ಬೆಂಗಳೂರು ( 16); ಲಾಕ್ಡೌನ್ನಿಂದ ದೇಶದ ವಿವಿದೆಡೆ ವಲಸೆ ಕಾರ್ಮಿಕರಿಗೆ ಉದ್ಯೋಗವಿಲ್ಲದೆ ಪರಿತಪಿಸುವಂತಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನ ತಮ್ಮ ಊರುಗಳಿಗೆ ಕಳುಹಿಸಿಕೊಡಲು ಶ್ರಮಿಕ್ ಹೆಸರಿನಲ್ಲಿ ವಿಶೇಷ ರೈಲು ಸೇವೆ ಆರಂಭಿಸಿದೆ. ಈಗಾಗಲೆ ಸಾವಿರಾರು ಜನ ವಲಸಿಗರು ಈ ಶ್ರಮಿಕ್ ರೈಲಿನ ಸಹಾಯದಿಂದ ತಮ್ಮ ರಾಜ್ಯಗಳಿಗೆ ಮರಳಿದ್ದು, ಇಂದು ಸಹ ಬೆಂಗಳೂರಿನಿಂದ ದೇಶದ ವಿವಿದೆಡೆ ರೈಲುಗಳು ಸಂಚರಿಸಲಿವೆ.
ಶ್ರಮಿಕ್ ರೈಲಿನ ಯೋಜನೆಯಲ್ಲಿ ಬೆಂಗಳೂರಿನ ಚಿಕ್ಕಬಾಣಾವರದಿಂದ ಇಂದು ಮೂರು ರೈಲುಗಳು ಉತ್ತರ ಭಾರತಕ್ಕೆ ವಲಸಿಗರನ್ನ ಕರೆದೊಯ್ಯಲಿವೆ.
ಬೆಂಗಳೂರಿನ ಚಿಕ್ಕಬಾಣಾವಾರದಿಂದ ಮಧ್ಯಾಹ್ನ 2ಕ್ಕೆ ಹೊರಡುವ ರೈಲಿನಲ್ಲಿ ಬಿಹಾರ ರಾಜ್ಯದ ದರ್ಬಾಂಗಗೆ 1440 ಜನ ಪ್ರಯಾಣಿಸಲಿದ್ದು, ಸಂಜೆ 4ಕ್ಕೆ ಹೊರಡಲಿರುವ ರೈಲಿನಲ್ಲಿ ಬಿಹಾರದ ಪುರ್ನಿಯಾಗೆ 1280 ಜನ ಪ್ರಯಾಣ ಬೆಳಸಲಿದ್ದಾರೆ. ಹಾಗೂ ಸಂಜೆ 6ಕ್ಕೆ ಹೊರಡುವ ಶ್ರಮಿಕ್ ರೈಲಿನಲ್ಲಿ ಉತ್ತರ ಪ್ರದೇಶದ ಲಕ್ನೋಗೆ 1520 ಜನ ವಲಸಿಗರ ಪ್ರಯಾಣ ಬೆಳೆಸಲಿದೆ. ಇಂದು ಒಂದೇ ದಿನ ಬೆಂಗಳೂರಿನಿಂದ 4420 ಜನ ವಲಸಿಗರು ತಾಯ್ನಾಡಿಗೆ ಮರಳಲಿರುವುದು ವಿಶೇಷ.
ಇನ್ನೂ ಬೆಂಗಳೂರಿನ ವಿವಿದೆಡೆ ನೆಲೆಸಿರುವ ವಲಸಿಗರನ್ನ ಬಿಬಿಎಂಪಿ ಅಧಿಕಾರಿಗಳು ಬಿಎಂಟಿಸಿ ಬಸ್ಗಳ ಮುಖಾಂತಾ ಕರೆತರಲಿದ್ದು, ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಬಳಿಕವಷ್ಟೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಕಾಗುವುದು. ಚಿಕ್ಕಬಾಣಾವರ ರೈಲಿ ನಿಲ್ದಾಣದ ಬಳಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ : ಇಂದು ದೆಹಲಿಯಿಂದ ಆಗಮಿಸಿದ ಎರಡನೇ ವಿಶೇಷ ರೈಲು; ಎಲ್ಲಾ ಪ್ರಯಾಣಿಕರ ಕ್ವಾರಂಟೈನ್ಗೆ ಸಿದ್ಧತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ