ದೊಡ್ಡವರ ಮಕ್ಕಳಿಂದ ಲಾಕ್ ಡೌನ್ ಉಲ್ಲಂಘನೆ: ಕೊಡಗಿನ ಹೋಂ ಸ್ಟೇಗೆ ಬೀಗ ...!!

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯತ್​ ವ್ಯಾಪ್ತಿಯ ಗರಂಗದೂರಿನಲ್ಲಿರುವ ವುಡ್ ಪೆಕರ್ ಎನ್ನುವ ಹೋಂ ಸ್ಟೇಗೆ ಬುಧವಾರ ಸಂಜೆ ಬಂದಿದ್ದಾರೆ

ಹೋಮ್​ ಸ್ಟೇ

ಹೋಮ್​ ಸ್ಟೇ

  • Share this:
    ಕೊಡಗು(ಮೇ.08): ಕೊರೋನಾ ನಿಯಂತ್ರಿಸಲು ದೇಶಕ್ಕೆ ನಷ್ಟವಾದರೂ ಸರ್ಕಾರ ದೇಶವನ್ನೇ ಲಾಕ್ ಡೌನ್ ಮಾಡಿದೆ. ಆದರೆ, ದೊಡ್ಡವರ ಮಕ್ಕಳು ಮಾತ್ರ ಲಾಕ್ ಡೌನ್ ಕಾನೂನನ್ನೇ ಉಲ್ಲಂಘಿಸಿ ತಮ್ಮಿಷ್ಟದಂತೆ ಓಡಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಇದಕ್ಕೆ ಸ್ವಷ್ಟ ಉದಾಹರಣೆ ಕೊಡಗು ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಸಾಕ್ಷಿಯಾಗಿದೆ. 

    ನಿವೃತ್ತ ಪೊಲೀಸ್ ಅಧಿಕಾರಿ ಎನ್ನಲಾಗಿರುವ ನವೀನ್ ಚೆಲ್ಲಮ್ ಎಂಬುವವರ ಮಗ ರೋಷನ್ ಎಂಬಾತ ಬೆಂಗಳೂರಿನ ತನ್ನ ಇಬ್ಬರು ಸ್ನೇಹಿತರಾದ ಗೌಡನಪಾಳ್ಯದ ಸುಜನ್ ಮತ್ತು ಜಯನಗರದ ರಘುರಾಮ್ ಜೊತೆಗೆ ಕೊಡಗಿನಲ್ಲಿರುವ ತಮ್ಮದೇ ರೆಸಾರ್ಟ್‍ಗೆ ಬಂದು ಎಂಜಾಯ್ ಮಾಡಲು ಮುಂದಾಗಿದ್ದು ಬಯಲಾಗಿದೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯತ್​ ವ್ಯಾಪ್ತಿಯ ಗರಂಗದೂರಿನಲ್ಲಿರುವ ವುಡ್ ಪೆಕರ್ ಎನ್ನುವ ಹೋಂ ಸ್ಟೇಗೆ ಬುಧವಾರ ಸಂಜೆ ಬಂದಿದ್ದಾರೆ.

    ಬಳಿಕ ಅಂದು ರಾತ್ರಿಯೇ ಡಿಜೆ ಸೌಂಡ್ ಹಾಕಿ ಎಂಜಾಯ್ ಮಾಡಿರುವುದು ಊರಿನವರಿಗೆ ಗೊತ್ತಾಗಿದೆ. ಇದರಿಂದ ಎಚ್ಚೆತ್ತುಕೊಂಡ ಊರಿನವರು ನವೀನ್ ಚೆಲ್ಲಮ್ ಅವರಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ, ನವೀನ್ ಚೆಲ್ಲಮ್ ನನಗೆ ಐಜಿ ಗೊತ್ತು,  ಸಿಎಂ ಯಡಿಯೂರಪ್ಪ ಗೊತ್ತು. ನನ್ನ ತಂಟೆಗೆ ಯಾರೇ ಬಂದರೂ ಅವರಿಗೆ ಬೂಟ್ ಕಾಲಿನಲ್ಲಿ ಒದ್ದು ಕೇಸ್ ಹಾಕಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

    ನನ್ನ ಮಗ ಅಷ್ಟೇ ಅಲ್ಲ, ಮುಂದಿನ ವಾರದಲ್ಲಿ ಐಜಿ ಜೊತೆಗೆ ಇನ್ನೂ ಮೂರು ಜನರನ್ನು ಅಲ್ಲಿಗೆ ಕರೆದುಕೊಂಡು ಬರುತ್ತೇನೆ. ಆವಾಗ ಅದ್ಯಾವನು ಏನ್ ಮಾಡುತ್ತಾನೋ ಮಾಡಲಿ ಎಂದು ಊರಿನವರಿಗೆ ಬೆದರಿಕೆ ಹಾಕಿದ್ದಾರೆ. ಇದೆಲ್ಲವೂ ಫೋನ್​ನಲ್ಲಿ ರೆಕಾರ್ಡ್ ಆಗಿದೆ. ವಿಷಯ ತಿಳಿದು ಹರದೂರು ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ಟಾಸ್ಕ್ ಪೋರ್ಸ್ ಟೀಮ್ ಇಂದು ಹೋಂ ಸ್ಪೇಗೆ ಬೀಗ ಜಡಿದು ಸೀಲ್ ಮಾಡಿದ್ದಾರೆ.

    ಇದನ್ನೂ ಓದಿ : ಮನೆ ಸಮೀಪ ಕ್ವಾರಂಟೈನ್ ಮಾಡಿರುವ ತಬ್ಲಿಘಿಗಳನ್ನು ಸ್ಥಳಾಂತರಿಸುವಂತೆ ಶಾಸಕ ತಿಪ್ಪಾರೆಡ್ಡಿ ಒತ್ತಾಯ

    ಬುಧವಾರ ಸಂಜೆ ಬಂದು ಹೋಂ ಸ್ಟೇನಲ್ಲಿ ತಂಗಿದ್ದು ನಿನ್ನೆಯೇ ಅಧಿಕಾರಿಗಳು ಹೋಂ ಸ್ಟೇ ಬಳಿ ಹೋಗಿ ವಿಚಾರಣೆ ಮಾಡಿದ್ದಾರೆ. ಇವರನ್ನು ಕ್ವಾರಂಟೈನ್ ಮಾಡದೆ ಬೆಂಗಳೂರಿಗೆ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಇದೆಲ್ಲವೂ ಅಧಿಕಾರಿಗಳ ನಡೆಯ ಮೇಲೆ ಸಾಕಷ್ಟು ಅನುಮಾನ ಮೂಡಿಸಿದೆ.
    First published: