ವಿಜಯಪುರ: SSLC ವಿದ್ಯಾರ್ಥಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದ ಯುವಕ ಸಾವು

ಕಾಪಿ ಚೀಟಿ ನೀಡಲು ಹೋಗಿದ್ದ ಈ ಯವಕನ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಆಗ ದಿಢೀರ್​​ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿಜಯಪುರ(ಜೂ.27): ಎಸ್​ಎಸ್​ಎಲ್​​ಸಿ ವಿದ್ಯಾರ್ಥಿಯೋರ್ವನಿಗೆ ಕಾಪಿ ಚೀಟಿ ನೀಡಲು ಪರೀಕ್ಷಾ ಕೇಂದ್ರ ಹೋಗಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಕಾಪಿ ಚೀಟಿ ನೀಡಲು ಹೋಗಿದ್ದ ಈ ಯವಕನ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಆಗ ದಿಢೀರ್​​ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

  ಇನ್ನು, ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯಲ್ಲಿರುವ ವಿಶ್ವಚೇತನ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಗಣಿತ ಎಕ್ಸಾಂ ಬರೆಯುತ್ತಿದ್ದ ವಿದ್ಯಾರ್ಥಿಗೆ ಕಾಪಿ ಚೀಟಿ ನೀಡಲು ಯುವಕ ಹೋಗಿದ್ದ. ಈ ವೇಳೆ ಯುವಕನ ಹಿಡಿಯಲು ಬೆನ್ನತ್ತಿದ್ದ ಪೊಲೀಸರು ಲಾಠಿ ಏಟು ಬೀಸಿದ್ಧಾರೆ. ಈ ವೇಳೆ ಪ್ರಾಣ ಹೋಗಿದೆಯಾ? ಎಂಬ ಅನುಮಾನ ವ್ಯಕ್ತವಾಗಿದೆ.

  ಇನ್ನು, ಓಡುತ್ತಿದ್ದಾಗ ಸ್ಥಳದಲ್ಲೇ ಅಸ್ವಸ್ಥಗೊಂಡ 19 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಬಸವನ ಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಸಾಗರ ಚಲವಾದಿ ಸಾವಿಗೀಡಾದ ಯುವಕ ಎನ್ನಲಾಗಿದೆ. ಈತ ಮೊದಲೇ ಹೃದಯ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ. ಪರಿಚಯಸ್ಥರಿಗೆ ಕಾಪಿ ಚೀಟಿ ಕೊಡಲು ತೆರಳಿದ್ದ ಯುವಕನಿಗೆ ಹೀಗಾಗಿದೆ.

  ಇದನ್ನೂ ಓದಿ: ದೇಶದಲ್ಲಿ ಕೋವಿಡ್​​-19 ಕಾವು: ಒಂದೇ ದಿನ 18,552 ಕೇಸ್​ ಪತ್ತೆ; 5 ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

  ಪೊಲೀಸರು ಬೆನ್ನತ್ತಿದ್ದಾಗ ಗಾಬರಿಗೊಂಡು ಯುವಕ ಸಾವನ್ನಪ್ಪಿರಬಹುದಾ ಎಂಬ ಅನುಮಾನ ಮೂಡಿದೆ. ಇನ್ನೇನು ಮರಣೋತ್ತರ ಪರೀಕ್ಷೆಯ ನಂತರ ಸತ್ಯಾಸತ್ಯತೆಯೇನು ಎನ್ನುವುದು ತಿಳಿಯಲಿದೆ.
  First published: