Covid-19 ಸೋಂಕು ವೀರ್ಯಾಣುಗಳ ಮೇಲೆ ಎಂತಹ ಪರಿಣಾಮ ಬೀರುತ್ತೆ.. ಪುರುಷರ ಆರೋಗ್ಯದಲ್ಲಿ ಏನೆಲ್ಲಾ ಆಗುತ್ತೆ?

ಪುರುಷರ ಫಲವತ್ತತೆಯ ಮೇಲೆ ಕೊರೊನಾ ವೈರಸ್ ನ ಪರಿಣಾಮವನ್ನು ಎತ್ತಿ ತೋರಿಸಿದ ಮೊದಲ ಅಧ್ಯಯನ ಇದಲ್ಲ. 2020 ರಲ್ಲಿ ನಡೆದ ಒಂದು ಅಧ್ಯಯನದಲ್ಲಿ ಸಹ, ಸೋಂಕಿಗೆ ಒಳಗಾದ ಪುರುಷರ ವೀರ್ಯದಲ್ಲಿ ಕೊರೊನಾ ವೈರಸ್ ಇರುವಿಕೆಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಕೊರೋನಾ ವೈರಸ್ ಸೋಂಕನ್ನು(Coronavirus Infection ) ಎದುರಿಸುವುದು ಅಷ್ಟೊಂದು ಸುಲಭದ ಮಾತಲ್ಲ, ಏಕೆಂದರೆ ಈ ಕಾಯಿಲೆ ವಾಸಿಯಾದರೂ ಸಹ ನಮ್ಮ ದೇಹದ ಮೇಲೆ ಇದರಿಂದಾಗುವ ಪರಿಣಾಮಗಳು ಅಪಾರ ಎಂದು ಹೇಳುತ್ತಿವೆ ಕೆಲವು ಅಧ್ಯಯನಗಳು. (Studies Claim) ಇಡೀ ಉಸಿರಾಟದ ವ್ಯವಸ್ಥೆಯನ್ನೇ (Respiratory System) ಕೆಡೆಸಿಬಿಡುವ ಈ ಸೋಂಕು ನಮ್ಮ ದೇಹದ ಅಂಗಾಂಗಗಳ (Bodys Organs) ಮೇಲೆ ಅನೇಕ ತರಹದ ಪರಿಣಾಮಗಳನ್ನು ಬೀರುತ್ತದೆ.  ನಿಮ್ಮ ಕೂದಲು ಉದುರುವಿಕೆಯಿಂದ ( Hair Loss) ಹಿಡಿದು ಅನೇಕ ಸಮಸ್ಯೆಗಳನ್ನು ಈ ಸಾಂಕ್ರಾಮಿಕ ರೋಗದ ಚೇತರಿಕೆಯ ನಂತರದ ಹಂತದಲ್ಲಿ ನಾವು ಅನುಭವಿಸುತ್ತೇವೆ. ಈಗ ಒಂದು ಹೊಸ ಅಧ್ಯಯನವು ಕೋವಿಡ್ ನ ಆರಂಭಿಕ ಸೋಂಕಿನ ನಂತರ ನಮ್ಮ ದೇಹದಲ್ಲಿನ ವೀರ್ಯಾಣುಗಳ (Sperm Count) ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬರುವುದೆಂದು ಸೂಚಿಸಿದೆ.

ಈ ಅಧ್ಯಯನವು ಏನನ್ನು ಬಹಿರಂಗಪಡಿಸಿದೆ ನೋಡಿ
ಫರ್ಟಿಲಿಟಿ ಆಂಡ್ ಸ್ಟೆರಿಲಿಟಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕೊರೊನಾ ವೈರಸ್ ಸೋಂಕುಗಳಿಂದ ಚೇತರಿಸಿಕೊಂಡ ಎರಡು ತಿಂಗಳ ನಂತರವೂ ಸಹ ಪುರುಷರು ಕಡಿಮೆ ವೀರ್ಯಾಣುಗಳ ಸಂಖ್ಯೆಯನ್ನು ಅನುಭವಿಸಬಹುದು ಎಂದು ಬಹಿರಂಗಪಡಿಸುತ್ತದೆ. ತೀವ್ರ ಉಸಿರಾಟದ ತೊಂದರೆಯನ್ನು ಹೊಂದಿದ್ದ ಆದರೆ ಕೊರೊನಾ ವೈರಸ್ ಸೋಂಕಿಗೆ ಒಳಗಾದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ 120 ಬೆಲ್ಜಿಯನ್ ಪುರುಷರ ಮೇಲೆ ಈ ಅಧ್ಯಯನವನ್ನು ನಡೆಸಲಾಯಿತು. ಎಲ್ಲರೂ ಆರ್ ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಪರೀಕ್ಷಿಸಲ್ಪಟ್ಟವರು ಅಥವಾ ಕೋವಿಡ್-19 ರೋಗಲಕ್ಷಣಗಳಿಗೆ ಒಳಗಾಗಿದ್ದರು ಮತ್ತು ನಂತರ ಸೀರಮ್ ಕೊರೊನಾ ವೈರಸ್ ಪ್ರತಿಕಾಯಗಳಿಗೆ ಪಾಸಿಟಿವ್ ಎಂದು ಪರೀಕ್ಷಿಸಲಾಯಿತು.

ಇದನ್ನೂ ಓದಿ: Vaccine For Children: ಜ.3ರಿಂದ ಮಕ್ಕಳಿಗೆ ಕೊರೋನಾ ಲಸಿಕೆ, ಇಂದಿನಿಂದ ಕೋ-ವಿನ್​ ವೆಬ್​ಸೈಟ್​ನಲ್ಲಿ ನೋಂದಣಿ ಆರಂಭ!

ಈ ಅಧ್ಯಯನವನ್ನು ಪ್ರಾರಂಭಿಸುವ ಮೊದಲು ಸ್ಪರ್ಧಿಗಳು ಕನಿಷ್ಠ ಒಂದು ವಾರದವರೆಗೆ ಯಾವುದೇ ಪ್ರಮುಖ ಕೋವಿಡ್-19 ರೋಗಲಕ್ಷಣಗಳಿಂದ ಮುಕ್ತರಾಗಿರಬೇಕು. ಈ ಗುಂಪಿನ ಜನರ ಸರಾಸರಿ ವಯಸ್ಸು 18 ರಿಂದ 69 ವರ್ಷಗಳ ನಡುವೆ ಇತ್ತು. ಅವರಲ್ಲಿ ಕೇವಲ 16 ಜನರು ಮಾತ್ರ ತೀವ್ರ ಕೋವಿಡ್ ಸೋಂಕನ್ನು ಹೊಂದುವ ಅಪಾಯದಲ್ಲಿದ್ದರು ಎಂದು ಹೇಳಲಾಗಿದೆ.

ಈ ಅಧ್ಯಯನವನ್ನು ಹೇಗೆ ನಡೆಸಲಾಯಿತು?
ಅಧ್ಯಯನದ ಕೊನೆಯಲ್ಲಿ, ಅಧ್ಯಯನಕ್ಕೆ ಮೊದಲು ಎಂಟು ಸ್ಪರ್ಧಿಗಳಿಗೆ ಫಲವತ್ತತೆ ಸಮಸ್ಯೆಗಳು ಇದ್ದವು ಎಂದು ತಿಳಿದು ಬಂದಿದೆ. ಹೆಚ್ಚಿನ ಪುರುಷರಿಗೆ ತೀವ್ರ ಸೋಂಕು ಇರಲಿಲ್ಲ ಮತ್ತು ಅವರಲ್ಲಿ ಕೇವಲ ಐದು ಜನರನ್ನು ಮಾತ್ರ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಪರ್ಧಿಗಳು ತಮ್ಮ ಅಧ್ಯಯನದ ವಿವಿಧ ಹಂತಗಳಲ್ಲಿ ತಮ್ಮ ವೀರ್ಯ ಮತ್ತು ರಕ್ತದ ಮಾದರಿಯನ್ನು ಒದಗಿಸುವಂತೆ ಕೇಳಲಾಯಿತು.

ಇದಲ್ಲದೆ, ಅವರು ತಮ್ಮ ಕೋವಿಡ್-19 ರೋಗಲಕ್ಷಣಗಳ ಬಗ್ಗೆ ವಿವರಗಳನ್ನು ಒದಗಿಸಬೇಕಾಗಿದ್ದ ಪ್ರಶ್ನಾವಳಿಯನ್ನು ಸಹ ಭರ್ತಿ ಮಾಡಿದರು. ಮೊದಲ ಮಾದರಿಯನ್ನು ಕೋವಿಡ್-19 ರಿಂದ ವ್ಯಕ್ತಿಯು ಚೇತರಿಸಿಕೊಂಡ 53 ದಿನಗಳ ನಂತರ ತೆಗೆದುಕೊಳ್ಳಲಾಗಿದೆ. ಸಂಶೋಧನೆಯು ಮೂಲತಃ ವೀರ್ಯದ ಮಾದರಿಗಳಲ್ಲಿ ಎರಡು ವಿಷಯಗಳಾದ ವೀರ್ಯದ ಚಲನೆ ಮತ್ತು ವೀರ್ಯಾಣುಗಳ ಸಂಖ್ಯೆಯನ್ನು ಪರಿಶೀಲಿಸಿದೆ.

ಈ ಅಧ್ಯಯನ ಕಂಡುಕೊಂಡಿದ್ದು ಏನು?
ಕೋವಿಡ್-19 ಹೊಂದಿರುವ ಮೊದಲ ತಿಂಗಳಲ್ಲಿ ಸುಮಾರು ಶೇಕಡಾ 60 ರಷ್ಟು ಸ್ಪರ್ಧಿಗಳು ಸರಾಸರಿ ವೀರ್ಯದ ಚಲನೆಯನ್ನು ಕಡಿಮೆ ಹೊಂದಿದ್ದಾರೆ ಎಂದು ಅಧ್ಯಯನದ ಸಂಶೋಧನೆಗಳು ಬಹಿರಂಗಪಡಿಸಿವೆ. ಕೊರೊನಾ ವೈರಸ್ ಸೋಂಕಿಗೆ ಒಳಗಾದ ಒಂದರಿಂದ ಎರಡು ತಿಂಗಳ ನಂತರ ಶೇಕಡಾ 37 ರಷ್ಟು ಜನರು ಇದೇ ಸಮಸ್ಯೆಯಿಂದ ಬಳಲುತ್ತಿದ್ದರು.

ಇದನ್ನೂ ಓದಿ: Explained: ಮತ್ತೆ ಕೊರೊನಾ ಸ್ಫೋಟ ಗ್ಯಾರಂಟಿ? ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಸೋಂಕು

ಇತರ ಅಧ್ಯಯನಗಳು
ಪುರುಷರ ಫಲವತ್ತತೆಯ ಮೇಲೆ ಕೊರೊನಾ ವೈರಸ್ ನ ಪರಿಣಾಮವನ್ನು ಎತ್ತಿ ತೋರಿಸಿದ ಮೊದಲ ಅಧ್ಯಯನ ಇದಲ್ಲ. 2020 ರಲ್ಲಿ ನಡೆದ ಒಂದು ಅಧ್ಯಯನದಲ್ಲಿ ಸಹ, ಸೋಂಕಿಗೆ ಒಳಗಾದ ಪುರುಷರ ವೀರ್ಯದಲ್ಲಿ ಕೊರೊನಾ ವೈರಸ್ ಇರುವಿಕೆಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಆದರೆ ವೀರ್ಯಾಣುಗಳ ಸಂಖ್ಯೆ ಕಡಿಮೆ ಎಂದರೆ ಬಂಜೆತನ ಎಂದರ್ಥವಲ್ಲ. ಈ ತೊಡಕು ಕೆಲವು ತಿಂಗಳುಗಳವರೆಗೆ ಮಾತ್ರ ಇರುತ್ತದೆ ಎಂದು ಹೇಳಲಾಗುತ್ತಿದೆ ಮತ್ತು ಈ ವಿಷಯವನ್ನು ದೃಢೀಕರಿಸಲು ಇನ್ನೂ ಹೆಚ್ಚಿನ ಅಧ್ಯಯನಗಳ ಅಗತ್ಯವಿದೆ ಎಂದು ಸಹ ಹೇಳಲಾಗುತ್ತಿದೆ.
Published by:vanithasanjevani vanithasanjevani
First published: