ACB Raids in Bangalore - ಬೆಳ್ಳಂಬೆಳಗ್ಗೆ ಭ್ರಷ್ಟ ಪೊಲೀಸ್​ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಸಹಕಾರ ನಗರದ ಎಸಿಪಿ ಪ್ರಭುಶಂಕರ್ ಮನೆ ಸೇರಿದಂತೆ ಒಟ್ಟು  ನಗರದ ಏಳು ಕಡೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ ಕಚೇರಿ.

ಭ್ರಷ್ಟಾಚಾರ ನಿಗ್ರಹ ದಳ ಕಚೇರಿ.

  • Share this:
ಬೆಂಗಳೂರು(ಮೇ.22): ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಆರೋಪಿ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಎಸಿಪಿ ಪ್ರಭುಶಂಕರ್, ಇನ್ಸ್ ಪೆಕ್ಟರ್ ಅಜಯ್, ನಿರಂಜನ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.  ಸಿಗರೇಟ್ ಡೀಲರ್ಸ್ ಮತ್ತು ತಂಬಾಕು ಡೀಲರ್ಸ್ ಗಳಿಂದ ಕೊಟ್ಯಂತರ ಲಂಚ ಪಡೆದ ಪ್ರಕರಣ ಇವರ ಮಲೆ ಇತ್ತು. ಹಾಗಾಗಿ ಈ ದಾಳಿ ನಡೆದಿದೆ. ಸಹಕಾರ ನಗರದ ಎಸಿಪಿ ಪ್ರಭುಶಂಕರ್ ಮನೆ ಸೇರಿದಂತೆ ಒಟ್ಟು  ನಗರದ ಏಳು ಕಡೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ನೆನ್ನೆಯಷ್ಟೆ ಮೂರು ಜನ ಭ್ರಷ್ಟ ಅಧಿಕಾರಿಗಳ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಲಾಕ್ ಡೌನ್ ವೇಳೆ ಸಿಗರೇಟ್ ಮತ್ತು ತಂಬಾಕು ಡೀಲರ್​​ಗಳಿಂದ  ಹಾಗೂ ನಕಲಿ ಮಾಸ್ಕ್ ಮಾರಾಟಗಾರರಿಂದ ಹಣ ಪಡೆದ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಎಸಿಪಿ ಮತ್ತು ಇಬ್ಬರು ಇನ್ಸ್‌ಪಕ್ಟರ್​​ ಮೇಲೆ ಎಸಿಬಿಯಲ್ಲಿ ಪ್ರತ್ಯೇಕ ಎಫ್.ಐ.ಆರ್ ದಾಖಲಾಗಿ ಅಮಾನತುಗೊಂಡಿದ್ದರು.

ಇದನ್ನೂ ಓದಿ : ಬೆಂಗಳೂರಿನಿಂದ ಇಂದು ಉತ್ತರ ರಾಜ್ಯಗಳಿಗೆ 7 ವಿಶೇಷ ಶ್ರಮಿಕ್​​​​ ರೈಲು: 10500 ಸಾವಿರ ವಲಸಿಗರು ತಾಯ್ನಾಡಿಗೆ ವಾಪಸ್​​​

2 ಕೋಟಿ ರೂಪಾಯಿ ಲಂಚ, ಅಕ್ರಮ ಹಣ ಸುಲಿಗೆ ಆರೋಪ ಇವರ ಮೇಲಿತ್ತು, ಅಮಾನತುಗೊಂಡಿರುವ ಸಿಸಿಬಿ ಎಸಿಪಿ ಪ್ರಭುಶಂಕರ್, ಇನ್ಸ್‌ಪೆಕ್ಟರ್‌ಗಳಾದ ನಿರಂಜನ್ ಅಜಯ್ ವಿರುದ್ಧ ಎಸಿಬಿಯಲ್ಲಿ ಒಟ್ಟು ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುವಂತೆ ಡಿಜಿ ಅಂಡ್ ಐಜಿಪಿ ಎಸಿಬಿಗೆ ವರ್ಗಾವಣೆ ಮಾಡಿದ್ದರು.
First published: