• Home
  • »
  • News
  • »
  • coronavirus-latest-news
  • »
  • Prakash Rai: ಭಿಕ್ಷೆ ಬೇಡಿ ಅಥವಾ ಸಾಲ ಮಾಡಿಯಾದರೂ ಕಾರ್ಮಿಕರಿಗೆ ಸಹಾಯ ಮಾಡುವೆ ಎಂದ ಪ್ರಕಾಶ್​ ರೈ..!

Prakash Rai: ಭಿಕ್ಷೆ ಬೇಡಿ ಅಥವಾ ಸಾಲ ಮಾಡಿಯಾದರೂ ಕಾರ್ಮಿಕರಿಗೆ ಸಹಾಯ ಮಾಡುವೆ ಎಂದ ಪ್ರಕಾಶ್​ ರೈ..!

ಪ್ರಕಾಶ್​ ರೈ

ಪ್ರಕಾಶ್​ ರೈ

Prakash Raj Tweet: ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಶ್ರಮಿಕ್​ ರೈಲು ಹಾಗೂ ಬಸ್ಸುಗಳ ವ್ಯವಸ್ಥೆ ಮಾಡಿಸಿದೆ. ಅದಕ್ಕೂ ಮೊದಲು ಸಾಕಷ್ಟು ಮಂದಿ ಕಾರ್ಮಿಕರು ತಮ್ಮ ಊರು ಹಾಗೂ ರಾಜ್ಯಗಳಿಗೆ ಸೇರಲು ಕಾಲ್ನಡಿಗೆಯಲ್ಲೇ ಹೊರಟಿದ್ದರು. ಅನ್ನ-ನೀರು ಇಲ್ಲದೆ ಪರದಾಡಿದ ವಲಸೆ ಕಾರ್ಮಿಕರ ಕಷ್ಟಕ್ಕೆ ಸಾಕಷ್ಟು ಸಂಘ ಸಂಸ್ಥೆಗಳು ಹಾಗೂ ಸೆಲೆಬ್ರಿಟಿಗಳು ಸ್ಪಂದಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಕೊರೋನಾ ಲಾಕ್​ಡೌನ್​ನಿಂದಾಗಿ ಕೆಲಸ ಮಾಡಲು ಬಂದಿದ್ದ ಕಾರ್ಮಿಕರ ವಲಸೆ ನಡೆಯುತ್ತಿದೆ. ಲಾಕ್​ಡೌನ್​ ಆರಂಭವಾದಾಗಿನಿಂದ ವಲಸೆ ಕಾರ್ಮಿಕರು ತಮ್ಮ ತಮ್ಮ ಗೂಡುಗಳನ್ನು ಸೇರಿಕೊಳ್ಳಲು ತುಂಬಾ ಕಷ್ಟಪಡುತ್ತಿದ್ದಾರೆ. 


ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಶ್ರಮಿಕ್​ ರೈಲು ಹಾಗೂ ಬಸ್ಸುಗಳ ವ್ಯವಸ್ಥೆ ಮಾಡಿಸಿದೆ. ಅದಕ್ಕೂ ಮೊದಲು ಸಾಕಷ್ಟು ಮಂದಿ ಕಾರ್ಮಿಕರು ತಮ್ಮ ಊರು ಹಾಗೂ ರಾಜ್ಯಗಳಿಗೆ ಸೇರಲು ಕಾಲ್ನಡಿಗೆಯಲ್ಲೇ ಹೊರಟಿದ್ದರು. ಅನ್ನ-ನೀರು ಇಲ್ಲದೆ ಪರದಾಡಿದ ವಲಸೆ ಕಾರ್ಮಿಕರ ಕಷ್ಟಕ್ಕೆ ಸಾಕಷ್ಟು ಸಂಘ ಸಂಸ್ಥೆಗಳು ಹಾಗೂ ಸೆಲೆಬ್ರಿಟಿಗಳು ಸ್ಪಂದಿಸುತ್ತಿದ್ದಾರೆ.


ಇದಕ್ಕೆ ನಟ ಪ್ರಕಾಶ್​ ರೈ ಸಹ ಹೊರತಾಗಿಲ್ಲ. ಲಾಕ್​​ಡೌನ್​ ಆರಂಭವಾದಾಗಿನಿಂದಲೂ ಪ್ರಕಾಶ್​ ರೈ ಬಡ ಜನರು ಹಾಗೂ ಕೂಲಿ ಕಾರ್ಮಿಕರಿಗೆ ಅನ್ನಾಹಾರ ನೀಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗಲೂ ಸಹ ಭಿಕ್ಷೆ ಬೇಡಿ ಅಥವಾ ಸಾಲ ಮಾಡಿಯಾದರೂ ವಲಸೆ ಕಾರ್ಮಿಕರಿಗೆ ನೆರವಾಗುವುದಾಗಿ ಟ್ವೀಟ್​ ಮಾಡಿದ್ದಾರೆ.ವಲಸೆ ಕಾರ್ಮಿಕರಿಗೆ ನನಗೆ ತಿರುಗಿ ನೀಡಲಾಗುವುದಿಲ್ಲ. ಆದರೆ ಅವರು ಮನೆ ಸೇರಿದ ನಂತರ ನನ್ನನ್ನು ನೆನೆಸಿಕೊಳ್ಳುತ್ತಾರೆ. ನನಗೆ ಅಷ್ಟು ಸಾಕು ಎಂದು ಪ್ರಕಾಶ್​ ರೈ ಟ್ವೀಟ್​ ಮಾಡಿದ್ದಾರೆ. ಈ ಹಿಂದೆ ಸಹ ಪ್ರಕಾಶ್ ರೈ ಸಾಲ ಮಾಡಿಯಾದರೂ ಬಡವರ ಸಹಾಯ ಮಾಡುವುದಾಗಿ ಟ್ವೀಟ್​ ಮಾಡಿದ್ದರು. ಆ ಟ್ವೀಟ್​ ಆಗ ಚರ್ಚೆಗೀಡಾಗಿತ್ತು.


Sudharani: ಸಿನಿ ಪಯಣದ ಆ ದಿನಗಳ ನೆನಪಿನಲ್ಲಿ ಸುಧಾರಾಣಿ: ಹಳೇ ಸಿನಿಮಾಗಳ ಅಪರೂಪದ ಚಿತ್ರಗಳು ಇಲ್ಲಿವೆ..!


Published by:Anitha E
First published: