ಕೂಡ ಬಡ ಜನರ ನೆರವಿಗೆ ಧಾವಿಸಿ ಅವರಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ನೀಡುತ್ತಿದೆ. ಇದನ್ನು ಮನಗಂಡ ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್, ರಾಜರಾಜೇಶ್ವರಿ ನಗರದ ಆರೆಸ್ಸೆಸ್ ಕಚೇರಿಗೆ ತೆರಳಿ ಅಕ್ಕಿ ಮತ್ತು ಮಾಸ್ಕ್ ವಿತರಿಸಿದ್ದಾರೆ.
ದೇಶದಲ್ಲಿ ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳಾದಾಗ ಮತ್ತು ಈಗಿನ ಕೋರೋನಾ ವಿಪತ್ತಿನ ಸಂದರ್ಭದಲ್ಲಿಯೂ ಯಾವುದೇ ಜಾತಿ, ಧರ್ಮ ಎಂದು ಭೇದ ಮಾಡದೆ ಪ್ರತಿಯೊಬ್ಬರೂ ಭಾರತೀಯರು ಎಂದು ಸಹಾಯ ಮಾಡುವ RSS ಸಂಘಟನೆಗೆ ನಮ್ಮ ಕಿರು ಸಹಾಯ ನೀಡಿದ ಕ್ಷಣ. Be Good Do Good. pic.twitter.com/x4L8pkrmbH
ಇನ್ನೂ ಈ ವಿಚಾರವನ್ನು ನಟಿ ಅಮೂಲ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ದೇಶದಲ್ಲಿ ಪ್ರವಾಹ ಭೂಕಂಪದಂತ ಪ್ರಕೃತಿ ವಿಕೋಪಗಳಾದಾಗ ಮತ್ತು ಈಗಿನ ಕೊರೋನಾ ವಿಪತ್ತಿನ ಸಂದರ್ಭದಲ್ಲಿಯೂ ಯಾವುದೇ ಜಾತಿ, ಧರ್ಮ ಎಂದು ಭೇದ ಮಾಡದೇ ಪ್ರತಿಯೊಬ್ಬರೂ ಭಾರತೀಯರು ಎಂದು ಸಹಾಯ ಮಾಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಗೆ ನಮ್ಮ ಕಿರು ಸಹಾಯ" ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಅಕ್ಕಿ ವಿತರಿಸುವ ಫೋಟೋವನ್ನು ಶೇರ್ ಮಾಡಿದ್ದಾರೆ