HOME » NEWS » Coronavirus-latest-news » AAP ATISHI AND AKSHAY MARATHE TEST POSITIVE FOR COVID 19 RH

ದೆಹಲಿ ಆಮ್​ ಆದ್ಮಿ ಪಕ್ಷದ ಶಾಸಕಿ ಅತಿಶಿಗೆ ಕೊರೋನಾ; ಎಎಪಿಯ ಮೂವರು ಶಾಸಕರಿಗೆ ಸೋಂಕು

ಎಎಪಿಯಲ್ಲಿ ಮಾರಕ ಸೋಂಕಿಗೆ ತುತ್ತಾಗಿರುವ ಮೂರನೆ ಶಾಸಕರು ಇವರಾಗಿದ್ದಾರೆ. ಇದಕ್ಕೂ ಮುನ್ನ ವಿಶೇಷ್ ರವಿ (ಕಾರೋಲ್ ಬಾಗ್) ಮತ್ತು ರಾಜ್​ಕುಮಾರ್ ಆನಂದ್ (ಪಟೇಲ್ ನಗರ) ಶಾಸಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

news18-kannada
Updated:June 17, 2020, 6:18 PM IST
ದೆಹಲಿ ಆಮ್​ ಆದ್ಮಿ ಪಕ್ಷದ ಶಾಸಕಿ ಅತಿಶಿಗೆ ಕೊರೋನಾ; ಎಎಪಿಯ ಮೂವರು ಶಾಸಕರಿಗೆ ಸೋಂಕು
ಅತಿಶಿ
  • Share this:
ನವದೆಹಲಿ: ಆಮ್​ ಆದ್ಮಿ ಪಾರ್ಟಿ (ಎಎಪಿ) ಶಾಸಕಿ ಅತಿಶಿ ಹಾಗೂ ಪಕ್ಷದ ಮಾಧ್ಯಮ ಸಂಯೋಜಕ ಅಕ್ಷಯ್ ಮರಾಥೆ ಅವರಿಗೆ ಮಾರಕ ಕೊರೋನಾ ವೈರಸ್ ಸೋಂಕು ತಗುಲಿರುವುದು ಬುಧವಾರ ಬೆಳಗ್ಗೆ ದೃಢಪಟ್ಟಿದೆ. ಇಬ್ಬರು ಸದ್ಯ ಹೋಮ್​ ಕ್ವಾರಂಟೈನ್​ಗೆ ಒಳಪಡಿಸಿ, ನಿಗಾ ವಹಿಸಲಾಗಿದೆ.

ದಕ್ಷಿಣ ದೆಹಲಿಯ ಕಲ್ಕಂಜ್​ ಕ್ಷೇತ್ರದ ಶಾಸಕರಾಗಿರುವ 39 ವರ್ಷದ ಅತಿಶಿ ಅವರು ಮಂಗಳವಾರ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಬಳಿಕ ಅವರು ಕೊರೋನಾ ವೈರಸ್ ಪರೀಕ್ಷೆ ಮಾಡಿಸಿಕೊಂಡಾಗ ಅವರಿಗೆ ಮಾರಕ ಸೋಂಕು ತಗುಲಿರುವುದು ದೃಢಪಟ್ಟಿದೆ.

ಎಎಪಿಯಲ್ಲಿ ಮಾರಕ ಸೋಂಕಿಗೆ ತುತ್ತಾಗಿರುವ ಮೂರನೆ ಶಾಸಕರು ಇವರಾಗಿದ್ದಾರೆ. ಇದಕ್ಕೂ ಮುನ್ನ ವಿಶೇಷ್ ರವಿ (ಕಾರೋಲ್ ಬಾಗ್) ಮತ್ತು ರಾಜ್​ಕುಮಾರ್ ಆನಂದ್ (ಪಟೇಲ್ ನಗರ) ಶಾಸಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಅತಿಶಿ ಅವರಿಗೆ ಬೆಂಬಲ ಸೂಚಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅತಿಶಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ದಿನ ಅನಾರೋಗ್ಯದಿಂದ ಬಳಲುತ್ತಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಅವರನ್ನು ಮಂಗಳವಾರ ತಡರಾತ್ರಿ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಎಂದು ಬಂದಿದೆ. ನಾಳೆ ಮತ್ತೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಇದನ್ನು ಓದಿ: India China Border tensions: ಇಂಡೋ-ಚೀನಾ ಗಡಿ ವಿವಾದ; ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ-ಜೈಶಂಕರ್ ಫೋನ್‌ನಲ್ಲಿ ಚರ್ಚೆ
ಅವರು ಈಗಲೂ ಜ್ವರದಿಂದ ಬಳಲುತ್ತಿದ್ದು, ಇಂದು ಕೋವಿಡ್-19 ಪರೀಕ್ಷೆಯ ವರದಿ ನೆಗೆಟಿವ್ ಎಂದು ಬಂದಿದೆ. 24 ಗಂಟೆಗಳ ಬಳಿಕ ಮತ್ತೆ ಅವರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 
First published: June 17, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories