ತಿರುಪತಿ ಆಸ್ತಿ ಮಾರಲು ಮುಂದಾದ ಜಗನ್​​ ಸರ್ಕಾರ ವಿರುದ್ಧ ಪವನ್​​ ಕಲ್ಯಾಣ್​​ ಆಕ್ರೋಶ - ಉಪವಾಸ ಸತ್ಯಾಗ್ರಹಕ್ಕೆ ಕರೆ

ಇದಕ್ಕೆ ಪೂರಕವಾಗಿ ಉತ್ತರಿಸಿರುವ ಪವನ್ ಕಲ್ಯಾಣ್, ಟಿಟಿಡಿ ಈಗ ಮಾಡಲು ಹೊರಟಿರುವ ಕೆಲಸ ದೇಶದ ಬೇರೆ ದೇವಸ್ಥಾನಗಳಿಗೂ ಕೆಟ್ಟ ಉದಾಹರಣೆಯಾಗಲಿದೆ. ಹೀಗಾಗಿಯೇ ಆಂಧ್ರ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು ಎಂದು ನಾವು ಒತ್ತಡ ಹೇರುತ್ತೇವೆ ಎಂದಿದ್ದಾರೆ.

ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್,  ಜಗನ್​​

ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್, ಜಗನ್​​

  • Share this:
ತಿರುಪತಿ(ಮೇ.26): ದೇಶದ ಮೂಲೆ ಮೂಲೆಗಳಲ್ಲಿ ಭಕ್ತರು ತಿರುಪತಿ ವೆಂಕಟೇಶ್ವರನ ಹೆಸರಿನಲ್ಲಿ ತಮ್ಮ ಆಸ್ತಿಗಳನ್ನು ವಿಲ್ ಮಾಡಿದ್ದಾರೆ. ಹೀಗೆ ತಿಮ್ಮಪ್ಪನ ಹೆಸರಿನಲ್ಲಿ ತಮಿಳುನಾಡು ಹಾಗೂ ರಿಷಿಕೇಶದಲ್ಲಿಯೂ ಕಡಿಮೆ ವಿಸ್ತಾರದ; ರಸ್ತೆ ಹಾಗೂ ಇತರೆ ಸೌಲಭ್ಯಗಳಿಂದ ದೂರವಿರುವ; ಏನೂ ಬೆಳೆಯಲಾಗದ 50 ಜಾಗಗಳನ್ನು ಮಾಡಲಾಗಿದೆ. ಇದನ್ನು ಗುರುತಿಸಿದ್ದ ಟಿಟಿಡಿ ಟ್ರಸ್ಟ್ 2016ರಲ್ಲೇ ಅವುಗಳ ಮಾರಾಟ ಮಾಡಲು ಮುಂದಾಗಿತ್ತು.

ಇತ್ತೀಚೆಗಷ್ಟೇ ತಿರುಪತಿಗೆ ಸೇರಿದ ಜಾಗದ ಮಾರಾಟದ ಪ್ರಕ್ರಿಯೆಯೂ ಕಾರಣಾಂತರಗಳಿಂದ ತಡವಾಯ್ತು ಎಂಬ ವಿಚಾರವನ್ನು ಟಿಟಿಡಿ ಬಹಿರಂಗಪಡಿಸಿತ್ತು. ಈ ಬೆನ್ನಲ್ಲೀಗ ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಸ್ತಿ ಮೇಲೆ ಮುಖ್ಯಮಂತ್ರಿ ಜಗನ್​​ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​​ಆರ್ ಕಾಂಗ್ರೆಸ್​ ಸರ್ಕಾರದ ಕಣ್ಣು ಬಿದ್ದಿದೆ ಎಂದು ವಿರೋಧ ಪಕ್ಷಗಳು ಇದರ ವಿರುದ್ಧ ಬಹಿರಂಗ ಸಮರ ಸಾರಿವೆ.

ಬಿಜೆಪಿ, ಸಿಪಿಐ, ಸಿಪಿಎಂ ಸೇರಿದಂತೆ ಹಲವು ಪಕ್ಷಗಳು ಆಂಧ್ರಪ್ರದೇಶ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿವೆ. ಈ ವಿಚಾರ ಸಂಬಂಧ ವೈಎಸ್ಆರ್​ ಕಾಂಗ್ರೆಸ್​​ ನೇತೃತ್ವದ ಆಂಧ್ರ ಸರ್ಕಾರದ ವಿರುದ್ಧ ಧ್ವನಿಯೆತ್ತಲು ಬಿಜೆಪಿ ನಾಯಕರು ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವರ್​​ ಸ್ಟಾರ್​​ ಪವನ್​​ ಕಲ್ಯಾಣ್​​​​ಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿಕೊಂಡಿದ್ದರು. ಸರ್ಕಾರಗಳ ಕಪಿಮುಷ್ಠಿಯಿಂದ ದೇವಾಲಯಗಳ ಆಡಳಿತವನ್ನು ಹೊರತರಬೇಕು ಎಂದು ತೇಜಸ್ವಿ ಸೂರ್ಯ ವಿನಂತಿಸಿದ್ದರು.ಇದಕ್ಕೆ ಪೂರಕವಾಗಿ ಉತ್ತರಿಸಿರುವ ಪವನ್ ಕಲ್ಯಾಣ್, ಟಿಟಿಡಿ ಈಗ ಮಾಡಲು ಹೊರಟಿರುವ ಕೆಲಸ ದೇಶದ ಬೇರೆ ದೇವಸ್ಥಾನಗಳಿಗೂ ಕೆಟ್ಟ ಉದಾಹರಣೆಯಾಗಲಿದೆ. ಹೀಗಾಗಿಯೇ ಆಂಧ್ರ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು ಎಂದು ನಾವು ಒತ್ತಡ ಹೇರುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಕೊರೋನಾ ಬಾಧೆಯಲ್ಲಿ ಕರ್ನಾಟಕ ನಂ.10 – ಇಲ್ಲಿದೆ ರಾಜ್ಯವಾರು ಪಟ್ಟಿ

ಜತೆಗೆ ಬಿಜೆಪಿ ಕರೆ ನೀಡಿರುವ ಹೋರಾಟಕ್ಕೆ ಜನಸೇನಾ ಪಕ್ಷವೂ ಬೆಂಬಲ ಸೂಚಿಸಿದ್ದು, ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆವರೆಗೆ ಉಪವಾಸ ಮಾಡುವ ಮೂಲಕ ಹೋರಾಟಕ್ಕೆ ಧ್ವನಿಗೂಡಿಸಲು ಪವನ್ ಕಲ್ಯಾಣ್ ಕರೆ ನೀಡಿದ್ದಾರೆ.

ಮತ್ತೊಂದೆಡೆ ಜಗನ್ ಸರ್ಕಾರವೂ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಹೀಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸೇರಿದ ಆಸ್ತಿಯನ್ನು ಮಾರುತ್ತಿರುವುದು ಇದೇ ಮೊದಲೇನಲ್ಲ. 1974ರಿಂದ 2014ರ 40 ವರ್ಷಗಳ ಅವಧಿಯಲ್ಲಿ 129 ಆಸ್ತಿಗಳನ್ನ ಮಾರಾಟ ಮಾಡಲಾಗಿದೆ. ಅದರಲ್ಲೂ ಟಿಡಿಪಿ ಸರ್ಕಾರವಿದ್ದಾಗಲೇ ಅತಿಹೆಚ್ಚು ಆಸ್ತಿ ಮಾರಾಟ ಮಾಡಿರೋದು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
First published: