ಲಾಕ್ಡೌನ್ನಿಂದಾಗಿ ಎಲ್ಲರೂ ಈಗ ಮನೆಗಳಲ್ಲೇ ಬಂಧಿಯಾಗಿದ್ದಾರೆ. ದೇಶದಲ್ಲಿ ಲಾಕ್ಡೌನ್ ಆದೇಶ ನೀಡಿ ಇಂದಿಗೆ 10 ದಿನ. ಎಲ್ಲರೂ ಮನೆಗಳಲ್ಲೇ ಇದ್ದು ಕೊರೋನಾ ಸೋಂಕು ಹರಡದಂತೆ ಎಚ್ಚರವಹಿಸಬೇಕೆಂದು ಈ ಕ್ರಮ ಕೈಗೊಳ್ಳಲಾಗಿದೆ.
ಲಾಕ್ಡೌನ್ನಿಂದಾಗಿ ಈ ಸಲ ಸೆಲೆಬ್ರಿಟಿಗಳು ಮನೆಗಳಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಾಗಿದೆ. ಅದರಲ್ಲೂ ಮನೆಯಲ್ಲೇ ಪ್ರೀತಿ ಪಾತ್ರರಿಂದ ಕೇಕ್ ಮಾಡಿಸಿಕೊಂಡು ಖುಷಿಯಾಗಿ ಹಾಗೂ ವಿಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಸ್ಯಾಂಡಲ್ವುಡ್ ನಟ ಶಿವರಾಜ್ ಕೆ.ಆರ್.ಪೇಟೆ ಅವರೂ ಹಳ್ಳಿಯಲ್ಲಿ ಅಲ್ಲಿನ ಸ್ಟೈಲ್ನಲ್ಲೇ ಬರ್ತ್ಡೇ ಆಚರಿಸಿಕೊಂಡಿದ್ದಾರೆ.
ಹೌದು, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಹಾಸ್ಯ ಕಲಾವಿದ ಶಿವರಾಜ್ ಕೆ.ಆರ್. ಪೇಟೆ ಅವರು ತಮ್ಮ ಕುಟುಂಬದೊಂದಿಗೆ ರಾಗಿ ಕೇಕ್ ಕತ್ತರಿಸಿಸುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಿಸಿದ ಚಿತ್ರಗಳನ್ನೂ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
![]()
ರಾಗಿ ಕೇಕ್
ಇನ್ನು ಲಾಕ್ಡೌನ್ ವೇಳೆ ಯುಗಾದಿ ಹಬ್ಬ ಸಹ ಬಂದಿದ್ದು, ಅಂದು ಹೋಳಿಗೆ ಮಾಡಲು ಶಿವರಾಜ್ ಏನು ಮಾಡಿದ್ದರು ಅನ್ನೋಕೆ ಸಾಕ್ಷಿ ಇಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ