ಬೆಂಗಳೂರಲ್ಲಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೋನಾ; ಪರೀಕ್ಷೆ ಬರೆದ ಎಲ್ಲರೂ ಕ್ವಾರಂಟೈನ್‌?

ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮನೆಯಿಂದ ಹೊರ ಬರುವಂತಿಲ್ಲ ಎಂದು ಕೈಗೆ ಮುದ್ರೆ ಒತ್ತೆಲಾಗಿತ್ತು. ಆದರೆ, ಆಕೆ ಆ ಮುದ್ರೆಯನ್ನು ಅಳಿಸಿ ಹಾಕಿ ಕಣ್‌ ತಪ್ಪಿಸಿ ಪರೀಕ್ಷೆಗೆ ತೆರಳಿದ್ದಾಳೆ. ಆಕೆಯ ಸ್ವ್ಯಾಬ್ ರಿಪೋರ್ಟ್‌ ಸಂಬಂಧ ಅಧಿಕಾರಿಗಳಿಗೂ ಆಕೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂನ್ 19); ಕೊರೋನಾ ಕಾರಣದಿಂದಾಗಿ ತಾತ್ಕಾಲಿಕವಾಗಿ ಮುಂದೂಡಲಾಗಿದ್ದ ಪಿಯುಸಿ ಇಂಗ್ಲೀಷ್‌ ಪರೀಕ್ಷೆಯನ್ನು ಜೂನ್‌.18 ರಂದು ನಡೆಸಲಾಗಿತ್ತು. ಆದರೆ ಜಯನಗರ 4 ನೇ ಬ್ಲಾಕ್ ನಲ್ಲಿ ನಿನ್ನೆ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಇದೀಗ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ.

ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮನೆಯಿಂದ ಹೊರ ಬರುವಂತಿಲ್ಲ ಎಂದು ಕೈಗೆ ಮುದ್ರೆ ಒತ್ತೆಲಾಗಿತ್ತು. ಆದರೆ, ಆಕೆ ಆ ಮುದ್ರೆಯನ್ನು ಅಳಿಸಿ ಹಾಕಿ ಕಣ್‌ ತಪ್ಪಿಸಿ ಪರೀಕ್ಷೆಗೆ ತೆರಳಿದ್ದಾಳೆ. ಆಕೆಯ ಸ್ವ್ಯಾಬ್ ರಿಪೋರ್ಟ್‌ ಸಂಬಂಧ ಅಧಿಕಾರಿಗಳಿಗೂ ಆಕೆ ಮಾಹಿತಿ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಗದಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅವಧಿ ಮೀರಿದ ಮದ್ಯ ದಂಧೆ; ಅಬಕಾರಿ ಸಚಿವರೇ ಒಮ್ಮೆ ಇತ್ತ ಗಮನಿಸಿ!

ಇಂದು ಆಕೆಯ ಕೊರೋನಾ ಪರೀಕ್ಷಾ ವರದಿ ಸಿಕ್ಕಿದ್ದು, ಅದರಲ್ಲಿ ಆಕೆಗೆ ಕೊರೋನಾ ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ವಿದ್ಯಾರ್ಥಿನಿಯ ಈ ಕೆಲಸದಿಂದಾಗಿ ಇದೀಗ ಆಕೆಯ ಜೊತೆ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳನ್ನೂ ಹಾಗೂ ಕಾಲೇಜು ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಇದು ಅಧಿಕಾರಿಗಳಿಗೂ ತಲೆನೋವಿನ ವಿಚಾರವಾಗಿ ಪರಿಣಮಿಸಿದೆ.
First published: